ಭಾರತ vs ಇಂಗ್ಲೆಂಡ್: ಕ್ರೀಡಾ ನಿರೂಪಕಿಯಾಗಿ ಕರ್ತವ್ಯಕ್ಕೆ ಮರಳಿದ ಬೂಮ್ರಾ ಪತ್ನಿ ಸಂಜನಾ ಗಣೇಶನ್

ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬೂಮ್ರಾ ಹಾಗೂ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದ ಬೂಮ್ರಾ ಅಂತಿಮ ಟೆಸ್ಟ್ ಪಂದ್ಯದ ಬಳಿಕ ತಂಡದಿಂದ ಬಿಡುಗಡೆಗೊಂಡಿದ್ದರು. ಸೀಮಿತ ಓವರ್‌ಗಳ ಸರಣಿಯಿಂದಲೂ ಬೂಮ್ರಾ ಹೊರಗುಳಿದಿದ್ದಾರೆ. ಆದರೆ ಬೂಮ್ರಾ ಪತ್ನಿ ಸಂಜನಾ ಗಣೇಶನ್ ಕರ್ತವ್ಯಕ್ಕೆ ಮರಳಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಿರೂಪಕಿಯಾಗಿ ಸಂಜನಾ ಗಣೇಶನ್ ಕಾಣಿಸಿಕೊಂಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಸಂಜನಾ ಗಣೇಶನ್ ಕಳೆದ ಕೆಲ ವರ್ಷಗಳಿಂದ ನಿರೂಪಕಿಯಾಗಿ ಕರ್ತವ್ಯದಲ್ಲಿದ್ದು ಶುಕ್ರವಾರ ನೇರಪ್ರಸಾರದಲ್ಲಿ ಭಾಗಿಯಾಗಿದ್ದಾರೆ.
ಮಾರ್ಚ್ 15ರಂದು ಗೋವಾದಲ್ಲಿ ನಡೆದ ಸರಳ ಸಮಾರಭದಲ್ಲಿ ಆಪ್ತ ಸಂಬಂಧಿಗಳು ಹಾಗೂ ಗೆಳೆಯರ ಸಮ್ಮುಖದಲ್ಲಿ ಬೂಮ್ರಾ ಹಾಗೂ ಸಂಜನಾ ಮದುವೆಯ ಬಂಧನಕ್ಕೆ ಒಳಗಾದರು. ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹದ ಸುದ್ದಿಗಳು ಹರಿದಾಡಿದ್ದರೂ ಈ ಬಗ್ಗೆ ಬೂಮ್ರಾ ಕುಟುಂಬಸ್ಥರು ಅಥವಾ ಸ್ನೇಹಿತರು ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
ಇಂಗ್ಲೆಂಡ್ ವಿರುದ್ಧದ ಸರಣಿ ನಡೆಯುತ್ತಿರುವ ಕಾರಣ ಎಲ್ಲಾ ಆಟಗಾರರು ಬಯೋಬಬಲ್‌ನಲ್ಲಿದ್ದಾರೆ. ಹೀಗಾಗಿ ಸಾಕಷ್ಟು ಗೌಪ್ಯವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಕೂಡ ಭಾಗಿಯಾಗಿರಲಿಲ್ಲ.
ಜಸ್ಪ್ರೀತ್ ಬೂಮ್ರಾ ಮುಂಬೈ ಇಂಡಿಯನ್ಸ್ ತಂಡವನ್ನು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ. ಮುಂಬೈ ತಂಡದ ಹೆಚ್ಚಿನ ಪಂದ್ಯಗಳು ಚೆನ್ನೈನಲ್ಲಿ ನಡೆಯುವ ಕಾರಣ ಮುಂಬೈ ತನ್ನ ಅಭ್ಯಾಸ ಶಿಬಿರವನ್ನು ಚೆನ್ನೈಗೆ ಸ್ಥಳಾಂತರಿಸಿದ್ದು ಅಲ್ಲಿ ತಂಡವನ್ನು ಬೂಮ್ರಾ ಕೂಡಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications