ಭಾರತದ ಗೆಲುವಿಗೆ 154 ರನ್‌ಗಳ ಟಾರ್ಗೆಟ್: ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಹರ್ಷಲ್ ಪಟೇಲ್

ರಾಂಚಿಯ ಜೆಎಸ್‌ಸಿಯ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್, ಟೀಂ ಇಂಡಿಯಾಗೆ 154 ರನ್‌ಗಳ ಗುರಿಯನ್ನ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ಪರ ಓಪನರ್ ಮಾರ್ಟಿನ್ ಗಪ್ಟಿಲ್ ಮತ್ತು ಡೇರಿಲ್ ಮಿಚೆಲ್ ಸ್ಫೋಟಕ ಆರಂಭವನ್ನೇ ನೀಡಿದ್ರು. ಮೊದಲ ಓವರ್‌ನಲ್ಲೇ ಭುವನೇಶ್ವರ್ ಕುಮಾರ್ 14ರನ್‌ಗಳನ್ನ ನೀಡಿ ದುಬಾರಿಯಾದ್ರು.
ಭರ್ಜರಿ ಆರಂಭ ನೀಡಿದ್ದ ಈ ಜೋಡಿಗೆ ಬ್ರೇಕ್ ನೀಡಿದ್ದು, ದೀಪಕ್ ಚಹಾರ್. 15 ಎಸೆತಗಳಲ್ಲಿ 31 ರನ್ ಸಿಡಿಸಿ ಟೀಂ ಇಂಡಿಯಾಗೆ ಕಂಟಕವಾಗಿದ್ದ ಗಪ್ಟಿಲ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ಮೊದಲ ವಿಕೆಟ್ ಉರುಳುತ್ತಿದ್ದಂತೆ ಟೀಂ ಇಂಡಿಯಾ ಬೌಲರ್‌ಗಳು ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 21 ರನ್‌ಗಳಿಸಿದ್ದ ಮಾರ್ಕ್ ಚಾಪ್ಮನ್ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದ್ರೆ, 31 ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಡೇರಿಲ್ ಮಿಚೆಲ್, ಭಾರತದ ಪರ ಚೊಚ್ಚಲ ಟಿ20 ಪಂದ್ಯವನ್ನಾಡುತ್ತಿರುವ ಹರ್ಷಲ್ ಪಟೇಲ್‌ರ ಮೊದಲ ವಿಕೆಟ್ ಬಲಿಯಾದ್ರು.
ಇನ್ನು ಮಿಡಲ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ರವಿಚಂದ್ರನ್ ಅಶ್ವಿನ್ 13ರನ್‌ಗಳಿಸಿದ್ದ ಟಿಮ್ ಸೀಫರ್ಟ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ್ರು. ಇದರ ಜೊತೆಗೆ ಉತ್ತಮ ಆಟವಾಡ್ತಿದ್ದ ಗ್ಲೆನ್ ಫಿಲಿಪ್ಸ್, ಚೊಚ್ಚಲ ಪಂದ್ಯವನ್ನಾಡಿದ ಹರ್ಷಲ್ ಪಟೇಲ್‌ರ 2 ವಿಕೆಟ್ ತನ್ನದಾಗಿಸಿಕೊಂಡ್ರು.
ಭಾರತದ ಪ್ರಬಲ ಬೌಲಿಂಗ್ ದಾಳಿಗೆ ಸಾಕ್ಷಿಯೆಂಬಂತೆ ಕಿವೀಸ್‌ನ ಸ್ಫೋಟಕ ಆಟಗಾರ ಜೇಮ್ಸ್ ನೀಶಮ್ 12 ಎಸೆತಗಳಲ್ಲಿ ಗಳಿಸಿದ್ದು ಕೇವಲ 3 ರನ್‌ಗಳು. ಭುವನೇಶ್ವರ್ ಕುಮಾರ್ 18ನೇ ಓವರ್‌ನಲ್ಲಿ ನೀಶಮ್ ವಿಕೆಟ್ ಪಡೆದುಕೊಂಡ್ರು.
ಕೊನೆಯ ಎರಡು ಓವರ್‌ಗಳಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಆ್ಯಡಮ್ ಮಿಲ್ನೆ ರನ್‌ಗಳಿಸಲು ಪರದಾಡಿದ್ರು. ಸ್ಯಾಂಟ್ನರ್ 8ರನ್‌ಗಳಿಸಿದ್ರೆ, ಆ್ಯಡಮ್ ಮಿಲ್ನೆ ಐದು ರನ್‌ಗಳಿಸಿದ್ರು. ಮೂರು ಓವರ್‌ಗಳಲ್ಲಿ ದುಬಾರಿಯಾಗಿದ್ದ ದೀಪಕ್ ಚಹಾರ್ ಕೊನೆಯ ಓವರ್‌ನಲ್ಲಿ ಕೇವಲ ಏಳು ರನ್ ನೀಡಿ ಕಿವೀಸ್ ತಂಡಕ್ಕೆ ಕಡಿವಾಣ ಹಾಕಿದ್ರು.
ನ್ಯೂಜಿಲೆಂಡ್ ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153ರನ್ ಕಲೆಹಾಕಿ ಟೀಂ ಇಂಡಿಯಾಗೆ 154ರನ್‌ಗಳ ಗುರಿ ನೀಡಿದೆ. ಭಾರತದ ಪರ ಹರ್ಷಲ್ ಪಟೇಲ್ ಎರಡು ವಿಕೆಟ್ ಕಬಳಿಸಿದ್ರೆ, ಭುವಿ, ದೀಪಕ್, ಅಕ್ಷರ್ ಪಟೇಲ್, ಅಶ್ವಿನ್ ತಲಾ ಒಂದು ವಿಕೆಟ್ ಪಡೆದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications