ಭಾರತ, ಪಾಕಿಸ್ತಾನ ನಡುವೆ ನಡೆದಿವೆ 10 ಫೈನಲ್: ಯಾರ ಕೈ ಮೇಲೆ? ಇಲ್ಲಿದೆ ವರದಿ
ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ವಿಶ್ವವೇ ತದೆಕ ಚಿತ್ತದಿಂದ ಎದುರು ನೋಡುತ್ತಿರುವ ಈ ಪಂದ್ಯದಲ್ಲಿ ಗೆದ್ದ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಸದ್ಯದ ಫಾರ್ಮ್ ನೋಡಿದರೆ ಭಾರತವೇ ಕಪ್ ಗೆಲ್ಲುವ ನೆಚ್ಚಿನ ತಂಡ.
ಉಭಯ ತಂಡಗಳು ಈಗಾಗಲೇ ಏಷ್ಯಾ ಕಪ್ ಟಿ20 2025 ಟೂರ್ನಿಯಲ್ಲಿ ಇದು ಮೂರನೇ ಬಾರಿಗೆ ಮುಖಾಮುಖಿ ಆಗುತ್ತಿವೆ. ಲೀಗ್ ಹಂತದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡವನ್ನು ಮಣ್ಣು ಮುಕ್ಕಿಸಿದ್ದ ಭಾರತ, ಸೂಪರ್ 4 ಹಂತದ ಪಂದ್ಯದಲ್ಲೂ ಸೂರ್ಯ ಪಡೆ ಭರ್ಜರಿ ಜಯ ಸಾಧಿಸಿತ್ತು. ಈಗ ಈ ಎರಡೂ ತಂಡಗಳು ಮೂರನೇ ಬಾರಿಗೆ ಪ್ರಸಕ್ತ ಟೂರ್ನಿಯಲ್ಲಿ ಕಾದಾಟ ನಡೆಸಲಿವೆ. ಹೀಗಾಗಿ ಎಲ್ಲರ ಕಣ್ಣುಗಳು ಇದೇ ಪಂದ್ಯದ ಮೇಲೆ ನೆಟ್ಟಿವೆ.

ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗುತ್ತಿವೆ. ಎಲ್ಲರೂ ನಿರೀಕ್ಷಿಸಿದಂತೆ ಈ ಬಾರಿ ಎರಡೂ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 10 ಫೈನಲ್ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ಬಗ್ಗೆ ವರದಿ ಇಲ್ಲಿದೆ.
ಎಷ್ಟು ಫೈನಲ್ ಪಂದ್ಯಗಳು ನಡೆದಿವೆ?
1985ರ ಮಾರ್ಚ್ 10 ರಂದು ಭಾರತ ಹಾಗೂ ಪಾಕ್ ತಂಡಗಳು ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಈಗ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಬಾರಿ ಚಾಂಪಿಯನ್ ಪಟ್ಟವನ್ನು ಗೆಲ್ಲುವುದು ಯಾರು? ಎಂಬ ಪ್ರಶ್ನೆ ಮನೆ ಮಾಡಿದೆ.
1986ರ ಏಪ್ರಿಲ್ 18 ರಂದು ಆಸ್ಟ್ರೇಲಿಯಾ-ಏಷ್ಯಾ ಕಪ್ ಫೈನಲ್‌ನಲ್ಲೂ ಪಾಕ್ ಭಾರತವನ್ನು ಮಣಿಸಿತ್ತು.
1991ರ ಅಕ್ಟೋಬರ್ 25 ರಂದು ವಿಲ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ನಿರಾಸೆ ಅನುಭವಿಸಿತ್ತು.
1994ರ ಏಪ್ರಿಲ್ 22 ರಂದು ಆಸ್ಟ್ರೇಲಿಯಾ-ಏಷ್ಯಾ ಕಪ್‌ನಲ್ಲಿ ಪಾಕ್ ಮತ್ತೊಮ್ಮೆ ಜಯ ಸಾಧಿಸಿತ್ತು.
1998ರಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆದ್ದಿತ್ತು.
1999ರ ಏಪ್ರಿಲ್ 4 ರಂದು ಪೆಪ್ಸಿ ಕಪ್‌ನಲ್ಲಿ ಟೀಮ್ ಇಂಡಿಯಾ ಆಘಾತ
1999ರ, ಏಪ್ರಿಲ್ 7, ಕೋಕಾ-ಕೋಲಾ ಕಪ್ ಅನ್ನು ಪಾಕ್ ಗೆದ್ದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications