IND vs PAK: ಹ್ಯಾರಿಸ್ ರೌಫ್ ವೇಗದ ಎಸೆತಕ್ಕೆ ಮುರಿದ ಶುಭ್ಮನ್ ಗಿಲ್ ಬ್ಯಾಟ್; ಭಾರತದ ಕಳಪೆ ಆರಂಭ!
ಶನಿವಾರ, ಸೆಪ್ಟೆಂಬರ್ 1ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡುತ್ತಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಇನ್ನು ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೂ, ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಅಗ್ರ ಕ್ರಮಾಂಕ ಎಡವಿದೆ. ನಾಯಕ ರೋಹಿತ್ ಶರ್ಮಾ 22 ಎಸೆತಗಳಲ್ಲಿ 11 ರನ್ ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಬಳಿಕ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ ಅದೇ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಅನುಭವಿ ಬ್ಯಾಟರ್‌ಗಳೇ ಭಾರತ ತಂಡಕ್ಕೆ ಕೈ ಕೊಟ್ಟಿದ್ದು, ಇದು ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದಂತಾಗಿದೆ.
ಶ್ರೇಯಸ್ ಅಯ್ಯರ್ ಬ್ಯಾಟ್ ಮುರಿಯಿತು
ನಂತರ ಶ್ರೇಯಸ್ ಅಯ್ಯರ್ ಪಾಕಿಸ್ತಾನ ಬೌಲರ್‌ಗಳನ್ನು ನಿಧಾಗತಿಯಲ್ಲಿ ಎದುರಿಸುತ್ತಿದ್ದಾರೆ. ಹ್ಯಾರಿಸ್ ರೌಫ್ ಎಸೆದ 8ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದರು. ಆದರೆ, ಪಾಕಿಸ್ತಾನ ಬೌಲರ್ ಎಸೆತಕ್ಕೆ ಶ್ರೇಯಸ್ ಅಯ್ಯರ್ ಮುರಿದುಕೊಂಡಿತು.
ಆದರೂ, ಶ್ರೇಯಸ್ ಅಯ್ಯರ್ ಹೆಚ್ಚು ಕ್ರೀಸ್‌ನಲ್ಲಿ ಉಳಿಯದೇ ಅದೇ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ 10ನೇ ಓವರ್‌ನಲ್ಲಿ ಫಖರ್ ಜಮಾನ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಶ್ರೇಯಸ್ ಅಯ್ಯರ್ 9 ಎಸೆತಗಳಲ್ಲಿ 14 ರನ್ ನೀಡಿ ನಿರಾಸೆ ಮೂಡಿಸಿದರು.
ಸದ್ಯ ಭಾರತ ತಂಡ 11.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದ್ದಾಗ ಮಳೆ ಬಂದು ಆಟವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಕ್ರೀಸ್‌ನಲ್ಲಿ ಶುಭ್ಮನ್ ಗಿಲ್ 6 ರನ್ ಮತ್ತು ಇಶಾನ್ ಕಿಶನ್ 2 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications