Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದಿಂದ ಐರ್ಲೆಂಡ್ ಪ್ರವಾಸ 2018, ಟಿ20 ಪಂದ್ಯಗಳ ವೇಳಾಪಟ್ಟಿ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಮೊದಲಿಗೆ ಐರ್ಲೆಂಡ್ ವಿರುದ್ಧ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

ಬೆಂಗಳೂರು, ಜೂನ್ 26: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಮೊದಲಿಗೆ ಐರ್ಲೆಂಡ್ ವಿರುದ್ಧ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

ಬುಧವಾರ(ಜೂನ್ 27)ದಂದು ಮೊದಲ ಪಂದ್ಯ ನಿಗದಿಯಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತಕ್ಕೆ ಇದು ಅಭ್ಯಾಸ ಪಂದ್ಯವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಲ್ಲಿ ಸರಣಿ ವೈಟ್ ವಾಶ್ ಮಾಡಿರುವ ಇಂಗ್ಲೆಂಡ್ ತಂಡವು ಉತ್ತಮ ಲಯದಲ್ಲಿದೆ.

ಸದ್ಯ ವಿರಾಟ್ ಕೊಹ್ಲಿ ಪಡೆ ಲಂಡನ್ನಿನ ಮರ್ಚಂಟ್ಸ್ ಟೇಲರ್ ಸ್ಕೂಲ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸನಿರತವಾಗಿದೆ. ಉಮೇಶ್ ಯಾದವ್ ಹಾಗೂ ಭುವನೇಶ್ವರ್ ಕುಮಾರ್ ನೇತೃತ್ವದ ಬೌಲಿಂಗ್ ಪಡೆಯಲ್ಲಿ ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ ಹಾಗು ಶಿಖರ್ ಧವನ್ ಮತ್ತೊಮ್ಮೆ ಜೋಡಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

ಇನ್ನೊಂದೆಡೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಭರ್ಜರಿ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಅವರು ಒಟ್ಟಿಗೆ ನೆಟ್ ಅಭ್ಯಾಸದಲ್ಲಿ ತೊಡಗಿದ್ದರು.

ಮಾರ್ಚ್ ನಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಎಂಎಸ್ ಧೋನಿ, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಕೊಗ್ಲಿ ಆಡಿರಲಿಲ್ಲ. ಬೆಂಗಳೂರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೂ ಕೊಹ್ಲಿ, ಭುವಿ, ಬೂಮ್ರಾ ಅಲಭ್ಯರಾಗಿದ್ದರು.

ಒಟ್ಟಾರೆಯಾಗಿ ಭಾರತ ಹಾಗೂ ಐರ್ಲೆಂಡ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಒಂದು ಟಿ20ಐ ಪಂದ್ಯ ಇದರಲ್ಲಿ ಸೇರಿದೆ. 2017ರ ಚಾಂಪಿಯನ್ಸ್ ಟ್ರೋಫಿ ನಂತರ ಭಾರತ 32 ಏಕದಿನ ಪಂದ್ಯ, 18 ಟಿ20ಐ ಪಂದ್ಯಗಳನ್ನಾಡಿದೆ. ಉಮೇಶ್ ಯಾದವ್ 2017ರ ಸೆಪ್ಟೆಂಬರ್ ನಂತರ ನಿಗದಿತ ಓವರ್ ಗಳ ಪಂದ್ಯವಾಡುತ್ತಿದ್ದಾರೆ. ಸಿದ್ದಾರ್ಥ್ ಕೌಲ್ ಗೆ ಇದು ಮೊದಲ ಟಿ20 ಸರಣಿಯಾಗಿದೆ.

ಭಾರತದ ಐರ್ಲೆಂಡ್ ಪ್ರವಾಸ 2018 ; 2 ಟಿ20ಐ ಪಂದ್ಯಗಳು
* ಜೂನ್ 27 : ಮೊದಲ ಟಿ20ಐ, ಡಬ್ಲಿನ್, 8:30 PM
* ಜೂನ್ 29: ಎರಡನೇ ಟಿ20ಐ, ಡಬ್ಲಿನ್, 8:30 PM

ಎಲ್ಲಿ ಪ್ರಸಾರ: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ(ಎಸ್ ಪಿಎನ್). ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿಯಲ್ಲಿ ಇಂಗ್ಲೀಷ್ ಹಾಗೂ ಸೋನಿ ಟೆನ್ 3 ಹಾಗೂ ಎಚ್ ಡಿಯಲ್ಲಿ ಹಿಂದಿ ಕಾಮೆಂಟ್ರಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.

ತಂಡಗಳು:
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಲೋಕೇಶ್ ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಸಿದ್ದಾರ್ಥ್ ಕೌಲ್, ಉಮೇಶ್ ಯಾದವ್.

ಐರ್ಲೆಂಡ್: ಗ್ಯಾರಿ ವಿಲ್ಸನ್ (ನಾಯಕ), ಆಂಡ್ರ್ಯು ಬಲ್ಬಿರ್ನೆ, ಪೀಟರ್ ಚೇಸ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟ್ಲ್, ಆಂಡ್ರಿ ಮೆಕ್ ಬ್ರೆನ್, ಕೆವಿನ್ ಓ ಬ್ರಿಯಾನ್, ವಿಲಿಯಂ ಪೋರ್ಟರ್ ಫೀಲ್ಡ್, ಸ್ಟುವರ್ತ್ ಪೊಯಿಟರ್, ಬೊಯ್ ರಾಂಕಿನ್, ಜೇಮ್ಸ್ ಶಾನನ್, ಸಿಮಿ ಸಿಂಗ್, ಪಾಲ್ ಸ್ಟರ್ಲಿಂಗ್, ಸ್ಟುವರ್ಟ್ ಥಾಮ್ಸನ್.

Story first published: Tuesday, June 26, 2018, 16:38 [IST]
Other articles published on Jun 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+