For Quick Alerts
ALLOW NOTIFICATIONS  
For Daily Alerts
 

Catch Controversy: ಭಾರತ, ಪಾಕ್‌ ಪಂದ್ಯದ ವೇಳೆ ಕ್ಯಾಚ್‌ ವಿವಾದ: ICC ನಿಯಮ ಹೇಳುವುದು ಏನು?

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025 ನಡೆಯುತ್ತಿದೆ. ಈ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸಿದೆ. ಭಾನುವಾರ ಭಾರತ ಹಾಗೂ ಪಾಕ್ ತಂಡಗಳ ನಡುವೆ ಬಿಗ್ ಫೈಟ್ ನಡೆಯಿತು. ಈ ವೇಳೆ ಭಾರತದ ಆಟಗಾರರು ಹಿಡಿದ ಕ್ಯಾಚ್‌ ಒಂದು ಈಗ ವಿವಾದವನ್ನು ಸೃಷ್ಟಿಸಿದೆ. ಹಾಗಿದ್ದರೆ ಆ ವಿವಾದ ಏನು? ಅಂಪೈರ್‌ ಹೇಳಿದ್ದೇನು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 19 ಓವರ್‌ಗಳಲ್ಲಿ 136 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನದ ಬ್ಯಾಟರ್‌ ಸುಯೇಶ್‌ ಶರ್ಮಾ ಎಸೆತದಲ್ಲಿ ಮಜ್ ಸದಾಕತ್ ಡೀಪ್ ಮಿಡ್‌-ವಿಕೆಟ್‌ ಮೇಲೆ ದೊಡ್ಡ ಹೊಡೆತಕ್ಕೆ ಮುಂದಾದರು. ಆಗ ಅಲ್ಲಿ ಫೀಲ್ಡ್ ಮಾಡುತ್ತಿದ್ದ ನೆಹಾಲ್‌ ವಾದೇರಾ ಚೆಂಡು ತಮ್ಮ ಬಳಿ ಬರುತ್ತಿರುವುದನ್ನು ಗುರುತಿಸಿ ಕ್ಯಾಚ್‌ ಪಡೆಯಲು ತಮ್ಮ ಬಲಗಡೆ ಓಡಿದರು.

India vs Pakistan Catch Controversy What Does the New ICC Relay Catch Rule Say

ನೇಹಾಲ್‌ ಕಷ್ಟ ಪಟ್ಟು ಈ ಕ್ಯಾಚ್ ಕಂಪ್ಲೀಟ್ ಸಹ ಮಾಡಿದರು. ಆದರೆ ಅವರು ಆಯ ತಪ್ಪಿ ಮೈದಾನದ ಹೊರಕ್ಕೆ ಕಾಲಿಡುವುದನ್ನು ಗಮನಿಸಿ ಚೆಂಡನ್ನು ಮತ್ತೆ ಗಾಳಿಯಲ್ಲಿ ತೂರಿದರು. ನೇಹಾಲ್‌ ಚೆಂಡನ್ನು ಗಾಳಿಯಲ್ಲಿ ತೂರಿದಾಗ ಅವರ ಕಾಲು ಮೈದಾನದಲ್ಲೇ ಇತ್ತು. ಗಾಳಿಯಲ್ಲಿ ತೂರಿದ್ದ ಚೆಂಡನ್ನು ನಮನ್‌ ಧೀರ್ ಕ್ಯಾಚ್ ಪಡೆದರು. ಭಾರತೀಯ ಆಟಗಾರರ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ.

ಬದಲಾದ ಐಸಿಸಿ ನಿಯಮಗಳ ಸಂಪೂರ್ಣ ಲಾಭ ಪಾಕಿಸ್ತಾನ ಪಡೆಯಿತು. ಇತ್ತೀಚಿಗಷ್ಟೇ ಐಸಿಸಿ ರಿಲೇ ಕ್ಯಾಚ್‌ಗಳ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಅದರ ಅನ್ವಯ್‌ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ನೇಹಾಲ್ ವಧೇರ್ ಹಿಡಿದ ಕ್ಯಾಚ್ ನಾಟೌಟ್ ಆಗಿತ್ತು.

ಹೊಸ ನಿಯಮ ಹೇಳುವುದು ಏನು?

ಐಸಿಸಿ ಹೊಸ ನಿಯಮ ರೀಲೆ ಕ್ಯಾಚ್‌ಗಳಿಗೆ ಸಂಬಂಧಿಸಿದಂತೆ ಬದಲಾಗಿದೆ. ಬೌಂಡರಿ ಪಕ್ಕದಲ್ಲಿ ರೀಲೆ ಕ್ಯಾಚ್‌ ಆಟಗಾರ ಪಡೆದಲ್ಲಿ, ಆಯ ತಪ್ಪಿ ಆತ ಮೈದಾನಕ್ಕೆ ಹೊರಕ್ಕೆ ಹೊಗುವುದು ತಿಳಿದು ಆತ ಚೆಂಡನ್ನು ಮತ್ತೆ ಗಾಳಿಯಲ್ಲಿ ತೂರಿದಾಗ, ಚೆಂಡು ಇನ್ನೊಬ್ಬ ಫೀಲ್ಡರ್‌ ಹಿಡಿಯುವ ಒಳಗೆ, ಚೆಂಡನ್ನು ಗಾಳಿಯಲ್ಲಿ ತೂರಿದ ಆಟಗಾರ ಸಹ ಮೈದಾನಕ್ಕೆ ಎಂಟ್ರಿ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಆ ಕ್ಯಾಚ್‌ ಮಾನ್ಯವಲ್ಲ ಎಂದು ಐಸಿಸಿ ತಿಳಿಸುತ್ತದೆ. ಅದರಂತೆ ನೇಹಾಲ್ ಕ್ಯಾಚ್ ಪಡೆದು ಗಾಳಿಯಲ್ಲಿ ತೂರಿ ಮೈದಾನದ ಆಚೆ ಹೋದಾಗ, ನಮನ್‌ ಧೀರ್ ಕ್ಯಾಚ್ ಪಡೆದರು. ಆದರೆ ನಿಯಮಗಳ ಪ್ರಕಾರ ನೇಹಾಲ್ ಮೈದಾನದ ಒಳಗೆ ಬರಬೇಕಿತ್ತು.

ಇದಾದ ಬಳಿಕವೂ ಅಂಪೈರ್‌ಗಳಿಂದ ಮತ್ತೊಂದು ಎಡವಟ್ಟು ನಡೆದು ಬಿಟ್ಟಿದೆ. ಅಸಲಿಗೆ ಈ ಕ್ಯಾಚ್‌ ಪ್ರಯತ್ನದಲ್ಲಿ ಎಸೆಯಲಾದ ಚೆಂಡನ್ನು ಡಾಟ್‌ ಬೌಲ್ ಎಂದು ಘೋಷಿಸಿದರು. ಬದಲಿಗೆ ಇದು ಸಿಕ್ಸರ್‌ ಎಂದು ನೀಡಬೇಕಾಗಿತ್ತು ಎಂದು ನಿಯಮ ಹೇಳುತ್ತದೆ.

Story first published: Tuesday, November 18, 2025, 12:58 [IST]
Other articles published on Nov 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+