For Quick Alerts
ALLOW NOTIFICATIONS  
For Daily Alerts
 

ಭಾರತ vs ಐರ್ಲೆಂಡ್ ಟಿ20 ಮುಖಾಮುಖಿ: ಹೆಡ್-ಟು-ಹೆಡ್, ಟಾಪ್ ಸ್ಕೋರರ್, ವಿಕೆಟ್ ಟೇಕರ್; ಇತರ ಅಂಕಿಅಂಶ

ಶುಕ್ರವಾರ, ಆಗಸ್ಟ್ 18ರಂದು ಡಬ್ಲಿನ್‌ನ ದಿ ವಿಲೇಜ್‌ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಪ್ರವಾಸಿ ಭಾರತ ಮತ್ತು ಆತಿಥೇಯ ಐರ್ಲೆಂಡ್‌ ತಂಡಗಳು ಸೆಣಸಾಡಲು ಸಜ್ಜಾಗಿವೆ.

ಸುದೀರ್ಘ ಗಾಯದ ಚೇತರಿಕೆ ನಂತರ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿರುವ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 2023ರ ಏಷ್ಯಾ ಕಪ್ ಹಾಗೂ 2023ರ ವಿಶ್ವಕಪ್‌ಗೆ ಮುನ್ನ ಪೂರ್ವತಯಾರಿ ನಡೆಸಲಿದ್ದಾರೆ.

India vs Ireland T20 Head-to-Head: Most Run Scorer, Most Wicket Taker; And Other Statistics


ಐರ್ಲೆಂಡ್‌ ವಿರುದ್ಧದ ಸರಣಿ ಗೆಲುವಿನೊಂದಿಗೆ, ಐದು ಪಂದ್ಯಗಳ ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಸೋಲಿಗೆ ಕಹಿಯನ್ನು ಮರೆಯುವ ಗುರಿಯನ್ನು ಪ್ರವಾಸಿ ತಂಡ ಹೊಂದಿದೆ.

ಬರೋಬ್ಬರಿ ಒಂದು ವರ್ಷದ ವಿಶ್ರಾಂತಿಯ ಬಳಿಕ ತಂಡಕ್ಕೆ ಮರಳಿರುವ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಮತ್ತೆ ಮೈದಾನದಲ್ಲಿ ನೋಡಲು ಭಾರತೀಯ ಅಭಿಮಾನಿಗಳು ಕಾತರರಾದ್ದಾರೆ.

ಅಲ್ಲದೆ, ಐಪಿಎಲ್ 2023ರ ಸ್ಟಾರ್ ಪ್ರತಿಭೆಗಳಾದ ರಿಂಕು ಸಿಂಗ್, ಜಿತೇಶ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಇತರ ಯುವ ಆಟಗಾರರು ಭಾರತ ತಂಡದ ಭಾಗವಾಗಿದ್ದಾರೆ. ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಈ ಸರಣಿ ಉತ್ತಮ ವೇದಿಕೆಯಾಗಿದೆ.

India vs Ireland T20 Head-to-Head: Most Run Scorer, Most Wicket Taker; And Other Statistics

ಗಮನಾರ್ಹವಾಗಿ, ಭಾರತ ಮತ್ತು ಐರ್ಲೆಂಡ್‌ ತಂಡಗಳು ಟಿ20 ಸ್ವರೂಪದಲ್ಲಿ ಈವರೆಗೆ ಐದು ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ಭಾರತ ತಂಡ ಗೆಲುವು ಸಾಧಿಸಿ ಅಜೇಯವಾಗಿ ಮುನ್ನುಗ್ಗುತ್ತಿದೆ.

ಮೊದಲ ಟಿ20 ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಉಭಯ ತಂಡಗಳ ನಡುವಿನ ಹಿಂದಿನ ಸರಣಿಯ ಕೆಲವು ರೋಮಾಂಚನಕಾರಿ ಅಂಕಿಅಂಶಗಳು ಇಲ್ಲಿವೆ.

ತಂಡದ ಅತ್ಯಧಿಕ ಮೊತ್ತ: ಭಾರತ 225/7 (2022) - ಡಬ್ಲಿನ್‌ನ ಮಲಾಹೈಡ್

ಅತ್ಯಧಿಕ ಯಶಸ್ವಿ ಚೇಸ್: ಭಾರತ 15.3 ಓವರ್‌ಗಳಲ್ಲಿ 113/2 (2009) - ನಾಟಿಂಗ್‌ಹ್ಯಾಮ್‌

ಕನಿಷ್ಠ ಮೊತ್ತ: ಐರ್ಲೆಂಡ್‌ 70 ರನ್‌ಗಳಿಗೆ ಆಲೌಟ್ (2018) - ಡಬ್ಲಿನ್‌ನ ಮಲಾಹೈಡ್

ವೈಯಕ್ತಿಕ ಗರಿಷ್ಠ ಸ್ಕೋರ್: ದೀಪಕ್ ಹೂಡಾ (ಭಾರತ) - 104 ರನ್, ಡಬ್ಲಿನ್‌ನ ಮಲಾಹೈಡ್ (2022)

ಅತ್ಯುತ್ತಮ ಜೊತೆಯಾಟ: ಸಂಜು ಸ್ಯಾಮ್ಸನ್-ದೀಪಕ್ ಹೂಡಾ (ಭಾರತ) 176 ರನ್- ಡಬ್ಲಿನ್‌ನ ಮಲಾಹೈಡ್ (2022)

ಅತ್ಯುತ್ತಮ ಬೌಲಿಂಗ್: ಜಹೀರ್ ಖಾನ್ (ಭಾರತ) - 3 ಓವರ್‌ಗಳಲ್ಲಿ 19/4 - ನಾಟಿಂಗ್‌ಹ್ಯಾಮ್‌ (2009)

ಅಧಿಕ ರನ್ ಗಳಿಸಿದವರು: ದೀಪಕ್ ಹೂಡಾ (ಭಾರತ) - 2 ಇನ್ನಿಂಗ್ಸ್‌ಗಳಲ್ಲಿ 151 ರನ್

ಹೆಚ್ಚು ವಿಕೆಟ್‌ ಪಡೆದ ಬೌಲರ್: ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ (ಭಾರತ) - 7 ವಿಕೆಟ್

ಅಧಿಕ ಶತಕ: ದೀಪಕ್ ಹೂಡಾ (ಭಾರತ) - 1 ಶತಕ

ಅತಿ ಹೆಚ್ಚು ಅರ್ಧಶತಕ: ರೋಹಿತ್ ಶರ್ಮಾ (ಭಾರತ) - 2 ಅರ್ಧಶತಕ

ಹೆಚ್ಚು ಸಿಕ್ಸರ್: ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ (ಭಾರತ) - 8 ಸಿಕ್ಸರ್‌ಗಳು

ಹೆಚ್ಚಿನ ಬೌಂಡರಿ: ದೀಪಕ್ ಹೂಡಾ (ಭಾರತ) - 15 ಬೌಂಡರಿಗಳು

ಹೆಚ್ಚಿನ ಔಟ್ ಮಾಡಿದ ಕೀಪರ್‌ಗಳು: ಎಂಎಸ್ ಧೋನಿ (ಭಾರತ) - 3 ಇನ್ನಿಂಗ್ಸ್‌ಗಳಲ್ಲಿ 3 ಔಟ್ (1 ಕ್ಯಾಚ್‌ ಮತ್ತು 2 ಸ್ಟಂಪಿಂಗ್), ಲೋರ್ಕನ್ ಟಕರ್ (ಐರ್ಲೆಂಡ್) - 3 ಔಟ್ (3 ಕ್ಯಾಚ್‌)

ಹೆಚ್ಚಿನ ಕ್ಯಾಚ್‌ ಪಡೆದ ಫೀಲ್ಡರ್: ಜಾರ್ಜ್ ಡಾಕ್ರೆಲ್ ಮತ್ತು ಸ್ಟುವರ್ಟ್ ಥಾಂಪ್ಸನ್ (ಐರ್ಲೆಂಡ್) - 3 ಕ್ಯಾಚ್‌ಗಳು

ಮೊದಲ ಟಿ20 ಪಂದ್ಯಕ್ಕೆ ಭಾರತ vs ಐರ್ಲೆಂಡ್ ಸಂಭಾವ್ಯ ಆಡುವ 11ರ ಬಳಗ

ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಜೋಶ್ ಲಿಟಲ್, ಕ್ರೇಗ್ ಯಂಗ್, ಬ್ಯಾರಿ ಮೆಕಾರ್ಥಿ.

ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯ್, ಮುಖೇಶ್ ಕುಮಾರ್.

Story first published: Friday, August 18, 2023, 10:28 [IST]
Other articles published on Aug 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+