For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಬೂಮ್ರಾ ಅಲಭ್ಯ, ಟೀಂ ಇಂಡಿಯಾಕ್ಕೆ ಚಿಂತೆ!

By Mahesh
India Vs England: Jasprit Bumrah doubtful for Lords Test - Reports

ಲಂಡನ್, ಆಗಸ್ಟ್ 06: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂಕೂಡಾ ಭಾರತದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಅಲಭ್ಯರಾಗುವ ಸಾಧ್ಯತೆ ಕಂಡು ಬಂದಿದೆ.

ಭುವನೇಶ್ವರ್ ಕುಮಾರ್ ಅವರು ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರೆ, ಬೂಮ್ರಾ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಲಭ್ಯರಾಗುತ್ತಾರೆ ಎಂಬ ಆಶಾಭಾವನೆ ಇತ್ತು.

ಪ್ರವಾಸದ ಬದಲಿಗೆ ಅಭ್ಯಾಸ ಮಾಡಿದ್ದರೆ ಭಾರತ ಟೆಸ್ಟ್‌ ಸೋಲುತ್ತಿರಲಿಲ್ಲ: ಗವಾಸ್ಕರ್

ಭುಜದ ಸಮಸ್ಯೆಯಿಂದ ಬಲಲುತ್ತಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಮ್ಯಾಂಚೆಸ್ಟರ್ ನಲ್ಲಿ ಸರ್ಜರಿಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಸರಣಿಯಿಂದ ಹೊರಗುಳಿಯಬೇಕಾಗುತ್ತದೆ.

ಆದರೆ, ಆಗಸ್ಟ್ 09ರಿಂದ ಆರಂಭವಾಗಲಿರುವ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಬೂಮ್ರಾ ಲಭ್ಯರಾಗುವುದು ಅನುಮಾನ ಎನಿಸಿದೆ. ಹೆಬ್ಬೆರಳು ಗಾಯ ಮಾಡಿಕೊಂಡಿರುವ ಬೂಮ್ರಾ ಅವರು ಇನ್ನೂ ಗುಣಮುಖರಾಗಿಲ್ಲ. ಐರ್ಲೆಂಡ್ ವಿರುದ್ಧದ ಜೂನ್ 27ರ ಪಂದ್ಯದಲ್ಲಿ ಗಾಯ ಮಾಡಿಕೊಂಡಿದ್ದರು.

ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಆಡಿರಲಿಲ್ಲ. ಮೊದಲ ಮೂರು ಟೆಸ್ಟ್ ಪಂದ್ಯಕ್ಕೆ ಆಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿ ಬೂಮ್ರಾ ಕೂಡಾ ಒಬ್ಬರು. ಬರ್ಮಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ವಿರಾಟ್ ಕೊಹ್ಲಿ ಪಡೆ ಈಗ ಲಾರ್ಡ್ಸ್ ಅಂಗಳದಲ್ಲಿ ಗೆಲುವು ಸಾಧಿಸಲು ಸಜ್ಜಾಗುತ್ತಿದೆ.

Story first published: Monday, August 6, 2018, 17:29 [IST]
Other articles published on Aug 6, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+