Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ LIVE SCORE

Team india first test

ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುತ್ತಿರುವ ಭಾರತ ರಣತಂತ್ರದೊಂದಿಗೆ ಕಣಕ್ಕಿಳಿದಿದೆ.

ಟಿ-20 ಸರಣಿಯನ್ನ ಭರ್ಜರಿಯಾಗಿ ಗೆದ್ದಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲೂ ಶುಭಾರಂಭ ಮಾಡುವ ಕನಸನ್ನು ಕಂಡಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನ ಅಜಿಂಕ್ಯ ರಹಾನೆ ಮುನ್ನೆಡೆಸಲಿದ್ದಾರೆ. ನ್ಯೂಜಿಲೆಂಡ್ ತಂಡವನ್ನ ನಾಯಕ ಕೇನ್‌ ವಿಲಿಯಮ್ಸನ್ ಮುನ್ನೆಡೆಸುತ್ತಿದ್ದು, ಎರಡು ಸ್ಪಿನ್ನರ್‌ಗಳನ್ನ ಕೀವಿಸ್ ತಂಡ ಕಣಕ್ಕಿಳಿಸುತ್ತಿದೆ.

ಭಾರತದ ಪರ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಲೆಜೆಂಡರಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್‌ರಿಂದ ಕ್ಯಾಪ್ ಸ್ವೀಕರಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ಪರ ಸ್ಪಿನ್ ಆಲ್‌ರೌಂಡರ್ ರಚಿನ್ ರವೀಂದ್ರ ಮೊದಲ ಟೆಸ್ಟ್‌ ಪಂದ್ಯವನ್ನಾಡಲಿದ್ದಾರೆ.

1
51919

ಭಾರತದ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಚೇತೇಶ್ವರ ಪೂಜಾರ (ಉಪನಾಯಕ), ಅಜಿಂಕ್ಯ ರಹಾನೆ (ನಾಯಕ), ವೃದ್ಧಿಮಾನ್ ಸಹಾ (WK), ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್

ನ್ಯೂಜಿಲೆಂಡ್ ಪ್ಲೇಯಿಂಗ್ 11
ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಟಿಮ್ ಸೌಥಿ, ಅಜಾಜ್ ಪಟೇಲ್, ಕೈಲ್ ಜೇಮಿಸನ್, ವಿಲಿಯಂ ಸೊಮರ್ವಿಲ್ಲೆ

ಅಜಿಂಕ್ಯ ರಹಾನೆಗೆ ಸವಾಲು!
ಭಾರತದ ಪರ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಟೀಂ ಇಂಡಿಯಾವನ್ನ ಮುನ್ನೆಡೆಸುತ್ತಿದ್ದಾರೆ. ಕೊಹ್ಲಿ ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.

ರಹಾನೆಗಿದು ಮೊದಲ ಟೆಸ್ಟ್‌ ಪಂದ್ಯದ ನಾಯಕತ್ವ ಏನು ಅಲ್ಲ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಟೆಸ್ಟ್ ಸರಣಿ ಗೆಲುವಿನಲ್ಲಿ ರಹಾನೆ ನಾಯಕತ್ವವು ಪ್ರಮುಖ ಪಾತ್ರವಹಿಸಿತ್ತು. ಅದ್ರಲ್ಲೂ ಟೀಂ ಇಂಡಿಯಾ ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿರುವುದು ಕುತೂಹಲ ಮೂಡಿಸಿದೆ. ಮೊದಲ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವುದು ಭಾರತಕ್ಕೆ ಲಾಭವಾಗಿದೆ.

ನ್ಯೂಜಿಲೆಂಡ್‌ ಬಲ ಹೆಚ್ಚಿಸಿದ ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ಪರ ಫುಲ್ ಟೈಮ್ ನಾಯಕ ಕೇನ್ ವಿಲಿಯಮ್ಸನ್ ವಾಪಸ್ಸಾತಿ ತಂಡದ ಬಲ ಹೆಚ್ಚಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿದಿದೆ.

ಈಗಾಗಲೇ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿರುವಂತೆ ಮೂರು ಸ್ಪಿನ್ನರ್‌ಗಳಿಂದ ಕಣಕ್ಕಿಳಿಯಲಿದೆ ಎನ್ನಲಾಗಿತ್ತು. ಆದರೆ ಕಿವೀಸ್ ಪಡೆ ಇಬ್ಬರು ಸ್ಪಿನ್ನರ್‌ಗಳನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಂಡಿದೆ. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಚಿನ್ ರವೀಂದ್ರ ಮತ್ತು ವಿಲಿಯಂ ಸೊಮರ್ವಿಲ್ಲೆ ಕಿವೀಸ್ ಪರ ಆಡುತ್ತಿರುವ ಸ್ಪಿನ್ನರ್‌ಗಳಾಗಿದ್ದಾರೆ.

ಧೋನಿ ಸಿಎಸ್‌ಕೆ ತಂಡದಲ್ಲೇ ಇರ್ತಾರೆ ಆದರೆ ರೈನಾ ಮಾತ್ರ ಆಚೆ | Oneindia Kannada

ಟಿ-20 ಸರಣಿಯನ್ನ ಭರ್ಜರಿಯಾಗಿ ಗೆದ್ದಿರುವ ಟೀಮ್ ಇಂಡಿಯಾವನ್ನ ಅವರದ್ದೇ ನೆಲದಲ್ಲಿ ಮಣಿಸುವುದು ಸಾಮಾನ್ಯ ವಿಚಾರವಾಗಿಲ್ಲ. ಭಾರತವು ತವರಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನ ಹೊಂದಿದ್ದು, ನ್ಯೂಜಿಲೆಂಡ್ ತಂಡಕ್ಕೆ ಕಠಿಣ ಸವಾಲಾಗಲಿದೆ.

Story first published: Thursday, November 25, 2021, 9:31 [IST]
Other articles published on Nov 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+