Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೇಗಿ ಜೇಮ್ಸ್ ಆ್ಯಂಡರ್ಸನ್ ಹೆಸರಿಗೆ ಹೊಸ ದಾಖಲೆ ಸೇರ್ಪಡೆ

India vs England James Anderson created unique record

ಅಹ್ಮದಾಬಾದ್: ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಹೆಸರಿಗೆ ಹೊಸ ದಾಖಲೆ ಸೇರ್ಪಡೆಗೊಂಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆ್ಯಂಡರ್ಸನ್ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಆ್ಯಂಡರ್ಸನ್ ಮಾಡಿರುವ ಈ ಸಾಧನೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಗ್ರಾತ್ ಸಾಧನೆಗೆ ಸರಿಸಮವಾಗಿದೆ.

ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49841

ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಒಬ್ಬ ರನ್ ಗಳಿಸುವ ಮುನ್ನವೇ ಅಂದರೆ 0 ರನ್‌ಗೆ ಔಟ್ ಮಾಡಿದ ಹಿರಿಮೆಗೆ ಆ್ಯಂಡರ್ಸನ್ ಪಾತ್ರರಾಗಿದ್ದಾರೆ. 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಅವರನ್ನು 0ಗೆ ಪೆವಿಲಿಯನ್‌ಗೆ ಅಟ್ಟುವ ಮೂಲಕ ಆ್ಯಂಡರ್ಸನ್ ಈ ದಾಖಲೆ ನಿರ್ಮಿಸಿದ್ದಾರೆ.

ಮೆಗ್ರಾತ್ ದಾಖಲೆ ಸರಿಸಮ

ಮೆಗ್ರಾತ್ ದಾಖಲೆ ಸರಿಸಮ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಒಬ್ಬನನ್ನು ರನ್ ಗಳಿಸುವ ಮುನ್ನವೇ ಔಟ್ ಮಾಡಿದ ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಗ್ರಾತ್ ಮೊದಲ ಸ್ಥಾನದಲ್ಲಿದ್ದರು. ಮೆಗ್ರಾತ್ 104 ಬಾರಿ ಎದುರಾಳಿ ಬ್ಯಾಟ್ಸ್‌ಮನ್‌ ರನ್ ಗಳಿಸುವ ಮುನ್ನವೇ ಔಟ್ ಮಾಡಿದ್ದರು. ಈಗ ಜೇಮ್ಸ್ ಆ್ಯಂಡರ್ಸನ್ ಕೂಡ 104 ಬಾರಿ ಈ ಸಾಧನೆ ಮಾಡಿ ದಾಖಲೆ ಸರಿದೂಗಿಸಿಕೊಂಡಿದ್ದಾರೆ.

0 ರನ್‌ಗೆ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿ

0 ರನ್‌ಗೆ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿ

* ಗ್ಲೆನ್ ಮೆಗ್ರಾತ್ (ಆಸ್ಟ್ರೇಲಿಯಾ)/ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್), 104 ಬಾರಿ
* ಶೇನ್ ವಾರ್ನ್ (ಆಸ್ಟ್ರೇಲಿಯಾ)/ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ), 102 ಬಾರಿ
* ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ), 83 ಬಾರಿ
* ಕರ್ಟ್ನಿ ವಾಲ್ಷ್ (ವೆಸ್ಟ್‌ ಇಂಡೀಸ್)/ವಾಸಿಮ್ ಅಕ್ರಮ್ (ಪಾಕಿಸ್ತಾನ), 79 ಬಾರಿ
* ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್), 78 ಬಾರಿ

ಸಂಕ್ಷಿಪ್ತ ಸ್ಕೋರ್‌

ಸಂಕ್ಷಿಪ್ತ ಸ್ಕೋರ್‌

* 4ನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ, ಜಾನಿ ಬೇರ್ಸ್ಟೋವ್ 28, ಬೆನ್ ಸ್ಟೋಕ್ಸ್ 55, ಆಲ್ಲಿ ಪೋಪ್ 29, ಡೇನಿಯಲ್ ಲಾರೆನ್ಸ್ 46 ರನ್ ನೊಂದಿಗೆ 75.5 ಓವರ್‌ಗೆ ಎಲ್ಲ ವಿಕೆಟ್ ಕಳೆದು 75.5 ರನ್ ಬಾರಿಸಿದೆ.
* ಭಾರತ ಈಗ ಮೊದಲನೇ ಇನ್ನಿಂಗ್ಸ್‌ ಆಡುತ್ತಿದ್ದು, ಗುರುವಾರ ಮೊದಲನೇ ದಿನದಾಟದ ಅಂತ್ಯಕ್ಕೆ 12 ಓವರ್‌ಗೆ 1 ವಿಕೆಟ್ ಕಳೆದು 24 ರನ್ ಬಾರಿಸಿತ್ತು. ಶುಬ್ಮನ್ ಗಿಲ್ 0ಗೆ ವಿಕೆಟ್ ಒಪ್ಪಿಸಿದ್ದರು.

Story first published: Thursday, March 4, 2021, 18:34 [IST]
Other articles published on Mar 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+