ಇಂಗ್ಲೆಂಡಲ್ಲಿ ಮೊದಲ ಶತಕ ಬಾರಿಸಿ, ಕೊಹ್ಲಿ ಮಾಡಿದ ಸಾಧನೆಗಳು

ಬರ್ಮಿಂಗ್ ಹ್ಯಾಮ್, ಆಗಸ್ಟ್ 03: 2014ರ ಇಂಗ್ಲೆಂಡ್-ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ, ಭಾರತ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಕಹಿ ನೆನಪಾಗಿ ಉಳಿದಿತ್ತು. ಆ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ, ಕೊಹ್ಲಿ ಕೇವಲ 134 ರನ್ ಗಳಿಸಿದ್ದರು. ಈಗ ನಾಲ್ಕು ವರ್ಷಗಳ ಬಳಿಕ ಕೊಹ್ಲಿ ತಮ್ಮ 'ವಿರಾಟ್' ರೂಪ ತೋರಿದ್ದಾರೆ. ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
2014ರ ನಂತರ ಟೆಸ್ಟ್ ಕ್ರಿಕೆಟ್ ಆಡುವ ಪ್ರಮುಖ ದೇಶಕ್ಕೆ ಪ್ರವಾಸಕ್ಕೆ ಹೋದಾಗಲೆಲ್ಲ ಭರ್ಜರಿ ಪ್ರದರ್ಶನ ನೀಡಿರುವ ಕೊಹ್ಲಿ ಅವರು ಬಾಂಗ್ಲಾ ನೆಲದಲ್ಲಿ ಮಾತ್ರ ಇನ್ನೂ ಶತಕ ಬಾರಿಸಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಎಜ್ ಬಾಸ್ಟನ್ ನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 149ರನ್( 225 ಎಸೆತಗಳು, 22 ಬೌಂಡರಿ, 1 ಸಿಕ್ಸರ್) ಬಾರಿಸಿ ಅಂತಿಮ ಬ್ಯಾಟ್ಸ್ ಮನ್ ಆಗಿ ಕೊಹ್ಲಿ ಔಟಾದರು.
ಈ ಮೂಲಕ ಕುಸಿಯುತ್ತಿದ್ದ ಭಾರತದ ಬ್ಯಾಟಿಂಗ್ ಮೇಲಕ್ಕೆತ್ತಿ, ತಂಡದ ಮೊತ್ತವನ್ನು 274ಕ್ಕೇರಿಸಿದರು. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 287ರನ್ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತಮ್ಮ ಟೆಸ್ಟ್ ವೃತ್ತಿ ಬದುಕಿನಲ್ಲಿ 22 ಶತಕ ಗಳಿಸುವ ಮೂಲಕ ಕೊಹ್ಲಿ ಅವರು ಹಲವು ಸಾಧನೆ, ಮೈಲಿಗಲ್ಲನ್ನು ದಾಟಿದ್ದಾರೆ.

ಕಡಿಮೆ ಇನ್ನಿಂಗ್ಸ್ ಗಳಲ್ಲಿ 22 ಟೆಸ್ಟ್ ಶತಕ
ಕಡಿಮೆ ಇನ್ನಿಂಗ್ಸ್ ಗಳಲ್ಲಿ 22 ಟೆಸ್ಟ್ ಶತಕ ಗಳಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
* 58 ಇನ್ನಿಂಗ್ಸ್ : ಡಾನ್ ಬ್ರಾಡ್ಮನ್
* 101 : ಸುನಿಲ್ ಗವಾಸ್ಕರ್
* 108 : ಸ್ಟೀವ್ ಸ್ಮಿತ್
* 113: ವಿರಾಟ್ ಕೊಹ್ಲಿ
* 114: ಸಚಿನ್ ತೆಂಡೂಲ್ಕರ್
* 121 : ಮೊಹಮ್ಮದ್ ಯೂಸುಫ್

ಆಂಗ್ಲರ ಶತಕ ಬಾರಿಸಿದ ಭಾರತದ 5ನೇ ನಾಯಕ
ಕೊಹ್ಲಿ ಅವರು ಚೊಚ್ಚಲ ಶತಕ ಬಾರಿಸಿದ್ದಲ್ಲದೆ, ಆಂಗ್ಲರ ನಾಡಿನಲ್ಲಿ ಶತಕ ಬಾರಿಸಿದ ಭಾರತದ 5ನೇ ನಾಯಕ ಎನಿಸಿಕೊಂಡರು. ಕೊಹ್ಲಿಗೂ ಮುನ್ನ ಮೊಹಮ್ಮದ್ ಅಜರುದ್ದೀನ್ ಎರಡು ಬಾರಿ, ಪಟೌಡಿ ಹಾಗೂ ಗಂಗೂಲಿ ತಲಾ ಒಂದು ಶತಕ ಗಳಿಸಿದ್ದಾರೆ.
* 179 ರನ್ : ಮೊಹಮ್ಮದ್ ಅಜರುದ್ದೀನ್, ಮ್ಯಾಂಚೆಸ್ಟರ್, 1990
* 149 : ವಿರಾಟ್ ಕೊಹ್ಲಿ, ಎಜ್ ಬಾಸ್ಟನ್, 2018
* 148: ಎಂಎಕೆ ಪಟೌಡಿ, ಲೀಡ್ಸ್, 1967
* 128: ಸೌರವ್ ಗಂಗೂಲಿ, ಲೀಡ್ಸ್, 2002
* 121 : ಮೊಹಮ್ಮದ್ ಅಜರುದ್ದೀನ್,ಲಾರ್ಡ್ಸ್, 1990

ಸಾವಿರ ರನ್ ಗಡಿ ದಾಟಿದ ಸಾಧನೆ
ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸಾವಿರ ರನ್ ಗಡಿ ದಾಟಿದ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ. 149 ರನ್ ಗಳಿಸಿ ಔಟಾದರು. ಆದರೆ, 23 ರನ್ ಗಳಿಸುತ್ತಿದ್ದಂತೆ, ಇಂಗ್ಲೆಂಡ್ ವಿರುದ್ಧ 1,000 ರನ್ ಗಳಿಸಿದ ಸಾಧನೆ ಮಾಡಿದರು.
2016ರಿಂದ ಇಲ್ಲಿ ತನಕ
ಕೊಹ್ಲಿ: 11 ಶತಕ, 4 ಅರ್ಧಶತಕ
ರೂಟ್ : 5 ಶತಕ, 24 ಅರ್ಧಶತಕ

ನಾಯಕರಾಗಿ ಹೆಚ್ಚು ಶತಕ
ನಾಯಕರಾಗಿ ಹೆಚ್ಚು ಶತಕ ಗಳಿಸಿರುವ ಪ್ರಮುಖ ಆಟಗಾರರ ಪೈಕಿ, ದಕ್ಷಿಣ ಆಫ್ರಿಕಾದ ಗ್ರಹಾಂ ಸ್ಮಿತ್ ಅವರು ನಾಯಕರಾಗಿ ಅತ್ಯಧಿಕ ಶತಕ ಗಳಿಸಿದ್ದಾರೆ. ಗ್ರಹಾಂ ಸ್ಮಿತ್ 25 ಶತಕ ಬಾರಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 19 ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಅವರು 2014ರಲ್ಲಿ 10 ಇನ್ನಿಂಗ್ಸ್ ಗಳಲ್ಲಿ 134ರನ್ ಮಾತ್ರ ಗಳಿಸಿದ್ದ ಕೊಹ್ಲಿ ಅವರು 2018ರಲ್ಲಿ ಮೊದಲ ಪಂದ್ಯದಲ್ಲಿ 149ರನ್ ಗಳಿಸಿ ವೈಯಕ್ತಿಕವಾಗಿ 22ನೇ ಶತಕ ಹಾಗೂ ನಾಯಕರಾಗಿ 15 ಶತಕ ಗಳಿಸಿದರು.
* 25 ಗ್ರಹಾಂ ಸ್ಮಿತ್
* 19 ರಿಕಿ ಪಾಂಟಿಂಗ್
* ಅಲಾನ್ ಬಾರ್ಡರ್/ ಸ್ಟೀವ್ ವಾ/ಸ್ಟೀವ್ ಸ್ಮಿತ್/ವಿರಾಟ್ ಕೊಹ್ಲಿ

50 ರಿಂದ 100ಕ್ಕೆ ಬದಲಾಯಿಸುವ ಗತಿ
50ರನ್ ಬಾರಿಸಿದ ಮೇಲೆ ಅದನ್ನು 100ರನ್ ಆಗಿ ಪರಿವರ್ತಿಸುವ ದರದಲ್ಲಿ ಡಾನ್ ಬ್ರಾಡ್ಮನ್ ಬಿಟ್ಟರೆ ಹಾಲಿ ಕ್ರಿಕೆಟರ್ಸ್ ಪೈಕಿ ವಿರಾಟ್ ಕೊಹ್ಲಿಯೇ ಟಾಪ್ ಸ್ಥಾನದಲ್ಲಿದ್ದಾರೆ.
* 69.04% ಬ್ರಾಡ್ಮನ್ (29 ಬಾರಿ 100ರನ್/ 13 ಬಾರಿ 50ರನ್)
* 57.89% ಕೊಹ್ಲಿ (22/16)
* 51.16% ಅಜರುದ್ದೀನ್(22/21)
* 50.91% ಕ್ಲಾರ್ಕ್(28/27)
* 50.85% ಹೇಡನ್(30/29)
* 50.75% ಯೂನಿಸ್ (34/33)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications