ಭಾರತ vs ಇಂಗ್ಲೆಂಡ್: ತವರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿ ದಾಖಲೆ ಬರೆದ ಜಸ್ಪ್ರೀತ್ ಬೂಮ್ರ

ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ 2018ರಿಂದ ಟೀಮ್ ಇಂಡಿಯಾ ಪರವಾಗಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಭಾರತದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ ಈವರೆಗೆ ಭಾರತದ ಪರವಾಗಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನೇ ಆಡಿರಲಿಲ್ಲ ಎಂಬ ಕುತೂಹಲಕಾರಿ ಸಂಗತಿ ನಿಮಗೆ ಗೊತ್ತಿದೆಯಾ!
ಹೌದು, ಜಸ್ಪ್ರೀತ್ ಬೂಮ್ರಾಗೆ ಇಂಗ್ಲಂಡ್ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಭಾರತದದ ನೆಲದಲ್ಲಿ ಆಡುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ. 17 ಟೆಸ್ಟ್ ಪಂದ್ಯಗಳಲ್ಲಿ ಬೂಮ್ರಾ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರೂ ಅದೆಲ್ಲವೂ ವಿದೇಶಿ ನೆಲದಲ್ಲೇ ಆಗಿದೆ. ಹಾಗಾಗಿ ಬೂಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಭಾರತದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ.

ದಾಖಲೆ ಬರೆದ ಜಸ್ಪ್ರೀತ್ ಬೂಮ್ರ
ಸುದೀರ್ಘ ಪಂದ್ಯಗಳನ್ನು ಆಡಿದ ಬಳಿಕ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಜಸ್ಪ್ರೀತ್ ಬೂಮ್ರಾ ವಿಶೇಷ ಸಾಧನೆಯೊಂದನ್ನು ಮಾಡಿದಂತಾಗಿದೆ. ಈ ಮೂಲಕ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಮುನ್ನ ಅತಿ ಹೆಚ್ಚು ವಿದೇಶಿ ನೆಲದಲ್ಲಿ ಟೆಸ್ಟ್ ಆಡಿದ ಆಟಗಾರರ ಪೈಕಿ ಸಮಾನ ಸಾಧನೆಯನ್ನು ಮಾಡಿದಂತಾಗಿದೆ. ವೆಸ್ಟ್ ಇಂಡೀಸ್ ಡ್ಯಾರನ್ ಗಂಗಾ ಕೂಡ 17 ಪಂದ್ಯಗಳಲ್ಲಿ ಆಡಿದ ಬಳಿಕ ತವರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಬೂಮ್ರಾ ತವರಿನಲ್ಲಿ ಆಡದಿರಲು ಕಾರಣ
2018ರಲ್ಲಿ ಬೂಮ್ರಾ ದಕ್ಷಿಣ ಆಫ್ರಿಕಾ ವಿರುದ್ಧ ಆಫ್ರಿಕಾ ನೆಲದಲ್ಲಿ ಟೆಸ್ಟ್‌ಗೆ ಪದಾರ್ಪಣೆಯನ್ನು ಮಾಡಿದ ಬಳಿಕ ನಾಲ್ಕು ಟೆಸ್ಟ್ ಸರಣಿಗಳು ತವರಿನಲ್ಲಿ ನಡೆದಿದೆ. ಇದರಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಬೂಮ್ರಾ ಆಡಲು ಇಳಿದಿರಲಿಲ್ಲ. ಇದರಲ್ಲಿ ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಬೂಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. 2019 ಹಾಗೂ 2020ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಸರಣಿಯಿಂದ ಬೂಮ್ರಾ ಹೊರಗುಳಿದಿದ್ದರು.

ದಾಖಲೆ ಮಾಡಿದ ಭಾರತೀಯರು
ಇನ್ನು ಭಾರತೀಯ ಆಟಗಾರರ ಪೈಕಿ ಭಾರತದಲ್ಲಿ ಮೊದಲ ಪಂದ್ಯವಾಡುವ ಮುನ್ನ ವಿದೇಶದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಲ್ಲಿ ಜಾವಗಲ್ ಶ್ರೀನಾಥ್ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀನಾಥ್ 12 ಪಂದ್ಯಗಳನ್ನು ಆಡಿದ್ದರು, ಬಳಿಕ 11 ಪಂದ್ಯಗಳನ್ನು ಆಡಿದ್ದ ಆರ್‌ಪಿ ಸಿಂಗ್ ಹಾಗೂ 10 ಪಂದ್ಯಗಳನ್ನು ಆಡಿದ್ದ ಸಚಿನ್ ತೆಂಡೂಲ್ಕರ್ ಇದ್ದಾರೆ.

ತವರಿನಲ್ಲಿ ಆಡುವ ಮುನ್ನ ಅತಿ ಹೆಚ್ಚು ವಿಕೆಟ್
ಇನ್ನು ಭಾರತೀಯ ಆಟಗಾರರ ಪೈಕಿ ತವರಿನಲ್ಲಿ ಆಡುವ ಮುನ್ನ ಅತಿ ಹೆಚ್ಚಿ ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೂ ಜಸ್ಪ್ರೀತ್ ಬೂಮ್ರಾ ಪಾತ್ರರಾಗಿದ್ದಾರೆ. ಜಸ್ಪ್ರೀತ್ ಬೂಮ್ರಾ ಇಂಗ್ಲೆಂಡ್ ವಿರುದ್ಧ ಆಡುವ ಮುನ್ನ ಆಸ್ಟ್ರೇಲಿಯಾ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಗಾಯದ ಜಾರಣದಿಂದ ಹೊರಗುಳಿದಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಅನುಭವಿ ಇಶಾಂತ್ ಶರ್ಮಾ ಜೊತೆಗೆ ವೇಗದ ಬೌಲಿಂಗ್ ವಿಭಾಗದಲ್ಲಿ ಹೊಣೆಹೊತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಇಬ್ಬರು ವೇಗಿಗಳು ಹಾಗೂ ಮೂವರು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications