ಭಾರತ vs ಇಂಗ್ಲೆಂಡ್, 1st ODI: ಶತಕದಂಚಿನಲ್ಲಿ ಎಡವಿದ ಶಿಖರ್ ಧವನ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಭಾರತದ ಪರವಾಗಿ ಆರಂಭಿಕ ಆಟಗಾರ ಶಿಖರ್ ಧವನ್ ಶತಕದಂಚಿನಲ್ಲಿ ಎಡವಿ ವಿಕೆಟ್ ಒಪ್ಪಿಸಿದ್ದಾರೆ. 98 ರನ್‌ಗಳಿಸಿದ ಶಿಖರ್ ಧವನ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ.
ಶಿಖರ್ ಧವನ್ ಭಾರತದ ಪರವಾಗಿ 18ನೇ ಶತಕವನ್ನು ಗಳಿಸುವ ಸನಿಹದಲ್ಲಿದ್ದರು. ಅದ್ಭುತವಾಗಿ ಆಟವನ್ನಾಡಿದ ಶಿಖರ್ ಧವನ್ ಶತಕದ ಗಡಿಯಲ್ಲಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ. 106 ಎಸೆತ ಎದುರಿಸಿದ ಧವನ್ 98 ರನ್‌ಗಳಿಸಿದರು. ಆದರೆ ಅದ್ಭುತ ಇನ್ನಿಂಗ್ಸ್‌ನ ಮೂಲಕ ಧವನ್ ಟೀಮ್ ಇಂಡಿಯಾದಲ್ಲಿ ತಮ್ಮ ಪಾತ್ರವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಧವನ್.
ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಉತ್ತಮ ಆರಂಭವನ್ನು ನೀಡಿದ ಈ ಜೋಡಿ ಮೊದಲ ವಿಕೆಟ್‌ಗೆ 64 ರನ್‌ಗಳ ಕೊಡುಗೆಯನ್ನು ನೀಡಿದರು. 28 ರನ್‌ಗಳಿಸಿದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ಕೊಹ್ಲಿ ಧವನ್‌ಗೆ ಜೊತೆಯಾದರು.
ಧವನ್ ಹಾಗೂ ವಿರಾಟ್ ಕೊಹ್ಲಿ ಅದ್ಭುತವಾದ ಜೊತೆಯಾಟವನ್ನು ನೀಡಿದ್ದಾರೆ. ಎರಡನೇ ವಿಕೆಟ್‌ಗೆ ಈ ಜೋಡಿ 105 ರನ್‌ಗಳ ಜೊತೆಯಾಟವನ್ನು ಆಡಿದರು. ಕೊಹ್ಲಿ 56 ರನ್‌ಗಳಿಸಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ. ಬಳೀಕವೂ ಧವನ್ ತಮ್ಮ ಇನ್ನಿಂಗ್ಸ್‌ಅನ್ನು ಮುಂದುವರಿಸಿದರು.
ಆದರೆ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಎಸೆದ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ಶಿಖರ್ ಧವನ್ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೈಗೆ ನೀಡಿ ನಿರ್ಗಮಿಸಿದರು. ಈ ಮೂಲಕ ಶಿಖರ್ ಧವನ್ 6ನೇ ಬಾರಿಗೆ ನರ್ವಸ್ ನೈಂಟಿಗೆ ವಿಕೆಟ್ ಒಪ್ಪಿಸಿದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications