For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್‌: ಕೊನೇ ಪಂದ್ಯ ಗೆದ್ದು ವೈಟ್‌ವಾಷ್ ಮುಖಭಂಗದಿಂದ ಪಾರಾದ ಭಾರತೀಯ ವನಿತೆಯರು

India vs New Zealand: India Women beat New Zealand women by 6 wickets in the 5th ODI

ಒಂದೆಡೆ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ವಿರುದ್ಧ ಭಾರತ ಪುರುಷರ ಕ್ರಿಕೆಟ್ ತಂಡ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಭಾರತ ವನಿತೆಯರ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿದ್ದು ಸೀಮಿತ ಓವರ್ ಸರಣಿಗಳಲ್ಲಿ ಕಿವೀಸ್ ವನಿತೆಯರ ತಂಡದ ವಿರುದ್ಧ ಸೆಣಸಾಟವನ್ನು ನಡೆಸಿದೆ.

ಹೌದು, ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿರುವ ಭಾರತ ಮಹಿಳಾ ಕ್ರಿಕೆಟ್ ಅಂತರರಾಷ್ಟ್ರೀಯ ತಂಡ ಕಿವೀಸ್ ವಿರುದ್ಧದ ಏಕೈಕ ಟಿ ಟ್ವೆಂಟಿ ಹಾಗೂ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸಿದೆ. ಇತ್ತಂಡಗಳ ನಡುವೆ ಮೊದಲು ಆಯೋಜನೆಯಾಗಿದ್ದ ಏಕೈಕ ಟಿ ಟ್ವೆಂಟಿ ಪಂದ್ಯ ನಡೆಯಿತು. ಆ ಪಂದ್ಯದಲ್ಲಿ 18 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ ನ್ಯೂಜಿಲೆಂಡ್ ವನಿತೆಯರು ನಂತರ ಆರಂಭವಾದ ಏಕದಿನ ಸರಣಿಯಲ್ಲಿಯೂ ಕೂಡ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ. 5 ಪಂದ್ಯಗಳ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ 62 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ ನ್ಯೂಜಿಲೆಂಡ್ ವನಿತೆಯರ ತಂಡ ನಂತರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 3 ವಿಕೆಟ್‍ಗಳ ಜಯವನ್ನು ಸಾಧಿಸಿತ್ತು. ಹೀಗೆ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ನ್ಯೂಜಿಲೆಂಡ್ ವನಿತೆಯರು ಮೂರನೇ ಏಕದಿನ ಪಂದ್ಯದಲ್ಲಿ 3 ವಿಕೆಟ್‍ಗಳ ಜಯ ಹಾಗೂ ಮಳೆಯ ಕಾರಣದಿಂದಾಗಿ 20 ಓವರ್‌ಗಳಿಗೆ ಕಡಿತಗೊಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ 63 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 4-0 ಅಂತರದ ಮುನ್ನಡೆಯನ್ನು ಸಾಧಿಸುವುದರ ಮೂಲಕ ಐದನೇ ಪಂದ್ಯದಲ್ಲಿಯೂ ಕೂಡ ಗೆಲುವು ಸಾಧಿಸಿ ವೈಟ್ ವಾಶ್ ಬಳಿಯುವ ಸನಿಹದಲ್ಲಿತ್ತು.

ಆದರೆ, ಭಾರತ ವನಿತೆಯರು ಹಾಗೂ ನ್ಯೂಜಿಲೆಂಡ್ ವನಿತೆಯರ ತಂಡಗಳ ನಡುವೆ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತೀಯ ವನಿತೆಯರು 6 ವಿಕೆಟ್‍ಗಳ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಮುಖಭಂಗದಿಂದ ಪಾರಾಗಿದ್ದಾರೆ. ಇಂದು ( ಫೆಬ್ರವರಿ 24 ) ಕ್ವೀನ್ಸ್‌ಟೌನ್ ಜಾನ್ ಡೇವಿಸ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ವನಿತೆಯರ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ವನಿತೆಯರ ತಂಡ ಅಮೇಲಿಯಾ ಕೆರ್ ( 66 ರನ್ ) ಆಕರ್ಷಕ ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು. ಭಾರತ ವನಿತೆಯರ ತಂಡದ ಪರ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದರು ಹಾಗೂ ಮೇಘ್ನಾ ಸಿಂಗ್ ಮತ್ತು ಪೂನಮ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ನ್ಯೂಜಿಲೆಂಡ್ ವನಿತೆಯರ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಭಾರತೀಯ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದವರ ಪೈಕಿ ಶೆಫಾಲಿ ವರ್ಮಾ 9 ರನ್ ಗಳಿಸಿ ಔಟ್ ಆದರೆ, ಸ್ಮೃತಿ ಮಂದಾನ 71 ರನ್ ಗಳಿಸಿ ಮಿಂಚಿದರು. ಇನ್ನುಳಿದಂತೆ ದೀಪ್ತಿ ಶರ್ಮಾ 21 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಹರ್ಮನ್ ಪ್ರೀತ್ ಕೌರ್ 63 ಹಾಗೂ ಮಿಥಾಲಿ ರಾಜ್ ಅಜೇಯ 57 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು ಹಾಗೂ ರಿಚಾ ಘೋಷ್ ಅಜೇಯ 7 ರನ್ ಗಳಿಸಿದರು. ಈ ಮೂಲಕ ಭಾರತೀಯ ವನಿತೆಯರ ತಂಡ 46 ಓವರ್‌ಗಳಲ್ಲಿ 255 ರನ್ ಕಲೆಹಾಕಿ ನ್ಯೂಜಿಲೆಂಡ್ ನೀಡಿದ್ದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ 6 ವಿಕೆಟ್‍ಗಳ ಜಯ ಸಾಧಿಸಿತು.

ಭಾರತ ವನಿತೆಯರ ಪ್ಲೇಯಿಂಗ್ ಇಲೆವೆನ್: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಮಿಥಾಲಿ ರಾಜ್ ( ನಾಯಕಿ ), ದೀಪ್ತಿ ಶರ್ಮಾ, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್

ನ್ಯೂಜಿಲೆಂಡ್ ವನಿತೆಯರ ಪ್ಲೇಯಿಂಗ್ ಇಲೆವೆನ್: ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಅಮೆಲಿಯಾ ಕೆರ್, ಆಮಿ ಸ್ಯಾಟರ್ಥ್‌ವೈಟ್, ಫ್ರಾನ್ಸಿಸ್ ಮ್ಯಾಕೆ, ಲಾರೆನ್ ಡೌನ್, ಕೇಟಿ ಮಾರ್ಟಿನ್ (ವಿಕೆಟ್ ಕೀಪರ್), ಹೇಲಿ ಜೆನ್ಸನ್, ಹನ್ನಾ ರೋವ್, ರೋಸ್ಮರಿ ಮೈರ್, ಫ್ರಾನ್ ಜೊನಾಸ್

Story first published: Thursday, February 24, 2022, 20:48 [IST]
Other articles published on Feb 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+