IND vs ENG: ಅಡಿಲೇಡ್ ಓವಲ್‌ನಲ್ಲಿ ಟಾಸ್ ಸೋತವರೇ ಬಾಸ್; ಸೋತು ಗೆಲ್ಲುವ ತಂಡ ಯಾವುದು?

ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದು (ಗುರುವಾರ, ನವೆಂಬರ್ 10) ಅಡಿಲೇಡ್ ಓವಲ್‌ನಲ್ಲಿ ಸೆಣಸಾಡಲಿದೆ. ಇಲ್ಲಿ ಗೆದ್ದ ತಂಡ ಭಾನುವಾರ, ನವೆಂರ್ 13ರಂದು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದೆ.
ಕಳೆದ ವಾರ ಬಾಂಗ್ಲಾದೇಶದ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ತಮ್ಮ ಕೊನೆಯ ಸೂಪರ್ 12 ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡವು ಮಳೆ-ಬಾಧಿತ ಪಂದ್ಯದಲ್ಲಿ ಗೆದ್ದು ಬೀಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ 16 ಓವರ್‌ಗಳಿಗೆ ಕಡಿತದ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು 5 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.
ಕುತೂಹಲಕಾರಿ ವಿಷಯವೇನೆಂದರೆ, ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ತಂಡಗಳು ಇದುವರೆಗೆ ಪುರುಷರ ಟಿ20 ಪಂದ್ಯವನ್ನು ಗೆದ್ದಿಲ್ಲ. ಇದು ಇಲ್ಲಿನ ವಿಶೇಷ ದಾಖಲೆಯಾಗಿದೆ. ಇದುವರೆಗೆ 11 ಪುರುಷರ ಟಿ20 ಪಂದ್ಯಗಳು ನಡೆದಿದ್ದು, ಟಾಸ್ ಸೋತ ತಂಡವೇ ಪಂದ್ಯವನ್ನು ಗೆದ್ದು ಬಾಸ್ ಆಗಿದೆ.

ಇನ್ನು ವಿರಾಟ್ ಕೊಹ್ಲಿಗೆ ಅಡಿಲೇಡ್ ಓವಲ್ ಅತ್ಯಂತ ನೆಚ್ಚಿನ ಮೈದಾನವಾಗಿದ್ದು, ಈವರೆಗೆ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಭಾರತ ತಂಡಕ್ಕೆ ದೊಡ್ಡ ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ.
ಭಾರತ vs ಇಂಗ್ಲೆಂಡ್ ಸಂಭಾವ್ಯ ಆಡುವ 11ರ ಬಳಗ
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್/ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications