Ind vs NZ: ನಮ್ಮ ಎಲ್ಲಾ ರಣತಂತ್ರಗಳಿಗೂ ಆತನಲ್ಲಿ ಉತ್ತರವಿತ್ತು: ಕೊಹ್ಲಿ ಆಟಕ್ಕೆ ಬೆಚ್ಚಿದ ನ್ಯೂಜಿಲೆಂಡ್ ನಾಯಕ
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅಜೇಯ ಆಟ ಮುಂದುವರಿದಿದೆ. ಭಾನುವಾರ ನಡೆದ ಸಮಬಲದ ತಂಡಗಳ ಕಾದಾಟದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಮೋಘ ಗೆಲುವು ಸಾಧಿಸುವ ಮೂಲಕ ಈ ವಿಶ್ವಕಪ್‌ನಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ. ಈ ಮೂಲಕ ಅಜೇಯವಾಗುಳಿದಿರುವ ಏಕೈಕ ತಂಡ ಎನಿಸಿಕೊಂಡಿದೆ. ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರ ಮತ್ತೊಂದು ಅಮೋಘ ರನ್ ಚೇಸಿಂಗ್ ಆಟ ಭಾರತಕ್ಕೆ ಮತ್ತೊಂದು ಅಮೂಲ್ಯ ಗೆಲುವು ತಂದುಕೊಟ್ಟಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟಕ್ಕೆ ಮತ್ತೊಮ್ಮೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ವತಃ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಕೂಡ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕನ ಆಟವನ್ನು ಮುಕ್ತಕಂಠದಿಂದ ಹೊಗಳಿ ಮೆಚ್ಚುಗೆ ಸೂಚಿಸಿದ್ದಾರೆ.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 104 ಎಸೆತಗಳನ್ನು ಎದುರಿಸಿದ್ದು, 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿದರು. ಹೀಗಾಗಿ ಟೀಮ್ ಇಂಡಿಯಾ 274 ರನ್ ಗಳ ಗುರಿಯನ್ನು ಇನ್ನೂ 12 ಎಸೆತಗಳು ಬಾಕಿ ಉಳಿದಿರುವಂತೆ ಯಶಸ್ವಿಯಾಗಿ ಬೆನ್ನಟ್ಟಲು ಸಾಧ್ಯವಾಯಿತು. ಕೊಹ್ಲಿ ಭಾರತದ ಬ್ಯಾಟಿಂಗ್‌ನ ಬಲವಾಗಿದ್ದು ಅವರ ವಿರುದ್ಧ ಹೆಣೆದ ರಣತಂತ್ರಗಳೂ ಯಶಸ್ವಿಯಾಗಲು ಅವರು ಅವಕಾಶವೇ ನೀಡಲಿಲ್ಲ ಎಂದು ನ್ಯೂಜಿಲೆಂಡ್ ತಂಡದ ನಾಯಕ ಲ್ಯಾಥಮ್ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಅದ್ಭುತವಾದ ಇನ್ನಿಂಗ್ಸ್ ಆಡಿದರು. ತಮ್ಮ ಲಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರು ಹಾಗೂ ಉಳಿದೆಲ್ಲವೂ ಅವರು ಅಂದುಕೊಂಡಂತೆಯತೇ ಆಯಿತು. ನಾಯಕನಾಗಿ ಸಾಕಷ್ಟು ಕ್ರಿಯಾಶೀಲನಾಗಿರಬೇಕು ಹಾಗೂ ನಿಮ್ಮ ಯೋಜನೆಗಳಿಗೆ ಪೂರಕವಾಗಿರಬೇಕು. ಈ ಪಂದ್ಯದ ವಿಚಾರವಾಗಿ ಹೇಳಬೇಕೆಂದರೆ ವಿರಾಟ್ ಕೊಹ್ಲಿ ನಾವು ಹೆಣೆದ ಎಲ್ಲಾ ರಣತಂತ್ರಗಳಿಗೂ ಪ್ರತ್ಯುತ್ತರ ಹೊಂದಿದ್ದರು" ಎಂದಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್‌ನಲ್ಲಿ ಡೆತ್ ಓವರ್‌ನಲ್ಲೊ ತಂಡ ಹಿನ್ನಡೆ ಅನುಭವಿಸಿತು ಎನ್ನುವುದನ್ನು ಲ್ಯಾಥಮ್ ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ 19 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಲ್ಲಿಂದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ ಮೂರನೇ ವಿಕೆಟ್‌ಗೆ 159 ರನ್‌ಗಳ ಜೊತೆಯಾಟದೊಂದಿಗೆ ತಮ್ಮ ತಂಡವನ್ನು ಚೇತರಿಸಿಕೊಳ್ಳಲು ಕಾರಣವಾಗಿದ್ದರು.
"ಬ್ಯಾಟಿಂಗ್‌ನಲ್ಲಿ ಕೊನೆಯ ಹತ್ತು ಓವರ್‌ಗಳ ಆಟದಲ್ಲಿ ಹಿನ್ನಡೆ ಅನುಭವಿಸಿದೆವು. ಭಾರತ ಡೆತ್ ಓವರ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿತ್ತು. ಕೆಲ ಕಡೆಗಳಲ್ಲಿ ರನ್‌ಗಳಿಸುವ ಅವಕಾಶವನ್ನು ಕೂಡ ಕಳೆದುಕೊಂಡವು. ಬೌಲಿಂಗ್‌ನಲ್ಲಿ ನಮಗೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. 30-40 ರನ್‌ಗಳಷ್ಟು ನಾವು ಹಿಂದುಳೀದೆವು ಎನಿಸುತ್ತದೆ" ಎಂದಿದ್ದಾರೆ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಟಿಮ್ ಸೌಥಿ, ಇಶ್ ಸೋಧಿ, ಜೇಮ್ಸ್ ನೀಶಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications