For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

India vs England: England announced 12 men Squad for the second Test

ಚೆನ್ನೈ: ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯ ಫೆಬ್ರವರಿ 13ರಿಂದ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ದ್ವಿತೀಯ ಟೆಸ್ಟ್‌ಗಾಗಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) 12 ಮಂದಿಯ ತಂಡ ಪ್ರಕಟಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು.

ಪ್ರಕಟಿತ 12 ಮಂದಿಯ ತಂಡದಲ್ಲಿ ಇಂಗ್ಲೆಂಡ್ ಪ್ರಮುಖ ವೇಗಿ ಜೇಮ್ಸ್ ಆ್ಯಂಡರ್ಸನ್ ಹೆಸರಿಲ್ಲ. ಇನ್ನು 23ರ ಹರೆಯದ ಯುವ ಬೌಲರ್ ಡೊಮಿನಿಕ್ ಬೆಸ್ ಕೂಡ ತಂಡದಲ್ಲಿಲ್ಲ. ಆ್ಯಂಡರ್ಸನ್ ಮತ್ತು ಬೆಸ್ ಗೆ ವಿಶ್ರಾಂತಿ ನೀಡಲಾಗಿದೆ. ಜೋಸ್ ಬಟ್ಲರ್ ಕೂಡ ದ್ವಿತೀಯ ಟೆಸ್ಟ್‌ನಲ್ಲಿ ಆಡುತ್ತಿಲ್ಲ.

ಇಂಗ್ಲೆಂಡ್ ಮತ್ತೊಬ್ಬ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಈ ಬಾರಿ ತಂಡದಲ್ಲಿದ್ದಾರೆ. ಇನ್ನು ಪ್ರಮುಖ ಆಲ್ ರೌಂಡರ್‌ಗಳಾದ ಮೊಯೀನ್ ಅಲಿ ಮತ್ತು ಕ್ರಿಸ್ ವೋಕ್ಸ್ ಕೂಡ ಪ್ರಕಟಿತ ತಂಡದಲ್ಲಿದ್ದಾರೆ. ದ್ವಿತೀಯ ಟೆಸ್ಟ್‌ ಪಂದ್ಯ ಫೆಬ್ರವರಿ 13ರಂದು ಚೆನ್ನೈನಲ್ಲಿ 9.30 AMಗೆ ಆರಂಭಗೊಳ್ಳಲಿದೆ.

ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್ ತಂಡ
ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಡೇನಿಯಲ್ ಲಾರೆನ್ಸ್, ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಮೊಯೀನ್ ಅಲಿ, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಫೋಕ್ಸ್ ಮತ್ತು ಆಲಿ ಸ್ಟೋನ್.

Story first published: Saturday, February 13, 2021, 8:58 [IST]
Other articles published on Feb 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+