ಸಚಿನ್ ದಾಖಲೆ ಸರಿಗಟ್ಟಲು ಹಾಗೂ ಪಾಂಟಿಂಗ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧಧ ಟಿ20 ಸರಣಿಯ ಬಳಿಕ ಈಗ ಏಕದಿನ ಸರಣಿಗೆ ಎರಡು ತಂಡಗಳು ಸಜ್ಜಾಗಿದೆ. ಮಂಗಳವಾರ ಪುಣೆಯ ಕ್ರೀಡಾಂಣಗಣದಲ್ಲಿ ಈ ಪಂದ್ಯ ನಡೆಯಲಿದ್ದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಇಬ್ಬರು ದಿಗ್ಗಜರ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಈ ತಂಡಗಳು ಮೂರು ಪಂದ್ಯಗಳಲ್ಲಿ ಕಾದಾಟವನ್ನು ನಡೆಸಲಿದೆ. ಮಾರ್ಚ್ 23 ರಿಂದ 28ರ ಅವಧಿಯಲ್ಲಿ ಈ ಪಂದ್ಯಗಳು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಈ ಪಂದ್ಯಗಳು ನಡೆಯಲಿದೆ. ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಸಿಡಿಸಿದ ಶತಕದ ದಾಖಲೆಯೊಂದನ್ನು ವಿರಾಟ್ ಕೊಹ್ಲಿ ಸರಿಗಟ್ಟುವ ಅವಕಾಶವಿದೆ.
2019ರದಲ್ಲಿ ಬಾಂಗ್ಲಾದೇಶದ ವಿರುದ್ಧ ವಿರಾಟ್ ಕೊಹ್ಲಿ ಶತಕವನ್ನು ದಾಖಲಿಸಿದ ಬಳಿಕ ಒಂದೇ ಒಂದು ಶತಕವನ್ನು ದಾಖಲಿಸಿಲ್ಲ. ಆದರೆ ಸದ್ಯ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ಸ್ಪಷ್ಟವಾಗಿದೆ. ಮುಂದಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತೀಯ ನಾಯಕನ ಬ್ಯಾಟ್‌ನಿಂದ ಶತಕ ಸಿಡಿಯಬಹುದು ಎಂಬ ನಿರೀಕ್ಷೆ ಭಾರತೀಯ ಅಭಿಮಾನಿಗಳಲ್ಲಿದೆ.

ಸಚಿನ್ ವಿಶ್ವದಾಖಲೆ ಸರಿಗಟ್ಟುತ್ತಾರಾ ಕೊಹ್ಲಿ
ಏಕದಿನ ಕ್ರಿಕೆಟ್‌ನಲ್ಲಿ ತವರಿನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟುವ ಸಾಧ್ಯತೆಯಿದೆ. ಸದ್ಯ ಈ ದಾಖಲೆ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ತವರಿನಲ್ಲಿ ಆಡಿದ 164 ಏಕದಿನ ಪಂದ್ಯಗಳಲ್ಲಿ 20 ಶತಕಗಳನ್ನು ತಮ್ಮ ವೃತ್ತಿ ಬದುಕಿನಲ್ಲಿ ದಾಖಲಿಸಿದ್ದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದು ಆಡಿದ 95 ಪಂದ್ಯಗಳಲ್ಲಿ 19 ಶತಕವನ್ನು ದಾಖಲಿಸಿದ್ದಾರೆ.

ತವರು ದೇಶದಲ್ಲಿ ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ಶತಕ ಗಳಿಸಿದ ಆಟಗಾರರ ಪಟ್ಟಿ
ಸಚಿನ್ ತೆಂಡೂಲ್ಕರ್ - 104 ಪಂದ್ಯಗಳಲ್ಲಿ 20
ವಿರಾಟ್ ಕೊಹ್ಲಿ - 95 ಪಂದ್ಯಗಳಲ್ಲಿ 19
ಹಾಶಿಮ್ ಆಮ್ಲಾ - 69 ಪಂದ್ಯಗಳಲ್ಲಿ 14
ರಿಕಿ ಪಾಂಟಿಂಗ್ - 153 ಪಂದ್ಯಗಳಲ್ಲಿ 13
ರಾಸ್ ಟೇಲರ್ - 106 ಪಂದ್ಯಗಳಲ್ಲಿ 12

ನಾಯಕನಾಗಿ ಪಾಂಟಿಂಗ್ ದಾಖಲೆ
ಇನ್ನು ಒಂದು ಶತಕ ಸಿಡಿದರೆ ಕೊಹ್ಲಿ ನಾಯಕನಾಗಿ ಅತ್ಯಂತ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಕೊಹ್ಲಿ ಹಾಗೂ ಪಾಂಟಿಂಗ್ 41 ಶತಕಗಳನ್ನು ಸಿಡಿಸಿದ್ದಾರೆ. ಒಂದು ಶತಕ ಆಸಿಸ್ ದಿಗ್ಗಜನನ್ನು ಹಿಂದಿಕ್ಕುವಂತೆ ಮಾಡಲಿದೆ.

ನಾಯಕನಾಗಿ ಅತಿ ಹೆಚ್ಚು ಶತಕ ದಾಖಲಿಸಿದ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ: 197 ಪಂದ್ಯಗಳಲ್ಲಿ 41
ರಿಕಿ ಪಾಂಟಿಂಗ್: 324 ಪಂದ್ಯಗಳಲ್ಲಿ 41
ಗ್ರೇಮ್ ಸ್ಮಿತ್: 286 ಪಂದ್ಯಗಳಲ್ಲಿ 33
ಸ್ಟೀವ್ ಸ್ಮಿತ್: 93 ಪಂದ್ಯಗಳಲ್ಲಿ 20
ಮೈಕೆಲ್ ಕ್ಲಾರ್ಕ್: 139 ಪಂದ್ಯಗಳಲ್ಲಿ 19
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications