ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಪರಸ್ಪರ ಸೆಣಸಾಡಲಿವೆ. ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಒತ್ತಡವೆಂದು ಒಪ್ಪಿಕೊಂಡರು.

ಪಿಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಬಾಬರ್ ಅಜಂ, ಭಾರತ vs ಪಾಕಿಸ್ತಾನ ಹಣಾಹಣಿಯು ಪಂದ್ಯಾವಳಿಯಲ್ಲಿ ಹೆಚ್ಚು ನಿರೀಕ್ಷೆ ಹೊಂದಿರುವ ಪಂದ್ಯವಾಗಲಿದೆ ಎಂದು ಹೇಳಿದರು.
ಭಾರತ ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು.
ಟಿ20 ವಿಶ್ವಕಪ್‌ನಲ್ಲಿ ದೃಢವಾದ, ಸಮತೋಲಿತ ತಂಡವನ್ನು ಹೊಂದಿರುವ ಭಾರತ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ.
"ಭಾರತ vs ಪಾಕಿಸ್ತಾನ ಪಂದ್ಯವು ಯಾವಾಗಲೂ ಹೆಚ್ಚು ಮಾತನಾಡುವ ವಿಷಯವಾಗಿದೆ. ನೀವು ಜಗತ್ತಿನಲ್ಲಿ ಎಲ್ಲಿಗೆ ಹೋದರೂ ಇದರ ಬಗ್ಗೆ ತುಂಬಾ ಚರ್ಚಿಸಲಾಗುತ್ತದೆ. ಆಟಗಾರರು ವಿಭಿನ್ನ ಕಂಪನಗಳನ್ನು ಮತ್ತು ಉತ್ಸಾಹವನ್ನು ಪಡೆಯುತ್ತಾರೆ. ಏನಾಗುತ್ತದೆ ಎಂದರೆ, ಪ್ರತಿಯೊಬ್ಬರೂ ತಮ್ಮ ದೇಶವನ್ನು ಬೆಂಬಲಿಸುತ್ತಾರೆ, ಆದ್ದರಿಂದ ಆ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ," ಎಂದು ಬಾಬರ್ ಅಜಂ ತಿಳಿಸಿದರು.
ಇದೀಗ ಪಾಕಿಸ್ತಾನ ತಂಡದ ನಾಯಕ ತಮ್ಮ ಸಾಮರ್ಥ್ಯಗಳನ್ನು ನಂಬುವ ಮತ್ತು ಆಟದಲ್ಲಿ ಗಮನವನ್ನು ಕೇಂದ್ರೀಕರಿಸುವ ಬಗ್ಗೆ ಮಾತನಾಡಿದರು. ಪಂದ್ಯಾವಳಿಯ ಕೊನೆಯ ಆವೃತ್ತಿಯಲ್ಲಿ ಪಾಕಿಸ್ತಾನ ಪಂದ್ಯದ ಬಹುಪಾಲು ಭಾರತದ ಮೇಲೆ ಪ್ರಾಬಲ್ಯ ಸಾಧಿಸಿತು. ಆದರೆ ವಿರಾಟ್ ಕೊಹ್ಲಿ ಭಾರತ ತಂಡವನ್ನು ಯಾವುದೇ ತೊಂದರೆಯಿಲ್ಲದೆ ಗೆಲ್ಲಿಸಲು ಅಮೋಘ ಇನ್ನಿಂಗ್ಸ್ ಆಡಿದರು.

"ಇಡೀ ಜಗತ್ತು ಭಾರತ vs ಪಾಕಿಸ್ತಾನ ಪಂದ್ಯದ ದಿನದತ್ತ ಗಮನಹರಿಸಿದೆ. ಸ್ವಾಭಾವಿಕವಾಗಿ ಒತ್ತಡಗಳು ಇರುತ್ತವೆ, ಆದರೆ ನಾವು ನಮ್ಮ ಗಮನವನ್ನು ಇಟ್ಟುಕೊಳ್ಳಬೇಕು, ಮೂಲಭೂತ ವಿಷಯಗಳಿಗೆ ಅಂಟಿಕೊಳ್ಳಬೇಕು ಮತ್ತು ಸುಲಭವಾದ ಕ್ರಿಕೆಟ್ ಆಡಬೇಕು. ಇದು ಯಾವಾಗಲೂ ಒತ್ತಡದ ಪಂದ್ಯವಾಗಿದೆ. ಹೆಚ್ಚು ಶಾಂತ ಮತ್ತು ತಾಳ್ಮೆಯಿಂದಿರಿ, ನಿಮ್ಮ ಕೌಶಲ್ಯ ಮತ್ತು ಕಠಿಣ ಪರಿಶ್ರಮದಲ್ಲಿ ನಂಬಿಕೆ ಇಟ್ಟುಕೊಳ್ಳಿ, ಆಗ ವಿಷಯಗಳು ಸುಲಭವಾಗುತ್ತವೆ," ಎಂದು ಬಾಬರ್ ಅಜಂ ಅಭಿಪ್ರಾಯಪಟ್ಟರು.
ಪಾಕಿಸ್ತಾನ ತಂಡ ಇತ್ತೀಚಿನ ದಿನಗಳಲ್ಲಿ ಐರ್ಲೆಂಡ್ ವಿರುದ್ಧ ಟಿ20 ಪಂದ್ಯ ಸೋತ ನಂತರ, ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿದೆ. ನಾಯಕನಾಗಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಬಾಬರ್ ಅಜಂ, ತಂಡದ ನಾಯಕನಾಗಿ ಭಾವನಾತ್ಮಕವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಹೆಚ್ಚುವರಿ ನಿರೀಕ್ಷೆಗಳಿರುವುದರಿಂದ ನಾಯಕನ ಜವಾಬ್ದಾರಿಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಆಟಗಾರರು ಮತ್ತು ಮ್ಯಾನೇಜ್‌ಮೆಂಟ್ ಹೊಂದಿದ್ದೇವೆ ಮತ್ತು ಅವರೊಂದಿಗೆ ಸಂವಹನವನ್ನು ನಿರ್ವಹಿಸಬೇಕಿದೆ ಎಂದರು.
ಆಟಗಾರರನ್ನು ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ನಮ್ಮ ಆಟಗಾರರನ್ನು ಬೆಂಬಲಿಸಬೇಕು. ಏಕೆಂದರೆ ನಾವು ಅವರಿಂದ ಉತ್ತಮ ಪ್ರದರ್ಶನವನ್ನು ಪಡೆಯಬೇಕಿದೆ. ಯಾವಾಗಲೂ ಆಟಗಾರರನ್ನು ಬೆಂಬಲಿಸಬೇಕು ಮತ್ತು ಅವರು ಉತ್ತಮರು ಮತ್ತು ಉತ್ತಮವಾಗಿ ಮಾಡಬಹುದು ಎಂಬ ವಿಶ್ವಾಸವನ್ನು ನೀಡಬೇಕು,'' ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿದರು.