ಭಾರತ vs ಇಂಗ್ಲೆಂಡ್: 4ನೇ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣವಾದ ನಾಲ್ಕು ಅಂಶಗಳು

1-2 ಅಂತರದಿಂದ ಸರಣಿಯಲ್ಲಿ ಹಿಂದುಳಿದಿದ್ದ ಟೀಮ್ ಇಂಡಿಯಾಗೆ ಗುರುವಾರ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದರಷ್ಟೇ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಅವಕಾಶವಿತ್ತು. ಹೀಗಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಟಾಸ್ ಸೋತಾಗ ಭಾರತೀಯ ಅಭಿಮಾನಿಗಳು ಮತ್ತೆ ಆತಂಕಕ್ಕೆ ಒಳಗಾಗದರು. ಅದಕ್ಕೆ ಕಾರಣ ಕಳೆದ ಮೂರು ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡವೇ ಇಲ್ಲಿ ಪಂದ್ಯವನ್ನೂ ಗೆದ್ದಿತ್ತು.
ಅಹ್ಮದಾಬಾದ್‌ನ ಪಿಚ್‌ನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ ಗುರಿಯನ್ನು ರಕ್ಷಿಸುವುದು ಬಹಳ ಕಠಿಣ. ಆದರೆ ಭಾರತ ನಾಲ್ಕನೇ ಪಂದ್ಯದಲ್ಲಿ ಅದನ್ನು ಸಾಧಿಸಿದೆ. ಟಾಸ್ ಸೋತರೂ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಭಾರತದ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಹಾಗಾದರೆ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಕಾರಣವಾದ ಪ್ರಮುಖ ಅಂಶಗಳು ಯಾವುದು? ಮುಂದೆ ಓದಿ..

ಸೂರ್ಯಕುಮಾರ್ ನಿರ್ಭೀತ ಆಟ
ಭಾರತ ತಂಡದ ಪರವಾಗಿ ಮೊದಲ ಬಾರಿಗೆ ಬ್ಯಾಟಿಂಗ್‌ಗೆ ಇಳಿದ ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಸೂರ್ಯಕುಮಾರ್ ಯಾದವ್ ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿ ತನ್ನ ಆತ್ಮವಿಶ್ವಾಸವನ್ನು ಬಹಿರಂಗಪಡಿಸಿದರು. ಅದ್ಭುತ ಹೊಡೆತಗಳ ಮೂಲಕ ರನ್ ವೇಗ ಹೆಚ್ಚಿಸುತ್ತಾ ಸಾಗಿತ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 57 ರನ್‌ಗಳ ಕೊಡುಗೆಯನ್ನು ನೀಡಿದರು. 6 ಬೌಂಡರಿ ಹಾಗೂ 3 ಸಿಕ್ಸರ್‌ಅನ್ನು ಸೂರ್ಯಕುಮಾರ್ ಬಾರಿಸಿದ್ದರು. 183.87ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ತಂಡದ ಮೊತ್ತ ಹಿಗ್ಗಲು ಕಾರಣರಾದರು.

ಶ್ರೇಯಸ್ ಐಯ್ಯರ್ ಸ್ಪೋಟಕ ಬ್ಯಾಟಿಂಗ್
ಇನ್ನು ಕೆಳ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ತಮ್ಮ ಜವಾಬ್ಧಾರಿಯನ್ನು ಅದ್ಭುತವಾಗಿ ನಿಭಾಯಿಸುವಲ್ಲಿ ಯಶಸ್ವಿಯಾದರು. 18 ಎಸೆತಗಳನ್ನು ಎದುರಿಸಿದ ಶ್ರೇಯಸ್ ಐಯ್ಯರ್ 37 ರನ್ ಬಾರಿಸಿ ಮಿಂಚಿದರು. ಈ ಮೂಲಕ ಭಾರತ ತಂಡದ ಮೊತ್ತ 185ಕ್ಕೆ ತಲುಪಲು ಪ್ರಮುಖ ಕಾರಣರಾದರು. ರಿಷಭ್ ಪಂತ್ ಕೂಡ 23 ಎಸೆತಗಳಲ್ಲಿ 30 ರನ್‌ಗಳ ಕೊಡುಗೆ ನೀಡಿದರು.

ಟರ್ನಿಂಗ್ ಪಾಯಿಂಟ್ ಆದ ಠಾಕೂರ್ ಓವರ್
ಭಾರತ ನೀಡಿದ್ದ ಸಾವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರವಾಗಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಗೆಲುವಿನ ಸಾಧ್ಯತೆಯನ್ನು ಸೃಷ್ಟಿಸುತ್ತಾ ಸಾಗಿದರು. ಸ್ಪೋಟಕವಾಗಿ ಬ್ಯಾಟಿಂಗ್ ಮಾಡುತ್ತಾ ಭಾರತೀಯ ಬೌಲರ್‌ಗಳನ್ನು ದಂಡಿಸಿದ ಬೆನ್ ಸ್ಟೋಕ್ಸ್ ಭಾರತಕ್ಕೆ ಸೋಲಿನ ಭೀತಿಗೆ ಕಾರಣರಾದರು. ಆದರೆ 17 ಓವರ್ ಎಸೆದ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ಆಲ್‌ರೌಂಡರ್ ಸ್ಟೋಕ್ಸ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅದಾದ ಮುಂದಿನ ಎಸೆತದಲ್ಲಿಯೇ ನಾಯಕ ಇಯಾನ್ ಮಾರ್ಗನ್ ಕೂಡ ಇಕೆಟ್ ಒಪ್ಪಿಸಿ ಹೊರನಡೆದರು.

ಹಾರ್ದಿಕ್ ಪಾಂಡ್ಯ ಅದ್ಭುತ ನಿಯಂತ್ರಣ
ಇನ್ನು ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಸಾಕಷ್ಟು ರನ್‌ಗಳನ್ನು ನಿಡುತ್ತಿದ್ದರೂ ಹಾರ್ದಿಕ್ ಪಾಂಡ್ಯ ಮಾತ್ರ ಅದ್ಭುತವಾಗಿ ಯಶಸ್ಸು ಸಾಧಿಸಿದರು. ತಮ್ಮ ಬೌಲಿಂಗ್‌ನಲ್ಲಿ ವೇಗದ ನಿಯಂತ್ರಣದ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹಾರ್ದಿಕ್ ಕಂಗೆಡುವಂತೆ ಮಾಡಿದರು. 4 ಓವರ್‌ಗಳಲ್ಲಿ ಹಾರ್ದಿಕ್ ಕೇವಲ 16 ರನ್ ನಿಡಿ 2 ವಿಕೆಟ್ ಪಡೆದರು. ಈ ಬೌಲಿಂಗ್ ಸಾಧನೆ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು ಸುಳ್ಳಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications