ಮೊದಲ ಟಿ20ಐಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ರೋಹಿತ್ ಪ್ರತಿಕ್ರಿಯೆ

ಅಹ್ಮದಾಬಾದ್: ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಮುಂಬರಲಿರುವ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಮುಂಚೂಣಿ ಆಟಗಾರನಾಗಿ ತಂಡಕ್ಕೆ ಬಲ ತುಂಬಲಿದ್ದಾರೆ. ಈ ಟಿ20ಐ ಸರಣಿ ಮಾರ್ಚ್ 12ರ ಶುಕ್ರವಾರದಿಂದ ಆರಂಭಗೊಳ್ಳಲಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡನೇ ಅತ್ಯಧಿಕ ರನ್ ಸರದಾರನಾಗಿ ಕಾಣಿಸಿಕೊಂಡಿದ್ದ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಆರಂಭಿಕರಾಗಿ ಯಾರು ಆಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಮೊದಲನೇ ಟಿ20ಐನಲ್ಲಿ ಆರಂಭಿಕರಾಗಿ ರೋಹಿತ್ ಜೊತೆಗೆ ಶಿಖರ್ ಧವನ್‌ಗೆ ಅಥವಾ ಕೆಎಲ್ ರಾಹುಲ್ ಅವರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿದ್ದಾರೆ.
ಮೊದಲನೇ ಟಿ20ಐನಲ್ಲಿ ನಿಮ್ಮ ಜೊತೆಗೆ ಆರಂಭಿಕರಾಗಿ ಯಾರು ಆಡ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೋಹಿತ್, ''ಆರಂಭಿಕ ಕಾಂಬಿನೇಶನ್ ಯಾವುದೆಂದು ನಾನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಶುಕ್ರವಾರದವರೆಗೂ ನಾವು ಕಾದು ನೋಡಬೇಕಾಗುತ್ತದೆ. ಯಾರೇ ಆರಂಭಿರಾಗಿ ಆಡಲಿ ತಂಡಕ್ಕೆ ಉತ್ತಮ ಆರಂಭ ನೀಡಬೇಕಷ್ಟೇ,' ಎಂದಿದ್ದಾರೆ.
ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಟಿ20ಐ ಸರಣಿಯಲ್ಲಿ ಆಡುತ್ತಿಲ್ಲ. ಮದುವೆಯ ಕಾರಣ ಬೂಮ್ರಾ ಸರಣಿಯಿಂದ ಹೊರಗಿರಲಿದ್ದಾರೆ. ಇನ್ನು ಮತ್ತೊಬ್ಬ ವೇಗಿ ಟಿ ನಟರಾಜನ್ ಕೂಡ ಸರಣಿಯಲ್ಲಿ ಆಡೋದು ಅನುಮಾನ. ಅಂದ್ಹಾಗೆ ಮೊದಲ ಟಿ20ಐ ಪಂದ್ಯ ಅಹ್ಮದಾಬಾದ್‌ನಲ್ಲಿ 7 pmಗೆ ಆರಂಭಗೊಳ್ಳಲಿದ್ದು, ಆರಂಭಿಕರಾಗಿ ಶರ್ಮಾ ಜೊತೆ ಕನ್ನಡಿಗ ರಾಹುಲ್ ಆಡುವ ನಿರೀಕ್ಷೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications