Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20 Final: ಭಾರತ, ಪಾಕ್‌ ಫೈನಲ್‌ ನಡೆಯವುದು ಎಲ್ಲಿ? ಎಷ್ಟಕ್ಕೆ ಆರಂಭ? ಹೇಗೆ ವೀಕ್ಷಿಸುವುದು?

ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ 9ನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವತ್ತ ಭಾರತ ಚಿತ್ತ ನೆಟ್ಟಿದೆ. ಇನ್ನು ಪಾಕ್‌ 3ನೇ ಬಾರಿಗೆ ಪ್ರಶಸ್ತಿ ಎತ್ತುವ ಕನಸಿನಲ್ಲಿದೆ. ಈ ಹೈ ವೋಲ್ಟೇಜ್‌ ಪಂದ್ಯ ನಡೆಯುವುದು ಎಲ್ಲಿ? ಎಲ್ಲಿ ಇದರ ನೇರ ಪ್ರಸಾರ ವೀಕ್ಷಿಸಬಹುದು ಎಂಬುದರ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಬಾರಿಗೆ ಕಾದಾಟ ನಡೆಸುತ್ತಿವೆ. ಈಗಾಗಲೇ ಉಭಯ ತಂಡಗಳು ನಡುವೆ ಎರಡು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಲೀಗ್‌ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 127 ರನ್‌ ಕಲೆ ಹಾಕಿದೆ. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಪಾಕ್‌ 15.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 131 ರನ್‌ ಸೇರಿಸಿದೆ. ಈ ಮೂಲಕ ಭಾರತ 7 ವಿಕೆಟ್‌ ಜಯ ಸಾಧಿಸಿ ಸೂಪರ್ 4 ಹಂತಕ್ಕೆ ತಲುಪಿದೆ. ಇನ್ನು ಸೂಪರ್ 4 ಹಂತದ ಪಂದ್ಯದಲ್ಲೂ ಭಾರತ ಪಾಕ್‌ ವಿರುದ್ಧ 6 ವಿಕೆಟ್‌ ಗೆಲುವು ದಾಖಲಿಸಿದೆ. ಈಗ ಮೂರನೇ ಬಾರಿಗೆ ಉಭಯ ತಂಡಗಳು ಕಾದಾಟ ನಡೆಸಲು ಸಜ್ಜಾಗಿವೆ.

India vs Pakistan Asia Cup T20 Final Where to Watch Match Time Venue and More

ಭಾರತ, ಪಾಕ್‌ ನಡುವಣ ಫೈನ್‌ ನಡೆಯುವುದು ಎಲ್ಲಿ?

ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯ ದುಬೈನಲ್ಲಿ ನಡೆಯಲಿದೆ.

ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್ ಯಾವಾಗ ನಡೆಯಲಿದೆ?

ಫೈನಲ್‌ ಪಂದ್ಯದ ಟಾಸ್‌ 7.30ಕ್ಕೆ ಆರಂಭವಾದರೆ, ಆಟ ರಾತ್ರಿ 8ಕ್ಕೆ ಆರಂಭವಾಗಲಿದೆ.

ಈ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ನೋಡಬಹುದು?

ಫೈನಲ್‌ ಪಂದ್ಯವನ್ನು ಸೋನಿ ನೆಟ್‌ವರ್ಕ್‌ ಹಾಗೂ ಡಿಡಿ ಸ್ಪೋರ್ಟ್ಸ್‌ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

ಭಾರತ ಎಷ್ಟು ಬಾರಿ ಏಷ್ಯಾ ಕಪ್‌ ಗೆದ್ದಿದೆ?

ಭಾರತ ಒಟ್ಟು 8 ಬಾರಿ ಟೂರ್ನಿಯ ಫೈನಲ್‌ ಜಯಿಸಿದೆ.

Story first published: Sunday, September 28, 2025, 14:39 [IST]
Other articles published on Sep 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+