India vs Pakistan: ಮೀಸಲು ದಿನವನ್ನೂ ನುಂಗಿಹಾಕುತ್ತಾ ಮಳೆ?: ಹೇಗಿದೆ ಈ ಕ್ಷಣದ ಹವಾಮಾನ ವರದಿ
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 4 ಹಂತದ ಸೆಣೆಸಾಟಕ್ಕೂ ಮಳೆ ಅಡ್ಡಿಯುಂಟು ಮಾಡುವ ಮೂಲಕ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ. ಮೀಸಲು ದಿನವನ್ನು ನಿಗದಿಪಡಿಸಲಾಗಿರುವ ಕಾರಣ ಇಂದು ಪಂದ್ಯ ಮುಂದುವರಿದಲಾಗುತ್ತದೆ. ಆದರೆ ಇಂದಿನ ಮೀಸಲು ದಿನಕಲ್ಕೂ ಮಳೆಯ ಆತಂಕ ಇಲ್ಲ ಎನ್ನುವಂತಿಲ್ಲ. ಅಂದರೆ ಮಳೆಯ ಆತಂಕದ ಮಧ್ಯೆಯೇ ಈ ದಿನವೂ ಪಂದ್ಯ ನಡೆಯಲಿದೆ.
ಭಾನುವಾರ ಪಂದ್ಯ ಆರಂಬವಾದಾಗ ಪಂದ್ಯಕ್ಕೆ ಪೂರಕವಾದ ವಾತಾವರಣವೇ ಇತ್ತು. ಆದರೆ 24ನೇ ಓವರ್ ಆರಂಭವಾದ ಕೂಡ ಮಳೆ ಜೋರಾಗಿ ಸುರಿಯಲು ಆರಂಭಿಸಿತು. ಹೀಗಾಗಿ ಪಂದ್ಯ ಮುಂದುವರಿಯಲು ಅವಕಾಶವೇ ದೊರೆಯಲಿಲ್ಲ. ಅಂಗಳವನ್ನು ಪಂದ್ಯಕ್ಕೆ ಸಿದ್ಧಪಡಿಸಿ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ಮಳೆಯಾದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಹೇಗಿದೆ ಇಂದಿನ ಬೆಳಗಿನ ವಾತಾವರಣ
ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದ ಬಳಿ ಇಂದು ಬೆಳಗ್ಗೆ ಕೂಡ ಮಳೆಯಾಗಿತ್ತಾದರೂ ನಂತರ ಬಿಡುವು ಪಡೆದುಕೊಂಡಿದೆ. ಪ್ರಸ್ತುತ ಸೂರ್ಯ ಕೂಡ ಕಾಣಿಸಿಕೊಂಡಿದೆಯಾದರೂ ಮೋಡ ಕೂಡ ಅಲ್ಲಲ್ಲಿ ಕವಿದಿದೆ. ಹಾಗಾಗಿ ಈ ದಿನವೂ ಆಗಾಗ ಮಳೆಯಾಗುವ ಸಾಧ್ಯತೆ ಇದ್ದೇ ಇದೆ. ಮಧ್ಯಾಹ್ನದ ಬಳಿಕದ ವಾತಾವರಣ ಹೇಗಿರಲಿದೆ ಎನ್ನುವುದು ಇಂದು ಬಹಳ ಮುಖ್ಯವಾಗಲಿದೆ.
ಭಾರತದ ಉತ್ತಮ ಆರಂಭ
ಇನ್ನು ಭಾನುವಾರ ಪಂದ್ಯ ಆರಂಭವಾಗಿ ಭಾರತ ಬ್ಯಾಟಿಂಗ್ ನಡೆಸಿದಾಗ ಟೀಮ್ ಇಂಡಿಯಾ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಭರ್ಜರಿ ಶತಕದ ಜೊತೆಯಾಟವನ್ನು ನೀಡುವ ಮೂಲಕ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದ್ದಾರೆ. ಇಬ್ಬರು ಆಟಗಾರರು ಕೂಡ ಭರ್ಜರಿ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಶುಬ್ಮನ್ ಗಿಲ್ 52 ಎಸೆತಗಳನ್ನು ಎದುರಿಸಿ 58 ರನ್‌ಗಳನ್ನು ಬಾರಿಸಿದರು. ಪ್ರಸ್ತುತ ಟೀಮ್ ಇಂಡಿಯಾ 147/2 ರನ್‌ಗಳಿಸಿದ್ದು ಅಲ್ಲಿಂದ ಬ್ಯಾಟಿಂಗ್ ಮುಂದುವರಿಸಲಿದೆ.
ಇನ್ನು ಪಾಕಿಸ್ತಾನದ ಪರವಾಗಿ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಮೊದಲ ಸ್ಪೆಲ್‌ನಲ್ಲಿ ಅತ್ಯಂತ ದುಬಾರಿ ಎನಿಸಿದ್ದರು. ಆದರೆ ಎರಡನೇ ಸ್ಪೆಲ್‌ನಲ್ಲಿ ಶುಬ್ಮನ್ ಗಿಲ್ ವಿಎಕಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಶದಬ್ ಖಾನ್ ದುಬಾರಿಯಾಗಿದ್ದರೂ ಕೂಡ ರೋಹಿತ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶದಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್
ಬೆಂಚ್: ಸೌದ್ ಶಕೀಲ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಮ್ ಜೂನಿಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications