ವೈರಲ್ ವಿಡಿಯೋ: ಧವನ್, ಕೊಹ್ಲಿಯ ಭಾಂಗ್ರಾ ಡ್ಯಾನ್ಸು ಕಂಡಿರಾ?

ಚೆಲ್ಮ್ಸಫೋರ್ಡ್, ಜುಲೈ 28: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸವಾಲು ಸ್ವೀಕರಿಸಲಿರುವ ಭಾರತ ಇಂಗ್ಲೆಂಡ್ ನಲ್ಲಿ ಎಸೆಕ್ಸ್ ವಿರುದ್ಧ ಅಭ್ಯಾಸ ಶುಕ್ರವಾರ (ಜು.27) ಪಂದ್ಯವನ್ನಾಡಿತ್ತು. ಈ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಭಾಂಗ್ರಾ ಮ್ಯೂಸಿಕ್ಕಿಗೆ ಕುಣಿದು ಗಮನ ಸೆಳೆದಿದ್ದಾರೆ.
ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್-ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಶುಕ್ರವಾರ ನಡೆದ ಮೂರನೇ ದಿನ ದ ಅಭ್ಯಾಸ ಪಂದ್ಯಕ್ಕಾಗಿ ಮೈದಾನಕ್ಕಿಳಿಯುತ್ತ ಕೊಹ್ಲಿ, ಧವನ್ ಮೈದಾನದ ಬಳಿ ನಿಂತಿದ್ದ ವಾದ್ಯ ಸಂಗೀತಗಾರರು ನುಡಿಸಿದ ಸಂಗೀತಕ್ಕೆ ಸ್ಟೆಪ್ ಹಾಕಿದರು.
ಈ ವೀಡಿಯೋವನ್ನು ಎಸೆಕ್ಸ್ ತಂಡವೂ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಜೊತೆಗೆ 'ಚೆಲ್ಮ್ಸಫೋರ್ಡ್ ಮೈದಾನದಲ್ಲಿ ಉತ್ತಮ ಆಟವಾಡಿದ ಬಿಸಿಸಿಐಯ ವಿರಾಟ್ ಕೊಹ್ಲಿ, ಎಸ್ ಧವನ್ ಸಂಭ್ರಮಿಸಿದ ಪರಿ!' ಅಂತ ಒಂದು ಸಾಲನ್ನೂ ಸೇರಿಸಿಕೊಂಡಿದೆ.
ಶುಕ್ರವಾರದ ಅಭ್ಯಾಸ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 21.2 ಓವರ್ ಗಳಲ್ಲಿ 2 ವಿಕೆಟ್ ಕಳೆದು 89 ರನ್ ಪೇರಿಸಿತು. ಆ ಬಳಿಕ ಪಂದ್ಯವನ್ನು ನಿಲ್ಲಿಸಲಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 100.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 395 ಪೇರಿಸಿತ್ತು. ಎಸೆಕ್ಸ್ 94 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 359 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications