ಭಾರತ vs ಇಂಗ್ಲೆಂಡ್: ಬೇಡದ ದಾಖಲೆ ಬರೆದ ಚೇತೇಶ್ವರ್ ಪೂಜಾರ

ಲಂಡನ್‌: ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್‌ ಚೇತೇಶ್ವರ್ ಪೂಜಾರ ಬೇಡದ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಬ್ಬನೇ ಬೌಲರ್‌ಗೆ ಹೆಚ್ಚು ಸಾರಿ ವಿಕೆಟ್ ಒಪ್ಪಿಸಿದ ಕೆಟ್ಟ ದಾಖಲೆ ಪೂಜಾರ ಹೆಸರಿಗೆ ಸೇರ್ಪಡೆಯಾಗಿದೆ.

ಪಿಕೆಎಲ್ 2021: ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ಸಂಪೂರ್ಣ ತಂಡಪಿಕೆಎಲ್ 2021: ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ಸಂಪೂರ್ಣ ತಂಡ

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಮೊದಲನೇ ಇನ್ನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಚೇತೇಶ್ವರ್ ಪೂಜಾರ ಅವರು ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರ 19.4ನೇ ಓವರ್‌ನಲ್ಲಿ 4 ರನ್ ಬಾರಿಸಿ ಔಟಾದರು. ಆ್ಯಂಡರ್ಸನ್ ಎಸೆತಕ್ಕೆ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್ ಗೆ ಕ್ಯಾಚಿತ್ತು ಪೂಜಾರ ನಿರ್ಗಮಿಸಿದ್ದರು.

ಈ ಇನ್ನಿಂಗ್ಸ್‌ನಲ್ಲಿ ವಿಕೆಟ್ ನೀಡಿದ ಬಳಿಕ ಜೇಮ್ಸ್ ಆ್ಯಂಡರ್ಸನ್‌ಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಾರಿ ವಿಕೆಟ್ ನೀಡಿದ ಬೇಡದ ದಾಖಲೆ ಪೂಜಾರ ಹೆಸರಿನಲ್ಲಿ ನಿರ್ಮಾಣವಾಗಿದೆ. ಆ್ಯಂಡರ್ಸನ್ ಬಿಟ್ಟರೆ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಿಯಾನ್ ಗೆ ಪೂಜಾರ ಹೆಚ್ಚು ಸಾರಿ ಔಟ್ ಆಗಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೇತೇಶ್ವರ್ ಪೂಜಾರ ಹೆಚ್ಚು ಸಾರಿ ಔಟ್ ಆಗಿದ್ದು
* 11 ಬಾರಿ, ಜಿಮ್ಮಿ ಆ್ಯಂಡರ್ಸನ್, ಇಂಗ್ಲೆಂಡ್
* 10 ಬಾರಿ, ನೇಥನ್ ಲಿಯಾನ್, ಆಸ್ಟ್ರೇಲಿಯಾ
* 7 ಸಾರಿ, ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ
* 6 ಬಾರಿ, ಜೋಶ್ ಹ್ಯಾಝಲ್ವುಡ್, ಆಸ್ಟ್ರೇಲಿಯಾ

ಶಾರ್ದೂಲ್ ಠಾಕೂರ್ ಅಬ್ಬರದ ಅರ್ಧ ಶತಕ
ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ ಈ ಇನ್ನಿಂಗ್ಸ್‌ನಲ್ಲೂ ಕೆಟ್ಟ ಬ್ಯಾಟಿಂಗ್‌ ಮುಂದುವರೆಸಿತ್ತು. ಆದರೆ ಭಾರತವನ್ನು ರನ್ ಕುಸಿತದಿಂದ ಪಾರು ಮಾಡಿದ್ದು ಬೌಲಿಂಗ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ನಾಯಕ ವಿರಾಟ್ ಕೊಹ್ಲಿಯ ಅರ್ಧ ಶತಕದ ಕೊಡುಗೆ ಮಾತ್ರ. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ 11 ರನ್ ಬಾರಿಸಿ ಕ್ರಿಸ್ ವೋಕ್ಸ್ ಓವರ್‌ನಲ್ಲಿ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರೆ, ಮತ್ತೊಬ್ಬ ಆರಂಭಿಕ ಆಟಗಾರ ಕೆಎಲ್ ರಾಹುಲ್ 17 ರನ್ ಬಾರಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್‌ ನೀಡಿದ್ದರು. ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಚೇತೇಶ್ವರ್ ಪೂಜಾರ ಕೂಡ 4 ರನ್ ಬಾರಿಸಿ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ ಬೇರ್ಸ್ಟೋವ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ 10 ರನ್ ಬಾರಿಸಿ ಔಟ್ ಆದರು. ಇನ್ನು ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ಉಮೇಶ್ ಯಾದವ್ 10 ರನ್ ಸೇರಿಸಿದರು. ಬ್ಯಾಟಿಂಗ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದು ಶಾರ್ದೂಲ್ ಠಾಕೂರ್. 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶಾರ್ದೂಲ್ 7 ಫೋರ್, 3 ಸಿಕ್ಸರ್ ಸೇರಿಸಿ 57 ರನ್ ಕೊಡುಗೆ ನೀಡಿದರು. ಅದೂ ಕೂಡ 36 ಎಸೆತಗಳಲ್ಲಿ ಅನ್ನೋದು ವಿಶೇಷ.

ಇಂಗ್ಲೆಂಡ್‌ ಪ್ರಮುಖ ವಿಕೆಟ್‌ಗಳು ಪತನ
ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿದೆ. ಆರಂಭಿಕ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್ ಕೂಡ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದೆ. ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ನಾಯಕ ಜೋ ರೂಟ್ 21 ರನ್ ಬಾರಿಸಿ ಔಟ್ ಆಗಿದ್ದಾರೆ. ಗುರುವಾರ ಮೊದಲನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ 17 ಓವರ್‌ ಮುಕ್ತಾಯಕ್ಕೆ 3 ವಿಕೆಟ್ ಕಳೆದು 53 ರನ್ ಬಾರಿಸಿದೆ. ಡೇವಿಡ್ ಮಲನ್ 26, ಕ್ರೇಗ್ ಓವರ್‌ಟನ್ 1 ರನ್ ಬಾರಿಸಿ ಆಡುತ್ತಿದ್ದರು.

ಓವಲ್‌ನಲ್ಲಿ ಪಂದ್ಯ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರ ಲೈಫ್ ಪಾರ್ಟ್ನರ್ಸ್ಓವಲ್‌ನಲ್ಲಿ ಪಂದ್ಯ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರ ಲೈಫ್ ಪಾರ್ಟ್ನರ್ಸ್

ಇಂಗ್ಲೆಂಡ್ ವಿರುದ್ಧ ಹೋರಾಟಕ್ಕೆ ಸಜ್ಜಾದ ಆಟಗಾರರು! | Oneindia Kannada

ಇತ್ತಂಡಗಳ ಪ್ಲೇಯಿಂಗ್ XI
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ಸಿ), ಆಲ್ಲಿ ಪೋಪ್, ಜಾನಿ ಬೈರ್‌ಸ್ಟೊ (ಡಬ್ಲ್ಯೂ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.

For Quick Alerts
ALLOW NOTIFICATIONS
For Daily Alerts
Story first published: Thursday, September 2, 2021, 23:49 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X