For Quick Alerts
ALLOW NOTIFICATIONS  
For Daily Alerts
 

2026ರಲ್ಲಿ ಎಷ್ಟು ಬಾರಿ ನಡೆಯಲಿದೆ ಭಾರತ-ಪಾಕಿಸ್ತಾನ ಫೈಟ್‌?

2026 ವರ್ಷದ ಆರಂಭವನ್ನು ಎಲ್ಲರೂ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಭಾರತ ಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ಸ್‌ ಟ್ರೋಫಿಯಿಂದ ಹಿಡಿದು, ಏಷ್ಯಾ ಕಪ್‌ ಟಿ20 ಸರಣಿಯ ವರೆಗೆ ಹಲವು ಬಾರಿ ಮುಖಾಮುಖಿ ಆಗಿದ್ದವು. ಇನ್ನು ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿ ಆಗಿದ್ದವು. ಟಿ20 ಏಷ್ಯಾ ಕಪ್‌ನಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿತ್ತು.

2026ರಲ್ಲೂ ಹಲವು ಐಸಿಸಿ ಹಲವು ಟೂರ್ನಿಗಳು ನಡೆಯಲಿವೆ. ಈ ವೇಳೆಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ವರ್ಷ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎಷ್ಟು ಬಾರಿ ಕಾದಾಟ ನಡೆಸಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಪ್ರಸಕ್ತ ರಾಜಕೀಯ ಸನ್ನಿವೇಶಗಳಿಂದಾಗಿ ಎರಡೂ ದೇಶಗಳು ಐಸಿಸಿ ಟೂರ್ನಿಯಲ್ಲಿ ಆಡಲು ಸಹ ಪ್ರವಾಸ ಬೆಳೆಸುತ್ತಿಲ್ಲ. ಅಲ್ಲದೆ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಈ ಎರಡೂ ದೇಶಗಳು ಈಗ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ.

India vs Pakistan 2026 Schedule When Will the Arch-Rivals Clash in ICC Tournaments This Year

2026ರಲ್ಲಿ ಹಲವು ಐಸಿಸಿ ಟೂರ್ನಿಗಳು ನಡೆಯಲಿವೆ. ಇದರಲ್ಲಿ ಅಂಡರ್ 19 ವಿಶ್ವಕಪ್‌ ಸಹ ಸೇರಿದೆ. ಅಂಡರ್‌ 19 ವಿಶ್ವಕಪ್‌ ಜನವರಿ 15 ರಿಂದ ಫೆಬ್ರವರಿ 6 ವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಬೇರೆ ಬೇರೆ ಗುಂಪುಗಳಲ್ಲಿ ಸ್ಥಾನ ಪಡೆದಿವೆ. ಉಭಯ ತಂಡಗಳು ನಾಕೌಟ್‌ ಹಂತಕ್ಕೆ ಅರ್ಹತೆ ಪಡೆದಲ್ಲಿ ಕಾದಾಟ ಕಂಡು ಬರುವ ಸಾಧ್ಯತೆ ಇದೆ.

ಟಿ20 ವಿಶ್ವಕಪ್‌ ಪಂದ್ಯದಲ್ಲಿ ಫೈಟ್‌

ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಫೆಬ್ರವರಿ 7 ರಿಂದ ಮಾರ್ಚ್ 8ರ ವರೆಗೆ ನಡೆಯಲಿದೆ. "ಎ" ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನಮೀಬಿಯಾ, ನೆದರ್‌ಲ್ಯಾಂಡ್‌, ಯುಎಸ್‌ಎ ಸ್ಥಾನ ಪಡೆದಿವೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಗ್ ಫೈಟ್‌ ಫೆಬ್ರವರಿ 15 ರಂದು ನಡೆಯಲಿದೆ. ಇನ್ನು ಎರಡೂ ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದ್ದೇ ಆದಲ್ಲಿ ನಾಕೌಟ್ ಹಂತದಲ್ಲೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹೋರಾಟ ನಡೆಸುವ ಸಾಧ್ಯತೆ ಇದೆ.

ಮಹಿಳಾ ಟಿ20 ವಿಶ್ವಕಪ್‌ ಸಹ ಈ ಬಾರಿ ನಡೆಯಲಿದೆ. ಈ ವಿಶ್ವಕಪ್‌ಗೆ ಇಂಗ್ಲೆಂಡ್‌ ಆತಿಥ್ಯ ವಹಿಸಲಿದೆ. ಈ ಟೂರ್ನಿ ಜೂನ್‌ 12 ರಿಂದ ಜುಲೈ 5ರ ವರೆಗೆ ನಡೆಯಲಿದೆ. ಭಾರತ ಹಾಗೂ ಪಾಕ್‌ ತಂಡಗಳು ಈ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ, ಪಾಕ್‌ ತಂಡಗಳು ಜೂನ್‌ 14 ರಂದು ನಡೆಸಲಿವೆ.

Story first published: Thursday, January 1, 2026, 20:18 [IST]
Other articles published on Jan 1, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+