For Quick Alerts
ALLOW NOTIFICATIONS  
For Daily Alerts
 

ಮುಂಬೈ ಟೆಸ್ಟ್: ಭಾರತೀಯ ಬೌಲರ್‌ಗಳ ದಾಳಿಗೆ ಕಿವೀಸ್ ತತ್ತರ; 2ನೇ ದಿನದಾಟದಂತ್ಯಕ್ಕೆ ಭಾರತಕ್ಕೆ 332 ಲೀಡ್

India vs New Zealand: India lead by 332 runs at the end of Day 2 of second test

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಹಿಡಿತ ಸಾಧಿಸಿದ್ದು ಮುನ್ನಡೆ ಸಾಧಿಸಿದೆ.

ಹೌದು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ 69 ರನ್ ಕಲೆಹಾಕಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಉತ್ತಮ ಹಂತದಲ್ಲಿದೆ. ಈ ಮೂಲಕ ಎರಡನೆ ದಿನದಾಟದಂತ್ಯಕ್ಕೆ ಭಾರತ 332 ರನ್‌ಗಳ ಬೃಹತ್ ಮುನ್ನಡೆಯನ್ನು ಸಾಧಿಸಿದೆ.

ಈ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಂತ್ಯಕ್ಕೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಮೊದಲ ದಿನದಾಟದ ಅಂತ್ಯದ ವೇಳೆಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ಅಮೋಘ ಶತಕ ಸಿಡಿಸಿ ಅಜೇಯ 120 ರನ್ ಗಳಿಸಿದ್ದರು ಹಾಗೂ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವೃದ್ಧಿಮಾನ್ ಸಹಾ 53 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದ್ದರು. ಹೀಗೆ ಮೊದಲನೇ ದಿನದಾಟದಂದು ವಿಕೆಟ್ ಕಾಯ್ದುಕೊಂಡಿದ್ದ ಈ ಇಬ್ಬರು ಆಟಗಾರರ ಪೈಕಿ ವೃದ್ಧಿಮಾನ್ ಸಹಾ ಎರಡನೇ ದಿನದಾಟ ಆರಂಭವಾದ ಕೆಲವೇ ಸಮಯದಲ್ಲಿ ಅಜಾಜ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಎರಡನೇ ದಿನವೂ ಸಹ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ ತಮ್ಮ ವಿಕೆಟ್ ಬೇಟೆ ಮುಂದುವರಿಸಿದರು.

ಹೀಗೆ ವೃದ್ಧಿಮಾನ್ ಸಹಾ ಔಟ್ ಆದ ನಂತರ ರವಿಚಂದ್ರನ್ ಅಶ್ವಿನ್ ಶೂನ್ಯ ಸುತ್ತಿದರೆ, ಅಕ್ಷರ್ ಪಟೇಲ್ 52 ರನ್ ಕಲೆ ಹಾಕಿದರು. ಇನ್ನುಳಿದಂತೆ ಜಯಂತ್ ಯಾದವ್ 12 ಮತ್ತು ಮೊಹಮ್ಮದ್ ಸಿರಾಜ್ 4 ರನ್ ಕಲೆ ಹಾಕಿದರು. ಹಾಗೂ ಮೊದಲನೇ ದಿನದಾಟದಂದು ಆಕರ್ಷಕ ಶತಕ ಸಿಡಿಸಿದ್ದ ಮಯಾಂಕ್ ಅಗರ್ವಾಲ್ ದ್ವಿತೀಯ ದಿನದಾಟದಲ್ಲಿ 150 ರನ್ ಬಾರಿಸಿ ಅಜಾಜ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲ್ ಔಟ್ ಆಯಿತು.

ಟೀಮ್ ಇಂಡಿಯಾ ಆಟಗಾರರನ್ನು 325 ರನ್‌ಗಳಿಗೆ ಕಟ್ಟಿ ಹಾಕಿ ತನ್ನ ಪಾಲಿನ ಮೊದಲನೇ ಇನ್ನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ ಭಾರತೀಯ ಬೌಲರ್‌ಗಳ ದಾಳಿಗೆ ಅಕ್ಷರಷಃ ತತ್ತರಿಸಿದೆ. 28.1 ಓವರ್‌ಗಳಲ್ಲಿ ಕೇವಲ 62 ರನ್‌ಗಳಿಗೆ ನ್ಯೂಜಿಲೆಂಡ್‌ ಆಲ್ಔಟ್ ಆಗಿದೆ. ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್, ಮೊಹಮ್ಮದ್ ಸಿರಾಜ್ 3 ವಿಕೆಟ್, ಅಕ್ಷರ್ ಪಟೇಲ್ 2 ವಿಕೆಟ್ ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದರು. ಹೀಗೆ ನ್ಯೂಜಿಲೆಂಡ್ ತಂಡವನ್ನು 62 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ ಎರಡನೇ ದಿನವೇ ತನ್ನ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ನ್ನು ಕೂಡ ಆರಂಭಿಸಿತು.

ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಬದಲಾವಣೆಯಾಗಿದ್ದು ಮಯಾಂಕ್ ಅಗರ್ವಾಲ್ ಮತ್ತು ಶುಬ್ ಮನ್ ಗಿಲ್ ಬದಲಾಗಿ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ್ ಪೂಜಾರ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿದೆ. ಹೀಗೆ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ್ ಪೂಜಾರ ಜೋಡಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟಿದ್ದು, ಎರಡನೇ ದಿನದಾಟದಂತ್ಯಕ್ಕೆ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೇ 69 ರನ್ ಗಳಿಸಿದ್ದು 332 ರನ್‌ಗಳ ದೊಡ್ಡ ಮಟ್ಟದ ಮುನ್ನಡೆಯನ್ನು ಸಾಧಿಸಿದೆ.

ಇನ್ನು ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿರುವ ಚೇತೇಶ್ವರ್ ಪೂಜಾರ 51 ಎಸೆತಗಳಲ್ಲಿ 29 ರನ್ ಕಲೆಹಾಕಿದ್ದರೆ, ಮತ್ತೋರ್ವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 75 ಎಸೆತಗಳಲ್ಲಿ 38 ರನ್ ಕಲೆಹಾಕಿದ್ದಾರೆ.

Story first published: Saturday, December 4, 2021, 17:51 [IST]
Other articles published on Dec 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+