ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಈಗ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಪ್ರಶಸ್ತಿಗಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಬಾರಿಗೆ ಭಾರತ ಹಾಗೂ ಪಾಕ್ ತಂಡಗಳು ಕಾದಾಟ ನಡೆಸಲಿವೆ. ಅದಕ್ಕೂ ಹೆಚ್ಚಾಗಿ ಕಳೆದ 2 ಭಾನುವಾರಗಳಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿ ಆಗಿದ್ದು, ಮೂರನೇ ಫೈಟ್‌ನತ್ತ ಚಿತ್ತ ನೆಟ್ಟಿವೆ. ಇಂದಿನ ಪಂದ್ಯವನ್ನು ಗೆಲ್ಲುವ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತದೆ.
ಭಾರತ ತಂಡ ಲೀಗ್ ಹಂತದಿಂದ ಹಿಡಿದು. ಸೂಪರ್ 4 ಹಂತದ ವರೆಗೂ ಸ್ಥಿರ ಪ್ರದರ್ಶನ ನೀಡಿದೆ. ಅಲ್ಲದೆ ಪ್ರಸಕ್ತ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ. ಈ ವೇಳೆ ಭಾರತ, ಒಂದೇ ಟೂರ್ನಿಯಲ್ಲಿ ಪಾಕ್ ವಿರುದ್ಧ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಬಲಾಢ್ಯವಾಗಿದೆ. ಆದರೆ ಪ್ರಶಸ್ತಿ ಸುತ್ತಿನ ಒಂದು ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ಪಿಚ್‌ನಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ, ಟಾಸ್ ಗೆದ್ದ ತಂಡ ಈ ಮೈದಾನದಲ್ಲಿ ಫೀಲ್ಡ್ ಮಾಡಲು ಮುಂದಾಗುತ್ತದೆ. ಹೀಗಾಗಿ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಸೂರ್ಯ ಎಂಎಸ್ ಧೋನಿ ಅವರ ಎಲೈಟ್ ಕ್ಲಬ್ ಸೇರುವ ಕನಸಿನಲ್ಲಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಬಲಿಷ್ಠವಾಗಿದೆ. ಪ್ರಸಕ್ತ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಶುಭಮನ್ ಗಿಲ್ ಸಹ ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನದ ಅನಿವಾರ್ಯತೆ ಇದೆ. ಇವರು ಪಾಕ್ ವಿರುದ್ಧದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಅಬ್ಬರಿಸುವ ಅನಿವಾರ್ಯತೆ ಇದೆ.
ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಿಗುವಿನ ದಾಳಿಯನ್ನು ನಡೆಸಬೇಕಿದೆ.

ಜಸ್ಪ್ರೀತ್ ಬುಮ್ರಾ ಪ್ರಸಕ್ತ ಏಷ್ಯಾ ಕಪ್‌ನಲ್ಲಿ ತಮ್ಮ ಪ್ರಭಾವವನ್ನು ಬೀರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಕೊನೆಯ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಇನ್ನು ಸ್ಪಿನ್ ಬೌಲರ್‌ಗಳ ರೂಪದಲ್ಲಿ ವಿಶ್ವದ ನಂಬರ್ 1 ಬ್ಯಾಟರ್ ವರುಣ್ ಚಕ್ರವರ್ತಿ ಹಾಗೂ ರಿಸ್ಟ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಶಿಸ್ತು ಬದ್ಧ ದಾಳಿ ನಡೆಸಬೇಕಿದೆ. ಅಂದಾಗ ಮಾತ್ರ ಪಾಕ್ ತಂಡವನ್ನು ಕಟ್ಟಿ ಹಾಕಬಹುದಾಗಿದೆ. ಈ ಇಬ್ಬರೂ ಸ್ಪಿನ್ ಬೌಲರ್‌ಗಳು ಮಿಡ್ಲ್ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬೇಕಿದೆ.
ಪಾಕಿಸ್ತಾನ ತಂಡದ ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ ಭರ್ಜರಿ ಬ್ಯಾಟಿಂಗ್ ನಡೆಸಬೇಕುದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಹ್ಯಾರಿಸ್ ಅವರ ಆಟಕ್ಕೆ ಬ್ರೇಕ್ ಹಾಕುವ ಅನಿವಾರ್ಯತೆ ಸಹ ಅನಿವಾರ್ಯವಾಗಿದೆ. ಅಲ್ಲದೆ ಕೆಳ ಕ್ರಮಾಂಕದಲ್ಲಿ ಶಾಹೀನ್ ಶಾ ಆಫ್ರಿದಿ ಅವರ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಬೇಕಿದೆ. ಅಲ್ಲದೆ ಪಾಕ್ ಬೌಲರ್‌ಗಳ ಲೈನ್ ಹಾಗೂ ಲೆಂಥ್ ಹಾಳು ಮಾಡುವ ಅನಿವಾರ್ಯತೆ ಇದೆ.