ಸೂರ್ಯಕುಮಾರ್ ಔಟ್ ತೀರ್ಪಿಗೆ ನೆಟ್ಟಿಗರು ಕಿಡಿ, ಏನಿದು ವಿವಾದ?: ವಿಡಿಯೋ

ಅಹ್ಮದಾಬಾದ್: ಅಂತೂ ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಭಾರತ ತಂಡದ ಪರ ಬ್ಯಾಟ್ ಬೀಸಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್ 4ನೇ ಟಿ20ಐ ಪಂದ್ಯದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಪರೂಪದ ದಾಖಲೆಯೂ ನಿರ್ಮಿಸಿ ಗಮನ ಸೆಳೆದಿದ್ದಾರೆ. ದ್ವಿತೀಯ ಟಿ20ಐ ಪಂದ್ಯದಲ್ಲಿ ಯಾದವ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದರಾದರೂ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ.
ಅಂತಾರಾಷ್ಟ್ರೀಯ ಇನ್ನಿಂಗ್ಸ್ ಆಡಿದ್ದ ಚೊಚ್ಚಲ ಪಂದ್ಯದಲ್ಲಿ ಎದುರಿಸಿದ ಆರಂಭಿಕ ಎಸೆತದಲ್ಲೇ ಸಿಕ್ಸ್ ಚಚ್ಚಿ ದಾಖಲೆ ನಿರ್ಮಿಸಿರುವ ಸೂರ್ಕುಮಾರ್ ಯಾದವ್, ವಿವಾದಕ್ಕೂ ಗುರಿಯಾಗಿದ್ದರು. ಸೂರ್ಯಕುಮಾರ್ ಔಟ್ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ.
ಅಬ್ಬರದ ಅರ್ಧ ಶತಕ
ಭಾರತ-ಇಂಗ್ಲೆಂಡ್ 4ನೇ ಟಿ20ಐ ಪಂದ್ಯದಲ್ಲಿ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 57 ರನ್ ಬಾರಿಸಿದ್ದರು. ಇದರಲ್ಲಿ 6 ಫೋರ್ಸ್, 3 ಸಿಕ್ಸರ್ ಕೂಡ ಸೇರಿತ್ತು. ಯಾದವ್ ರನ್ ಕೊಡುಗೆಯೊಂದಿಗೇ ಭಾರತ ಉತ್ತಮ ಗುರಿ (185 ರನ್) ನೀಡಲು ಕಾರಣರಾಗಿದ್ದರು.
ಔಟ್ ತೀರ್ಪು ವಿವಾದ
ಭಾರತದ ಇನ್ನಿಂಗ್ಸ್‌ನ 13.2ನೇ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆತಕ್ಕೆ ಯಾದವ್ ಬ್ಯಾಟ್ ತಾಗಿ ಚಿಮ್ಮಿದ ಚೆಂಡನ್ನು ಡೇವಿಡ್ ಮಲಾನ್ ಡೈವ್ ಮಾಡಿ ಕ್ಯಾಚ್ ಮಾಡಿದರು. ಆದರೆ ಮಲಾನ್ ಹಿಡಿದ ಕ್ಯಾಚ್ ಅನುಮಾನಾಸ್ಪದವಾಗಿತ್ತು. ಚೆಂಡು ನೆಲಕ್ಕೆ ತಾಗಿದಂತೆ ಕಾಣಿಸುತ್ತಿತ್ತು. ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಕೂಡ ಅದನ್ನು ಔಟ್ ಎಂದು ಅಂತಿಮವಾಗಿ ತೀರ್ಪಿತ್ತಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಔಟಾ? ನಾಟೌಟಾ?
ಸೂರ್ಯಕುಮಾರ್ ಯಾದವ್ ಔಟ್ ತೀರ್ಪು ನಿಜಕ್ಕೂ ವಿವಾದಾತ್ಮಕವಾಗಿದೆ. ಯಾಕೆಂದರೆ ಚೆಂಡು ನೆಲಕ್ಕೆ ತಾಗಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಡಿಆರ್‌ಎಸ್‌ನಲ್ಲೂ ಇದನ್ನು ಸುಲಭವಾಗಿ ಔಟ್ ಎಂದು ಹೇಳುವಂತಿರಲಿಲ್ಲ. ಆದರೆ ಅಂತಿಮವಾಗಿ ಸಾಫ್ಟ್ ಸಿಗ್ನಲ್ ಎಂದು 'ಔಟ್' ತೀರ್ಪು ನೀಡಲಾಗಿತ್ತು. ಬಗ್ಗೆ ನೆಟ್‌ನಲ್ಲಿ ಬಹಳಷ್ಟು ಟ್ವೀಟ್‌ಗಳು ಹರಿದಾಡುತ್ತಿವೆ. ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಈ ತೀರ್ಪಿನ ಬಗ್ಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications