Ind vs Eng: ಭಾರತ ವಿರುದ್ಧ ಆಡಲಿದ್ದಾರೆ ಪೂಜಾರ, ಪಂತ್, ಬುಮ್ರಾ, ಪ್ರಸಿದ್ಧ್ ಕೃಷ್ಣ!

ಜುಲೈ 1ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ಐದನೇ ಮತ್ತು ಮರುನಿಗದಿಪಡಿಸಿದ ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸಿದ್ಧವಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಈಗಾಗಲೇ ನೆಟ್ಸ್ ಸೆಷನ್ ಅಭ್ಯಾಸ ಆರಂಭಿಸಿದ್ದಾರೆ. ಹೊಡೆದಿದ್ದಾರೆ.
ಜೂನ್ 22ರ ಬುಧವಾರದಂದು ಅಭ್ಯಾಸದ ಮೊದಲು ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದ ಸದಸ್ಯರನ್ನು ಉದ್ದೇಶಿಸಿ ಭಾವಾನಾತ್ಮಕ ಭಾಷಣ ಮಾಡುತ್ತಿದ್ದರು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಸರಣಿ ನಡುವೆ ಅನೇಕ ಆಟಗಾರರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ನಂತರ ಕೊನೆಯ ಟೆಸ್ಟ್ ಅನ್ನು ಈ ವರ್ಷಕ್ಕೆ ಮರು ನಿಗದಿಪಡಿಸಲಾಗಿದೆ.

2007-08ರ ನಂತರ ಇಂಗ್ಲೆಂಡ್‌ನಲ್ಲಿ ಸರಣಿ ಗೆಲ್ಲುವ ತವಕ
ರಾಹುಲ್ ದ್ರಾವಿಡ್ ನಾಯಕತ್ವದ ತಂಡವು ಯಶಸ್ಸನ್ನು ಸಾಧಿಸಿದ 2007-08ರ ನಂತರ ಇಂಗ್ಲೆಂಡ್‌ನಲ್ಲಿ ತನ್ನ ಮೊದಲ ಸರಣಿಯನ್ನು ವಶಪಡಿಸಿಕೊಳ್ಳಲು ಭಾರತಕ್ಕೆ ಗೆಲುವು ಅಥವಾ ಡ್ರಾ ಮಾಡಿಕೊಳ್ಳುವ ಅಗತ್ಯವಿದೆ.
ಜೂನ್ 23ರಂದು ಮಧ್ಯಾಹ್ನ 3.30ರಿಂದ ಪ್ರಾರಂಭವಾಗುವ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯು ಲೀಸೆಸ್ಟರ್‌ಶೈರ್ ತಂಡದ ವಿರುದ್ಧ ಸೆಣಸಲಿದ್ದಾರೆ. ಜುಲೈ 1ರಿಂದ 5ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡುವ ಮೊದಲು ಆಡುವ ಏಕೈಕ ಅಭ್ಯಾಸ ಪಂದ್ಯ ಇದಾಗಿದೆ.

ಕನಿಷ್ಠ ನಾಲ್ಕು ಆಟಗಾರರು ಭಾರತದ ವಿರುದ್ಧ ಆಡಲಿದ್ದಾರೆ
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಈ ಅಭ್ಯಾಸ ಪಂದ್ಯದಲ್ಲಿ ಭಾರತದ ಕೆಲವು ಆಟಗಾರರು ಅಂದರೆ ಕನಿಷ್ಠ ನಾಲ್ಕು ಆಟಗಾರರು ಭಾರತದ ವಿರುದ್ಧ ಲೀಸೆಸ್ಟರ್‌ಶೈರ್ ತಂಡದ ಪರವಾಗಿ ಆಡುತ್ತಾರೆ.
ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ, ರಿಷಭ್ ಪಂತ್, ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹವರು ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಪರ ಭಾರತ ತಂಡದ ಎದುರಾಳಿಯಾಗಲಿದ್ದಾರೆ.

ಭಾರತವು ಎಲ್ಲ ಆಟಗಾರರನ್ನು ಕಣಕ್ಕಿಳಿಸುವ ಭಾಗ
Cricbuzz ಪ್ರಕಾರ ಈ ವ್ಯವಸ್ಥೆಯನ್ನು ಬಿಸಿಸಿಐ, ಇಸಿಬಿ ಮತ್ತು ಎಲ್‌ಸಿಸಿಸಿ ತೀರ್ಮಾನ ಮಾಡಿದೆ. ಭಾರತೀಯ ಆಟಗಾರರು ತಮ್ಮದೇ ಆಟಗಾರರ ವಿರುದ್ಧ ಏಕೆ ಆಡುತ್ತಿದ್ದಾರೆಂದು ನಿರ್ದಿಷ್ಠವಾಗಿ ತಿಳಿದಿಲ್ಲವಾದರೂ, ಇದು ಪ್ರತಿಸ್ಪರ್ಧಿ ತಂಡದ ಆಟಗಾರರ ಕೊರತೆಯ ಸಂದರ್ಭವಾಗಿರಬಹುದು ಅಥವಾ ಉತ್ತಮ ಅಭ್ಯಾಸವನ್ನು ಹೊಂದಲು ಭಾರತವು ಎಲ್ಲ ಆಟಗಾರರನ್ನು ಕಣಕ್ಕಿಳಿಸುವ ಭಾಗವಾಗಿದೆ.
ಜೂನ್ 22ರಂದು ವಿರಾಟ್ ಕೊಹ್ಲಿ ಅಭ್ಯಾಸಕ್ಕೆ ಬರಲಿಲ್ಲ ಎಂದು ಅದೇ ವೆಬ್‌ಸೈಟ್ ವರದಿ ಮಾಡಿದೆ. ಜೂನ್ 21ರಂದು ತಂಡವು ತರಬೇತಿ ಪಡೆಯುತ್ತಿದ್ದಾಗ ಅವರು ಅಲ್ಲಿದ್ದರು ಎಂಬುದನ್ನು ಮರೆಯುವಂತಿಲ್ಲ. ವಿರಾಟ್ ಕೊಹ್ಲಿ ಕೋವಿಡ್-19 ನಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು, ಆದರೆ ಮೂಲಗಳು ಸುಳ್ಳು ಎಂದಿವೆ. ತಂಡವು ಅಂತಹ ವರದಿಯನ್ನು ತಳ್ಳಿಹಾಕಿದೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಖಂಡಿತವಾಗಿಯೂ ಆಡಲಿದ್ದಾರೆ ಎಂದು ಹೇಳಿದೆ.

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್(ಗಾಯಗೊಂಡಿದ್ದು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ), ಶುಭ್‌ನನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications