ಅದ್ಭುತ ಕ್ಯಾಚ್‌ನಿಂದ ಡ್ಯಾರಿಲ್ ದಂಗುಬಡಿಸಿದ ದಿನೇಶ್ ಕಾರ್ತಿಕ್: ವಿಡಿಯೋ

ವೆಲ್ಲಿಂಗ್ಟನ್, ಫೆಬ್ರವರಿ 6: ನ್ಯೂಜಿಲ್ಯಾಂಡ್-ಭಾರತ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತದ ದಿನೇಶ್ ಕಾರ್ತಿಕ್ ಮಾಡಿದ ಕ್ಯಾಚ್, 'ಕ್ಯಾಚ್ ಆಫ್ ದ ಸೀಸನ್' ಎಂದು ಕರೆಯಲ್ಪಡುತ್ತಿದೆ. ಅದ್ಭುತ ಕ್ಯಾಚ್ ಮೂಲಕ ಕಾರ್ತಿಕ್ ಡ್ಯಾರಿಲ್ ಮಿಚೆಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು.
ವೆಲ್ಲಿಂಗ್ಟನ್ ವೆಸ್ಟ್ ಪ್ಯಾಕ್ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 6) ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 80 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಆದರೆ ದಿನೇಶ್ ಕಾರ್ತಿಕ್ ಅವರ ಕ್ಯಾಚ್ ಭಾರತದ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ವೆಸ್ಟ್ ಪ್ಯಾಕ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ನ್ಯೂಜಿಲ್ಯಾಂಡ್ ಯುವ ಆಟಗಾರ ಡ್ಯಾರಿಲ್ ಮಿಚೆಲ್ ಕ್ರೀಸ್‌ನಲ್ಲಿದ್ದರು. ಹಾರ್ದಿಕ್ ಪಾಂಡ್ಯ ಅವರ 14.6 ಓವರ್‌ನಲ್ಲಿ ಡ್ಯಾರಿನ್ ಬ್ಯಾಟ್ ತಾಗಿದ ಚೆಂಡು ಸಿಕ್ಸ್ ಲೈನ್ ದಾಟುವುದರಲ್ಲಿತ್ತು. ಆದರೆ ದಾಟಲಿಲ್ಲ, ದಿನೇಶ್ ಬಿಡಲಿಲ್ಲ!
ಚೆಂಡು ಬಂದತ್ತ ಹಾರಿದ ಕಾರ್ತಿಕ್ ಚೆಂಡನ್ನು ಹಿಡಿದರು. ಆದರೆ ಕೆಳಗಿಳಿಯುವಾಗ ಚೆಂಡನ್ನು ಎಸೆದು ಮತ್ತೆ ಕ್ಯಾಚ್ ಮಾಡಿದರು. ಇದು ಔಟೋ ನಾಟೌಟೋ ಅನ್ನೋದು ಅಂಪೈರ್‌ಗಾಗಲಿ ಸ್ವತಃ ದಿನೇಶ್‌ಗಾಗಲಿ ಪಕ್ಕಾ ಆಗಿರಲಿಲ್ಲ. ರಿವ್ಯೂ ಗಮನಿಸುವಾಗ ಕಾರ್ತಿಕ್ ಅದ್ಭುತ ಕ್ಯಾಚ್ ಮಾಡಿದ್ದು ಕಾಣಿಸಿತು. ರಿವ್ಯೂ ಗಮನಿಸಿ ಮಿಚೆಲ್ ಕೂಡ ಒಮ್ಮೆ ಅವಕ್ಕಾದರು!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications