ಭಾರತ vs ಐರ್ಲೆಂಡ್: ಆಡಿರುವ 4 ಟಿ20 ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಇಲ್ಲಿದೆ ಮಾಹಿತಿ

ಪ್ರಸ್ತುತ ಟೀಮ್ ಇಂಡಿಯಾ 2 ತಂಡಗಳಾಗಿ ವಿಂಗಡನೆಗೊಂಡಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿದೆ.
ಹೌದು, ಏಕಕಾಲಕ್ಕೆ ಟೀಮ್ ಇಂಡಿಯಾ ಮತ್ತೊಮ್ಮೆ 2 ವಿವಿಧ ರಾಷ್ಟ್ರಗಳ ಪ್ರವಾಸವನ್ನು ಕೈಗೊಂಡು ಕ್ರಿಕೆಟ್ ಸರಣಿಗಳಲ್ಲಿ ಭಾಗವಹಿಸುತ್ತಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಅನುಭವವಿರುವ ಹಾಗೂ ಫಾರ್ಮ್‌ನಲ್ಲಿರುವ ಆಟಗಾರರ ತಂಡವನ್ನು ಪ್ರಕಟಿಸಿದ್ದು, ಐರ್ಲೆಂಡ್ ಪ್ರವಾಸಕ್ಕೆ ಯುವ ಆಟಗಾರರ ಹಾಗೂ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಉತ್ತಮ ಪ್ರದರ್ಶನ ನೀಡಿ ಕಮ್ ಬ್ಯಾಕ್ ಮಾಡಿರುವ ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.
ಇನ್ನು ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಈಗಾಗಲೇ ಆತಿಥೇಯರ ವಿರುದ್ಧದ 2 ಪಂದ್ಯಗಳ ಪೈಕಿ ಪ್ರಥಮ ಟಿ ಟ್ವೆಂಟಿ ಪಂದ್ಯವನ್ನು ಆಡಿ ಮುಗಿಸಿದ್ದು, ಈ ಪಂದ್ಯದಲ್ಲಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಉಳಿದೊಂದು ಪಂದ್ಯವನ್ನು ಗೆದ್ದು ವೈಟ್ ವಾಶ್ ಬಳಿಯುವ ನಿರೀಕ್ಷೆಯಲ್ಲಿದೆ. ಇನ್ನು ಎರಡೂ ತಂಡಗಳ ನಡುವಿನ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯ ಕಡೆ ಗಮನ ಹರಿಸಿದರೆ, ಒಟ್ಟಾರೆ 4 ಟಿ20 ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳ ಸಂಕ್ಷಿಪ್ತ ವಿವರ ಹಾಗೂ ಫಲಿತಾಂಶದ ಮಾಹಿತಿ ಈ ಕೆಳಕಂಡಂತಿದೆ.

ಪ್ರಥಮ ಮುಖಾಮುಖಿ
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಮೊದಲ ಬಾರಿಗೆ ನಡೆದಿದ್ದ ಟಿ ಟ್ವೆಂಟಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 8 ವಿಕೆಟ್ ನಷ್ಟಕ್ಕೆ 112 ರನ್ ಕಲೆಹಾಕಿ ಎದುರಾಳಿ ಭಾರತಕ್ಕೆ 113 ರನ್‌ಗಳ ಗುರಿಯನ್ನು ನೀಡಿತ್ತು. ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 112 ರನ್ ಕಲೆಹಾಕಿ 8 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತ್ತು.

ಎರಡನೇ ಪಂದ್ಯ
ಎರಡನೇ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ರೋಹಿತ್ ಶರ್ಮಾ 97 ಹಾಗೂ ಶಿಖರ್ ಧವನ್ 74 ರನ್ ಕಲೆ ಹಾಕಿದ ಕಾರಣ 5 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿ ಐರ್ಲೆಂಡ್ ತಂಡಕ್ಕೆ ಗೆಲ್ಲಲು 209 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ 9 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿದ ಐರ್ಲೆಂಡ್ 76 ರನ್‌ಗಳ ಹೀನಾಯ ಸೋಲನ್ನು ಕಂಡಿತು. ಈ ಪಂದ್ಯ ಐರ್ಲೆಂಡ್‌ನ ಮಲಾಹಿಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು.

ಮೂರನೇ ಮುಖಾಮುಖಿ ಪಂದ್ಯ
ಮೂರನೇ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೆಎಲ್ ರಾಹುಲ್ 70 ಹಾಗೂ ಸುರೇಶ್ ರೈನಾ 69 ರನ್ ಚಚ್ಚಿದ್ದ ಕಾರಣ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿ ಎದುರಾಳಿ ಐರ್ಲೆಂಡ್ ತಂಡಕ್ಕೆ 214 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ 70 ರನ್‌ಗಳಿಗೆ ಆಲ್ ಔಟ್ ಆದ ಐರ್ಲೆಂಡ್ 143 ರನ್‌ಗಳ ಬೃಹತ್ ಅಂತರದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಈ ಪಂದ್ಯ ಕೂಡ ಐರ್ಲೆಂಡ್‌ನ ಮಲಾಹಿಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು.

ನಾಲ್ಕನೇ ಟಿ20
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಟಿ ಟ್ವೆಂಟಿ ಪಂದ್ಯ ನಿನ್ನೆಯಷ್ಟೇ ( ಜೂನ್ 26 ) ನಡೆಯಿತು. ಡಬ್ಲಿನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟಾದ ಕಾರಣ ಪಂದ್ಯದ ಓವರ್ ಸಂಖ್ಯೆಯನ್ನು 12ಕ್ಕೆ ಇಳಿಸಲಾಯಿತು. ಹಾಗೂ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕಾರಣ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿ ಟೀಮ್ ಇಂಡಿಯಾಗೆ 109 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 9.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಬಾರಿಸಿ 7 ವಿಕೆಟ್‍ಗಳ ಜಯವನ್ನು ದಾಖಲಿಸಿತು.
ಈ ಮೂಲಕ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ಒಟ್ಟು 4 ಪಂದ್ಯಗಳು ಜರುಗಿದ್ದು ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಗೆದ್ದು ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications