

ಸೌಥಾಂಪ್ಟನ್, ಆಗಸ್ಟ್ 30: ಸೌಥಾಂಪ್ಟನ್, ಆಗಸ್ಟ್ 30: ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಎಲ್ಲಾ ವಿಕೆಟ್ ಕಳೆದು 246 ರನ್ ಪೇರಿಸುವುದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಸ್ಯಾಮ್ ಕರನ್ 78 ರನ್ ನೊಂದಿಗೆ ತಂಡದ ಬೆಂಬಲಕ್ಕೆ ನಿಂತರು. ಭಾರತ ಮೊದಲ ಇನ್ನಿಂಗ್ಸ್ ಗೆ ಇಳಿದಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆರಂಭಿಕ ಆಟಗಾರ ಕೀಟನ್ ಜೆನ್ನಿಂಗ್ಸ್ ಖಾತೆ ತೆರೆಯದೆಯೇ ಜಸ್ ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಜೋ ರೂಟ್ ಅವರನ್ನು ಇಶಾಂತ್ ಶರ್ಮಾ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.
ಜಾನಿ ಬೈರ್‌ಸ್ಟೋ ಬೂಮ್ರಾ ಬೌಲಿಂಗ್‌ನಲ್ಲಿ ಕೀಪರ್ ರಿಷಬ್ ಪಂತ್‌ಗೆ ಕ್ಯಾಚ್ ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್ ಅಲೆಸ್ಟರ್ ಕುಕ್, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತರು.
ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಕ್ರೀಸ್‌ನಲ್ಲಿದ್ದಾರೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ದುಕೊಂಡರು.
ಐದು ಟೆಸ್ಟ್‌ಗಳ ಸರಣಿಯಲ್ಲಿ ಇಂಗ್ಲೆಂಡ್ 2-1ರಿಂದ ಮುನ್ನಡೆ ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಜಯಗಳಿಸಿದ್ದರೆ, ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ಜಯಭೇರಿ ಬಾರಿಸಿತ್ತು.
ಮೂರನೇ ಟೆಸ್ಟ್‌ನಲ್ಲಿ ಆಡಿದ್ದ ತಂಡದೊಂದಿಗೇ ಕಣಕ್ಕಿಳಿಯಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಗಾಯಗೊಂಡಿದ್ದ ಆರ್. ಅಶ್ವಿನ್ ಚೇತರಿಸಿಕೊಂಡಿದ್ದು, ಭಾರತಕ್ಕೆ ಸಮಾಧಾನ ತಂದಿದೆ.
ಇಂಗ್ಲೆಂಡ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಯುವ ಆಟಗಾರ ಓಲಿ ಪೋಪ್ ಅವರನ್ನು ಕೈಬಿಟ್ಟು, ಆಲ್‌ರೌಂಡರ್ ಮೋಯಿನ್ ಆಲಿ ಅವರನ್ನು ಸೇರಿಸಿಕೊಳ್ಳಲಾಗಿದೆ.
ಕಳೆದ ಪಂದ್ಯದಲ್ಲಿ ಅವಕಾಶ ಪಡೆದುಕೊಳ್ಳದ ಸ್ಯಾಮ್ ಕುರನ್, ಕ್ರಿಸ್ ವೋಕ್ಸ್ ಸ್ಥಾನ ತುಂಬಲು ತಂಡಕ್ಕೆ ಮರಳಿದ್ದಾರೆ. ಗಾಯಾಳು ವೋಕ್ಸ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಜೋಸ್ ಬಟ್ಲರ್ ಅವರು ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೂರನೇ ಟೆಸ್ಟ್ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋ, ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್) ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ ಪ್ರೀತ್ ಬೂಮ್ರಾ.
ಇಂಗ್ಲೆಂಡ್ ತಂಡ : ಅಲೆಸ್ಟರ್ ಕುಕ್, ಕೀಟಾನ್ ಜೆನ್ನಿಂಗ್ಸ್, ಜೋ ರೂಟ್(ನಾಯಕ), ಜಾನಿ ಬೈರ್ಸ್ಟೋ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೋಯಿನ್ ಅಲಿ, ಸ್ಯಾಮ್ ಕುರನ್, ಅದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಅಂಡರ್ಸನ್.