Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ VS ನ್ಯೂಜಿಲೆಂಡ್ ಮೊದಲ ಟಿ20: ಸಂಭಾವ್ಯ ಪ್ಲೇಯಿಂಗ್ 11, ಕೀ ಪ್ಲೇಯರ್ಸ್

ಟಿ20 ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಮತ್ತು ಎರಡು ಟೆಸ್ಟ್‌ ಪಂದ್ಯಗಳನ್ನ ಆಡಲು ಸಿದ್ಧಗೊಂಡಿದೆ. ಹೊಸ ನಾಯಕ ಮತ್ತು ಹೊಸ ಮುಖ್ಯ ಕೋಚ್‌ ಅಡಿಯಲ್ಲಿ ಭಾರತವು ಹೊಸ ಹೆಜ್ಜೆಯನ್ನಿಡಲಿದೆ.

ಜೈಪುರದಲ್ಲಿ ನಾಳೆ (ನ. 17) ನಡೆಯಲಿರುವ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳಲ್ಲಿ ಹೊಸ ನಾಯಕನ ನೇತೃತ್ವದಲ್ಲಿ ತಂಡ ಮುನ್ನೆಡೆಯಲಿದೆ. ಟೀಂ ಇಂಡಿಯಾ ಪರ ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್ ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ಶರ್ಮಾ ಹೊಸ ನಾಯಕನಾಗಿ ಮಿಂಚಲಿದ್ದಾರೆ. ಜೊತೆಗೆ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಮಾರ್ಗದರ್ಶನ ಇರಲಿದೆ.

ಅತ್ತ ನ್ಯೂಜಿಲೆಂಡ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಮುಂಬರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಗಮನ ವಹಿಸುವ ಸಲುವಾಗಿ ಕೇನ್ ವಿಲಿಯಮ್ಸನ್ ಟಿ20 ಪಂದ್ಯಗಳಲ್ಲಿ ಭಾಗವಹಿಸುತ್ತಿಲ್ಲ. ಕೇನ್ ಬದಲಿಗೆ ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಕಿವೀಸ್ ತಂಡವನ್ನ ಮುನ್ನೆಡೆಸಲಿದ್ದಾರೆ.

ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸಂಜೆ 7ಕ್ಕೆ ಪಂದ್ಯ

ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸಂಜೆ 7ಕ್ಕೆ ಪಂದ್ಯ

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂಗೆ ಈಗಾಗಲೇ ಆಗಮಿಸಿರುವ ಟೀಂ ಇಂಡಿಯಾ ಆಟಗಾರರು ಹೊಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಡಿಯಲ್ಲಿ ಒಂದು ದಿನದ ಅಭ್ಯಾಸವನ್ನು ಸಹ ಮುಗಿಸಿದೆ. ಟೀಂ ಇಂಡಿಯಾ ಬುಧವಾರ (ನ. 17) ನಡೆಯಲಿರುವ ಟಿ20 ಪಂದ್ಯದಲ್ಲಿ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ.

ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದ ನೇರಪ್ರಸಾರ ಎಂದಿನಂತೆ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ. ಡಿಸ್ನಿ+ಹಾಟ್‌ಸ್ಟಾರ್ ಆನ್‌ಲೈನ್‌ನಲ್ಲೂ ಪಂದ್ಯ ವೀಕ್ಷಿಸಬಹುದಾಗಿದೆ.

18 ಬಾರಿ ಉಭಯ ತಂಡಗಳ ಮುಖಾಮುಖಿ

18 ಬಾರಿ ಉಭಯ ತಂಡಗಳ ಮುಖಾಮುಖಿ

ಭಾರತ-ನ್ಯೂಜಿಲೆಂಡ್ ತಂಡಗಳು ಇದುವರೆಗೂ 18 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಉಭಯ ತಂಡಗಳು ತುಂಬಾ ಕುತೂಹಲಕಾರಿ ದಾಖಲೆಗಳನ್ನು ಸಹ ಹೊಂದಿವೆ. ಭಾರತವು 8 ಪಂದ್ಯಗಳಲ್ಲಿ ಗೆಲುವನ್ನ ಸಾಧಿಸಿದ್ರೆ, ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಂದಿಲ್ಲ.

ಭಾರತ, ನ್ಯೂಜಿಲೆಂಡ್ ಕೀ ಪ್ಲೇಯರ್ಸ್

ಭಾರತ, ನ್ಯೂಜಿಲೆಂಡ್ ಕೀ ಪ್ಲೇಯರ್ಸ್

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮುನ್ನಡೆಯುತ್ತಿರುವ ಟೀಂ ಇಂಡಿಯಾ ಪರ ನಾಯಕ ರೋಹಿತ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್ ಪ್ರಮುಖ ಕೀ ಪ್ಲೇಯರ್ಸ್ ಆಗಿದ್ದಾರೆ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್‌, ಡೆರಿಲ್ ಮಿಚೆಲ್ ಪ್ರಮುಖ ಅಸ್ತ್ರಗಳಾಗಿದ್ದಾರೆ.

ಹಿಟ್‌ಮ್ಯಾನ್ ವರ್ಸಸ್ ಟ್ರೆಂಟ್‌ಬೌಲ್ಟ್‌

ಹಿಟ್‌ಮ್ಯಾನ್ ವರ್ಸಸ್ ಟ್ರೆಂಟ್‌ಬೌಲ್ಟ್‌

ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಪ್ರಮುಖ ಆಟಗಾರರ ನಡುವೆ ಸ್ಟಾರ್ ವಾರ್ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಟ್ರೆಂಟ್ ಬೌಲ್ಟ್‌ ಮುಖಾಮುಖಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಮತ್ತು ಜೇಮ್ಸ್ ನೀಶಮ್ ಬ್ಯಾಟಲ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11

ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11

ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (WK), ವೆಂಕಟೇಶ್ ಅಯ್ಯರ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಮತ್ತು ಯುಜವೇಂದ್ರ ಚಹಾಲ್

ನ್ಯೂಜಿಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ 11

ನ್ಯೂಜಿಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ 11

ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್‌, ಜೇಮ್ಸ್‌ ನೀಶಮ್, ಮಿಚೆಲ್ ಸ್ಯಾಂಟ್ನರ್, ಆ್ಯಡಮ್ ಮಿಲ್ನೆ, ಟಿಮ್ ಸೌಥಿ (ನಾಯಕ), ಇಶ್ ಸೋಧಿ, ಟ್ರೆಂಟ್ ಬೌಲ್ಟ್, ಟಾಡ್‌ ಆಸ್ಟಲ್‌

ಪಿಚ್ ರಿಪೋರ್ಟ್‌, ಹವಾಮಾನ

ಪಿಚ್ ರಿಪೋರ್ಟ್‌, ಹವಾಮಾನ

ಜೈಪುರದ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗಿದೆ. ಈ ಪಿಚ್‌ನಲ್ಲಿ ಸುಮಾರು 170+ ಮೊತ್ತವನ್ನು ನೀಡುವ ಪಂದ್ಯವನ್ನು ನಾವು ನೋಡಬಹುದು. ಜೈಪುರದಲ್ಲಿ ಹಗಲಿನ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ಆಗಿದೆ ಮತ್ತು ರಾತ್ರಿಯಾಗುತ್ತಿದ್ದಂತೆ ಅದು 15 ಡಿಗ್ರಿಗಳವರೆಗೆ ಇಳಿಯಬಹುದು. ಹ್ಯುಮಿಡಿಟಿ ಕೇವಲ 21 ಪ್ರತಿಶತ ಮತ್ತು ಸಾಮಾನ್ಯ ಮಬ್ಬು ಇರುತ್ತದೆ ಆದರೆ ಇಬ್ಬನಿಯ ಪರಿಣಾಮವು ತುಂಬಾ ಕಡಿಮೆ ಇರುತ್ತದೆ.

Story first published: Tuesday, November 16, 2021, 15:59 [IST]
Other articles published on Nov 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+