ಸಚಿನ್, ಯುವರಾಜ್ ದಾಖಲೆ ಇಂದೇ ಸರಿದೂಗಿಸುತ್ತಾರಾ ವಿರಾಟ್ ಕೊಹ್ಲಿ?

ಪೂಣೆ: ಆರಂಭಿಕ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು 66 ರನ್‌ನಿಂದ ಸೋಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ದ್ವಿತೀಯ ಏಕದಿನ ಪಂದ್ಯ ಆರಂಭಿಕ ಪಂದ್ಯ ನಡೆದಿದ್ದ ಅದೇ ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 26) 1.30 pmಗೆ ಆರಂಭಗೊಳ್ಳಲಿದೆ.
ಇಂಗ್ಲೆಂಡ್ ವಿರುದ್ಧ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯುವ ನಾಯಕ ವಿರಾಟ್ ಕೊಹ್ಲಿ 253 ಪಂದ್ಯಗಳನ್ನು ಆಡಿದಂತಾಗುತ್ತದೆ. ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸುತ್ತ ಸಾಗುತ್ತಿರುವ ರನ್ ಮಷಿನ್ ಕೊಹ್ಲಿ ಈ ಪಂದ್ಯದಲ್ಲೂ ಕೆಲವಾರು ದಾಖಲೆಗಳನ್ನು ಬರೆಯಲಿದ್ದಾರೆ.

ಸಚಿನ್ ದಾಖಲೆ ಸರಿದೂಗಲು ಅವಕಾಶ
ಭಾರತದ ಕ್ರಿಕೆಟ್ ದಂತಕತೆ ಸಚಿನ್ ದಾಖಲೆಗಳನ್ನು ಮುರಿಯುತ್ತ ಸಾಗುತ್ತಿರುವ ವಿರಾಟ್ ಕೊಹ್ಲಿಗೆ ದ್ವಿತೀಯ ಏಕದಿನ ಪಂದ್ಯದಲ್ಲಿ ಸಚಿನ್ ಹೆಸರಿನಲ್ಲಿರುವ ಇನ್ನೊಂದು ದಾಖಲೆ ಸರಿದೂಗಿಸಲು ಅವಕಾಶವಿದೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದರೆ ಸಚಿನ್ ಹೆಸರಿನ ದಾಖಲೆಯೊಂದು ಸರಿದೂಗಲಿದೆ.

ಭಾರತದಲ್ಲಿ ಅತ್ಯಧಿಕ ಶತಕ ದಾಖಲೆ
ಏಕದಿನ ಕ್ರಿಕೆಟ್‌ನಲ್ಲಿ ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ಒಟ್ಟು 20 ಶತಕಗಳನ್ನು ಭಾರತದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಬಾರಿಸಿದ್ದಾರೆ. ಕೊಹ್ಲಿ 19 ಶತಕ ದಾಖಲೆ ಹೊಂದಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ಸಚಿನ್ ದಾಖಲೆ ಸರಿಸಮವಾಗಲಿದೆ.

ಯುವರಾಜ್ ದಾಖಲೆಯೂ ಸರಿಸಮ
ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯನೆಂಬ ದಾಖಲೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಆಂಗ್ಲರೆದುರು ಯುವಿ 4 ಶತಕಗಳನ್ನು ಬಾರಿಸಿದ್ದಾರೆ. ಕೊಹ್ಲಿ ಈ ದಾಖಲೆ ಪಟ್ಟಿಯಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications