IND vs ENG 5ನೇ: ಫಾಲೋಆನ್ ಭೀತಿಯಲ್ಲಿ ಇಂಗ್ಲೆಂಡ್; ಮೂರನೇ ದಿನದಾಟದ ಲೈವ್ ಸ್ಕೋರ್ ಇಲ್ಲಿವೆ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯ ಬರ್ಮಿಂಗ್ ಹ್ಯಾಮ್ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ಶುಕ್ರವಾರದಿಂದ ನಡೆಯುತ್ತಿದೆ. ಹೌದು, ಕಳೆದ ವರ್ಷದಿಂದ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಪಂದ್ಯ ಇದೀಗ ಮರು ಆಯೋಜನೆಯಾಗಿದ್ದು, ನಿನ್ನೆಗೆ ( ಜುಲೈ 2 ) ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ.
ಹೀಗೆ ಎರಡನೇ ದಿನದಾಟದ ಮುಕ್ತಾಯದ ಹಂತಕ್ಕೆ ಆತಿಥೇಯ ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿದ್ದು 332 ರನ್‌ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿ ಫಾಲೋ ಆನ್ ಭೀತಿಯನ್ನು ಎದುರಿಸುತ್ತಿದೆ. ಸದ್ಯ ಆರನೇ ವಿಕೆಟ್‍ಗೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ವಿಕೆಟ್ ಕೀಪರ್ ಜಾನಿ ಬೈರ್ ಸ್ಟೋ ಜೊತೆಯಾಗಿದ್ದು, ಟೀಮ್ ಇಂಡಿಯಾ ರೀತಿಯೇ ಉತ್ತಮ ಜತೆಯಾಟವನ್ನು ಆಡಿ ತಂಡವನ್ನು ಫಾಲೋ ಆನ್‌ನಿಂದ ತಪ್ಪಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಲೈವ್ ಸ್ಕೋರ್ ಕೆಳಕಂಡಂತಿದೆ.

ಫಾಲೋ ಆನ್ ನಿಯಮದಿಂದ ಪಾರಾಗಲು ಇಷ್ಟು ರನ್ ಕಲೆ ಹಾಕಲೇಬೇಕು
ಸದ್ಯ ತನ್ನ ಮೊದಲ 5 ವಿಕೆಟ್‍ಗಳನ್ನು ಕೇವಲ 84 ರನ್‌ಗಳಿಗೆ ಕಳೆದುಕೊಂಡಿರುವ ಆತಿಥೇಯ ಇಂಗ್ಲೆಂಡ್ ಫಾಲೋ ಆನ್‌ನಿಂದ ಪಾರಾಗಲು ಇನ್ನೂ 132 ರನ್ ಬಾರಿಸಬೇಕಾದ ಅಗತ್ಯವಿದೆ. ಅಂದರೆ ಇಂಗ್ಲೆಂಡ್ ಕಡ್ಡಾಯವಾಗಿ 216 ರನ್‌ಗಳ ಗಡಿಯನ್ನು ದಾಟಲೇಬೇಕಾಗಿದೆ. ಒಂದುವೇಳೆ ಇದಕ್ಕೂ ಮೊದಲೇ ಇಂಗ್ಲೆಂಡ್ ಆಲೌಟ್ ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ತಾನೇ ಬ್ಯಾಟಿಂಗ್ ಆರಂಭಿಸಿ ಫಾಲೋ ಆನ್ ನಿಯಮವನ್ನು ಅನುಸರಿಸಬೇಕಾಗುತ್ತದೆ.

ಉತ್ತಮ ಫಾರ್ಮ್‌ನಲ್ಲಿದೆ ಟೀಮ್ ಇಂಡಿಯಾ ಬೌಲಿಂಗ್ ಬಳಗ
ಇನ್ನು ಈ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿರುವುದು ಕೇವಲ 3 ಬೌಲರ್‌ಗಳು ಮಾತ್ರ. ನಾಯಕ ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಈ ಮೂವರು ಮಾತ್ರ ಎರಡನೇ ದಿನದಾಟದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಪೈಕಿ ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದು ಮಿಂಚಿದ್ದರೆ, ಮೊಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಇನ್ನು ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಇಬ್ಬರಿಗೂ ಎರಡನೇ ದಿನದಾಟದಲ್ಲಿ ಬೌಲಿಂಗ್ ಮಾಡುವ ಅವಕಾಶ ಲಭಿಸದೇ ಇದ್ದು, ಮೂರನೇ ದಿನದಂದು ಚೆಂಡಿನ ಮೂಲಕ ಕಮಾಲ್ ಮಾಡುವ ತವಕದಲ್ಲಿದ್ದಾರೆ.

ಬೈರ್ ಸ್ಟೋ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಜತೆಯಾಟದ ನಿರೀಕ್ಷೆಯಲ್ಲಿ ಇಂಗ್ಲೆಂಡ್
ಅತ್ತ ಟೀಮ್ ಇಂಡಿಯಾ ಕೂಡ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಆರನೇ ಕ್ರಮಾಂಕದಲ್ಲಿ ಒಂದಾದ ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಜೋಡಿ ತಲಾ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಫಲಿತಾಂಶವಾಗಿ ಟೀಮ್ ಇಂಡಿಯಾ 416 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಸದ್ಯ ಇಂಗ್ಲೆಂಡ್ ಕೂಡ ಟೀಮ್ ಇಂಡಿಯಾ ರೀತಿಯೇ ಅಲ್ಪ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡಿದ್ದು, 12 ರನ್ ಕಲೆಹಾಕಿ ಅಜೇಯನಾಗಿ ಕಣದಲ್ಲಿರುವ ಬೈರ್ ಸ್ಟೋ ಹಾಗೂ ಯಾವುದೇ ರನ್ ಕಲೆ ಹಾಕದೆ ಅಜೇಯನಾಗಿ ಉಳಿದಿರುವ ಬೆನ್ ಸ್ಟೋಕ್ಸ್ ಜೋಡಿ ಜಡೇಜಾ ಮತ್ತು ಪಂತ್ ರೀತಿ ತಂಡಕ್ಕೆ ಆಸರೆಯಾಗಬಹುದು ಎಂಬ ಅಭಿಪ್ರಾಯಗಳು ಕ್ರಿಕೆಟ್ ಅಭಿಮಾನಿಗಳ ಪಾಳೆಯದಲ್ಲಿ ವ್ಯಕ್ತವಾಗುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications