IND vs ENG 5ನೇ ಟೆಸ್ಟ್: ಮುನ್ನಡೆಯಲ್ಲಿದ್ದರೂ ಬೃಹತ್ ಮೊತ್ತ ಕಲೆಹಾಕಬೇಕು ಭಾರತ; 4ನೇ ದಿನದ ಲೈವ್ ಸ್ಕೋರ್

ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಈ ಪಂದ್ಯ ಜುಲೈ 1ರಿಂದ ಆರಂಭಗೊಂಡಿದ್ದು, 3 ದಿನಗಳ ಆಟದ ಅಂತ್ಯಕ್ಕೆ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ ಎಂದೇ ಹೇಳಬಹುದು.
ಹೌದು, ಮೂರನೇ ದಿನದಾಟದಂದು ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿದೆ. ಅತ್ತ ಇದಕ್ಕೂ ಮುನ್ನಾ ಮೂರನೇ ದಿನದಾಟದಂದು ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿ 284 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಈ ಮೂಲಕ ಮೂರನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 257 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಕೈನಲ್ಲಿ ಇನ್ನೂ 7 ವಿಕೆಟ್‍ಗಳನ್ನು ಹೊಂದಿದೆ.
ಪ್ರಥಮ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಈ ಇನ್ನಿಂಗ್ಸ್‌ನಲ್ಲೂ ಬೃಹತ್ ಮೊತ್ತ ಕಲೆ ಹಾಕುವ ಭರವಸೆಯನ್ನು ಹುಟ್ಟುಹಾಕಿದ್ದು, ಮೂರನೆ ದಿನದಾಟದಂತ್ಯದಲ್ಲಿ ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ಅಜೇಯರಾಗಿ ಕಣದಲ್ಲಿದ್ದಾರೆ. ನಾಲ್ಕನೇ ದಿನದಾಟದಂದು ರಿಷಬ್ ಪಂತ್ ಪ್ರಥಮ ಇನ್ನಿಂಗ್ಸ್ ರೀತಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಾರಾ ಹಾಗೂ ಅರ್ಧ ಶತಕ ಬಾರಿಸಿರುವ ಚೇತೇಶ್ವರ ಪೂಜಾರ ಶತಕ ಬಾರಿಸುತ್ತಾರಾ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.

ಪಂತ್ - ಪೂಜಾರ ಜತೆಯಾಟ
ಸದ್ಯ ಮೂರನೇ ದಿನದಾಟದಂತ್ಯಕ್ಕೆ ಕಣದಲ್ಲಿ ಉಳಿದುಕೊಂಡಿರುವ ರಿಷಭ್ ಪಂತ್ ಮತ್ತು ಚೇತೇಶ್ವರ್ ಪೂಜಾರ 50 ರನ್‌ಗಳ ಜತೆಯಾಟವನ್ನು ಆಡಿದ್ದಾರೆ. ಈ ಮೂಲಕ 75 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಈ ಜೋಡಿ ಆಸರೆಯಾಗಿದೆ. ರಿಷಭ್ ಪಂತ್ 30 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದು, 50 ರನ್ ಕಲೆಹಾಕಿರುವ ಚೇತೇಶ್ವರ್ ಪೂಜಾರ ಕೂಡ ಅಜೇಯರಾಗಿದ್ದಾರೆ.

ಎಚ್ಚರಿಕೆ ನೀಡಿದ ಬೈರ್ ಸ್ಟೋ
ಇನ್ನು ಇಂಗ್ಲೆಂಡ್ ತಂಡ ಟೀಮ್ ಇಂಡಿಯಾ ಬೌಲಿಂಗ್ ಎದುರು ಮೊದಲನೇ ಇನ್ನಿಂಗ್ಸ್‌ನಲ್ಲಿ ಮಂಕಾದರೆ ತಂಡದ ವಿಕೆಟ್ ಕೀಪರ್ ಜಾನಿ ಬೈರ್ ಸ್ಟೋ ಮಾತ್ರ ಅಬ್ಬರದ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು ಹಾಗೂ ತಂಡವನ್ನು ಫಾಲೋ ಆನ್ ಸುಳಿಯಿಂದ ಪಾರುಮಾಡಿದರು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಮಿಂಚಿರುವ ಜಾನಿ ಬೈರ್ ಸ್ಟೋ ನಾಲ್ಕನೇ ದಿನದಾಟಕ್ಕೂ ಮುನ್ನ ಮಾತನಾಡಿದ್ದು, ಟೀಮ್ ಇಂಡಿಯಾ ಎಷ್ಟೇ ಮೊತ್ತವನ್ನು ಗುರಿಯನ್ನಾಗಿ ನೀಡಲಿ, ಅದನ್ನು ಬಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಪಂದ್ಯವನ್ನು ಗೆಲ್ಲಲಿದ್ದೇವೆ ಎಂಬ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ಲೇಯಿಂಗ್ ಇಲೆವೆನ್
ಭಾರತ: ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ನಾಯಕ)
ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications