ಟೀಂ ಇಂಡಿಯಾಗೆ 165 ರನ್‌ಗಳ ಟಾರ್ಗೆಟ್: ಅಬ್ಬರಿಸಿದ ಮಾರ್ಟಿನ್ ಗಪ್ಟಿಲ್

ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್, ಟೀಂ ಇಂಡಿಯಾಗೆ 165ರನ್‌ಗಳ ಗುರಿಯನ್ನ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ಪರ ಓಪನರ್ ಮಾರ್ಟಿನ್ ಗಪ್ಟಿಲ್ ಮತ್ತು ಡೇರಿಲ್ ಮಿಚೆಲ್ ಕಣಕ್ಕಿಳಿದ್ರು. ಆದ್ರೆ ಮೊದಲ ಓವರ್‌ನಲ್ಲಿ ಟೀಮ್ ಇಂಡಿಯಾ ಪರ ಬೆಂಕಿ ಉಂಡೆಯಂತಹ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ ತಮ್ಮ ಇನ್‌ಸ್ವಿಂಗ್ ಮೂಲಕ ಮೂರನೇ ಎಸೆತದಲ್ಲೇ ಮಿಚೆಲ್‌ರನ್ನ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದ್ರು.
ಮೊದಲ ಓವರ್‌ನಲ್ಲೇ ವಿಕೆಟ್ ಉರುಳಿದ್ರು ಹೆದರದ ಗಪ್ಟಿಲ್ ನಿಧಾನಗತಿಯ ಆರಂಭ ಪಡೆದ್ರು ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 42 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಮತ್ತು ಮೂರು ಆಕರ್ಷಕ ಬೌಂಡರಿಗಳೊಂದಿಗೆ 70 ರನ್ ಸಿಡಿಸಿ ಔಟಾದ್ರು.
ಮತ್ತೊಂದೆಡೆ ಗಪ್ಟಿಲ್‌ಗೆ ಭರ್ಜರಿ ಸಾಥ್ ನೀಡಿದ ಮಾರ್ಕ್ ಚಾಪ್ಮನ್ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅರ್ಧಶತಕ ದಾಖಲಿಸಿದ್ರು. 50 ಎಸೆತಗಳಲ್ಲಿ 63 ರನ್ ದಾಖಲಿಸಿದ ಚಾಪ್‌ಮನ್ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳಿದ್ವು.
ಭುವನೇಶ್ವರ್ ಕುಮಾರ್ ಒಂದೆಡೆ ತಮ್ಮ ಕ್ಲಾಸ್ ಬೌಲಿಂಗ್ ಪ್ರದರ್ಶಿಸಿದ್ರೆ, ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ತಮ್ಮ 50ನೇ ಟಿ20 ಪಂದ್ಯದಲ್ಲಿ 23ರನ್ ನೀಡಿದ ಎರಡು ವಿಕೆಟ್ ಕಬಳಿಸಿದ್ರು. ರವಿಚಂದ್ರನ್ ಅಶ್ವಿನ್ 2017ರ ಬಳಿಕ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದು, 65 ಪಂದ್ಯಗಳನ್ನ ಮಿಸ್ ಮಾಡಿಕೊಂಡ ಬಳಿಕ ಕಂಬ್ಯಾಕ್ ಪಂದ್ಯದಲ್ಲೇ ಮಿಂಚಿದ್ದಾರೆ.
ಇನ್ನು ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಸ್ವಿಂಗ್ ಬೌಲರ್ ಭುವಿ 4 ಓವರ್‌ಗಳಲ್ಲಿ 24 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದಾರೆ. ಆದ್ರೆ ತಂಡದ ಪರ ದುಬಾರಿಯಾದ ದೀಪಕ್ ಚಹಾರ್ ನಾಲ್ಕು ಓವರ್‌ಗಳಲ್ಲಿ 42 ರನ್ ನೀಡಿ ಒಂದು ವಿಕೆಟ್ ಪಡೆದ್ರು. ಇನ್ನು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ತನ್ನದಾಗಿಸಿಕೊಂಡ್ರು. ಅಕ್ಷರ್ ಪಟೇಲ್ ವಿಕೆಟ್ ಇಲ್ಲದೆ 31 ರನ್ ನೀಡಿದ್ದಾರೆ.
ನ್ಯೂಜಿಲೆಂಡ್ 20 ಓವರ್‌ಗಳ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಗೆಲುವಿಗೆ 165 ರನ್‌ಗಳ ಟಾರ್ಗೆಟ್ ನೀಡಿದೆ. ನ್ಯೂಜಿಲೆಂಡ್ ಪರ ಗಪ್ಟಿಲ್, ಚಾಪ್ಮನ್ ಹೊರತುಪಡಿಸಿ, ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಶೂನ್ಯಕ್ಕೆ ಔಟಾದ್ರು. ವಿಕೆಟ್ ಕೀಪರ್ ಸೀಫರ್ಟ್ 12 ರನ್ ಗಳಿಸಿದ್ರೆ, ರಚಿನ್ ರವೀಂದ್ರ 7, ಮಿಚೆಲ್ ಸ್ಯಾಂಟ್ನರ್ ಅಜೇಯ 4ರನ್ ಗಳಿಸಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications