ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಏಕದಿನ ಪಂದ್ಯ: ಕಿವೀಸ್ ವಿರುದ್ಧ ಭಾರತಕ್ಕೆ ಗೆಲುವು

ಪುಣೆ, ಅಕ್ಟೋಬರ್ 25: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 6ವಿಕೆಟ್ ಗಳ ಜಯ ದಾಖಲಿಸಿದೆ. ಟೀಂ ಇಂಡಿಯಾ 231ರನ್ ಗುರಿಯನ್ನು 46 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿತು. ಮೂರು ಪಂದ್ಯಗಳ ಏಕದಿನ ಸರಣಿ ಸದ್ಯಕ್ಕೆ 1-1 ಸಮಬಲ ಕಂಡಿದೆ.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 230 ರನ್ ಪೇರಿಸಿ ಭಾರತಕ್ಕೆ 231 ರನ್ ಟಾರ್ಗೆಟ್ ನೀಡಿತು.

India vs New Zealand, 2nd ODI in Pune: Bhuvi Sends Back Guptill

ಆರಂಭದಲ್ಲಿ ನ್ಯೂಜಿಲೆಂಡ್ ಗೆ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಆರಂಭದಲ್ಲಿ ಭುವನೇಶ್ವರ್ ಕುಮಾರ್ ಗುಪ್ತಿಲ್ ಹಾಗು ವಿಲಿಯಮ್ಸನ್ ವಿಕೆಟ್ ಪಡೆದು ನ್ಯೂಜಿಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು.

ನ್ಯೂಜಿಲೆಂಡ್ ಪರ ಗುಪ್ಟಿಲ್ 11, ಮನ್ರೋ 10, ಕೇನ್ ವಿಲಿಯಮ್ಸನ್ 3, ರಾಸ್ ಟೇಲರ್ 21, ಲಾಥಮ್ 38, ನಿಕೋಲ್ಸ್ 42, ಗ್ರಾಂಡ್ ಹೊಮ್ನೆ 41, ಸ್ಯಾಂಟ್ನರ್ 29 ಮತ್ತು ಸೌಥಿ ಅಜೇಯ 25 ರನ್ ಗಳಿಸಿದರು.

ಭಾರತ ಪರ ಭುವನೇಶ್ವರ್ ಕುಮಾರ್ 3, ಬೂಮ್ರಾ ಮತ್ತು ಚಹಲ್ ತಲಾ 2, ಹಾರ್ದಿಕ್ ಪಾಂಡ್ಯಾ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.

2nd ODI: India restrict New Zealand to 230/9

ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲಿಯೇ ಭುವನೇಶ್ವರ್ ಕುಮಾರ್ ಆಘಾತ ನೀಡಿದ್ದಾರೆ. 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಟಿನ್ ಗುಫ್ತಿಲ್ ಅವರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್ ಹಾದಿ ತೋರಿಸಿದರು.

India: Rohit Sharma, Shikhar Dhawan, Virat Kohli(c), Dinesh Karthik, Kedar Jadhav, MS Dhoni(w), Hardik Pandya, Axar Patel, Bhuvneshwar Kumar, Jasprit Bumrah, Yuzvendra Chahal

New Zealand: Martin Guptill, Colin Munro, Kane Williamson(c), Ross Taylor, Tom Latham(w), Henry Nicholls, Colin de Grandhomme, Mitchell Santner, Adam Milne, Tim Southee, Trent Boult

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X