IND vs PAK ಚಾಂಪಿಯನ್ಸ್ ಟ್ರೋಫಿ: ಯಾವ ಬ್ಯಾಟರ್‌ಗೆ ಯಾವ ಬೌಲರ್ ಸವಾಲು?
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈಟ್ ದುಬೈನಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ನಾಕೌಟ್ ಹಂತಕ್ಕೆ ಒಂದು ಕಾಲು ಇಡುವ ಕನಸು ಕಾಣುತ್ತಿದೆ. ಇನ್ನು ಪಾಕಿಸ್ತಾನ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈಗಾಗಲೇ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿರುವ ಪಾಕ್ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಉಭಯ ದೇಶಗಳ ನಡುವಣ ಫೈಟ್ ಕ್ರಿಕೆಟ್ ಜಗತ್ತಿನ ದೊಡ್ಡ ರೈವಲರಿಗಳಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ಪಾಕ್ ಗೆದ್ದು ಮುಂದಿನ ಹಂತದ ಕನಸನ್ನು ಜೀವಂತವಾಗಿರಿಸಿಕೊಳ್ಳುವ ಆಸೆಯನ್ನು ಹೊಂದಿದೆ. ಈ ಪಂದ್ಯದಲ್ಲಿ ಸ್ಟಾರ್ ಕೀ ಪ್ಲೇಯರ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಆ ವರದಿ ಇಲ್ಲಿದೆ.

ರೋಹಿತ್ ಶರ್ಮಾ vs ಶಾಹೀನ್ ಆಫ್ರಿದಿ
ಬಾಂಗ್ಲಾಂದೇಶ ವಿರುದ್ಧದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಉತ್ತಮ ಆರಂಭ ನೀಡಿದ ರೋಹಿತ್ ಶರ್ಮಾ, ಪಾಕಿಸ್ತಾನ ವಿರುದ್ಧದವೂ ಅಂತಹದ್ದೇ ಇನಿಂಗ್ಸ್ ಕಟ್ಟಬೇಕಿದೆ. ಈ ವೇಳೆ ಇವರಿಗೆ ಸವಾಲು ಎಸೆಯಲು ಪಾಕ್ ಬೌಲರ್‌ಗಳ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ 41 ರನ್‌ಗಳ ಚಿಕ್ಕ ಇನಿಂಗ್ಸ್ ಭರವಸೆ ಮೂಡಿಸಿದೆ. ಇನ್ನು ಪಾಕ್ ವಿರುದ್ಧವೂ ದೊಡ್ಡ ಆಟವನ್ನು ಆಡುವ ಜವಾಬ್ದಾರಿ ರೋಹಿತ್ ಶರ್ಮಾ ಅವರ ಮೇಲಿದೆ. ರೋಹಿತ್ ಶರ್ಮಾ ಸರಾಸರಿ ಎಡಗೈ ವೇಗದ ಬೌಲರ್‌ಗಳ ವಿರುದ್ಧ ಅಮೋಘವಾಗಿದೆ. ಇವರು ಆಡಿದ 132 ಇನಿಂಗ್ಸ್‌ಗಳಲ್ಲಿ 51.39ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ರೋಹಿತ್ 1899 ರನ್ ಕಲೆ ಹಾಕಿದ್ದು, 1696 ರನ್ ಸಿಡಿಸಿದ್ದಾರೆ. ಇನ್ನು ಇದೇ ವೇಳೆ ರೋಹಿತ್ ಶರ್ಮಾ ಅವರನ್ನು ಎಡಗೈ ವೇಗಿಗಳು 33 ಬಾರಿ ಔಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ vs ಅಬ್ರಾರ್ ಅಹ್ಮದ್
ಸದ್ಯ ಲಯದಿಂದ ಪರದಾಡುತ್ತಿರುವ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಕನಸಿನಲ್ಲಿದ್ದಾರೆ. ಇವರಿಗೆ ಕಾಟ ನೀಡಲು ಪಾಕ್ ಸ್ಪಿನ್ ಬೌಲರ್ ಸಿದ್ಧರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಬ್ಯಾಟ್ ಸ್ಪಿನ್ ಬೌಲರ್ ವಿರುದ್ಧ ಕಷ್ಟ ಅನುಭವಿಸಿದ್ದಾರೆ. ಇತ್ತೀಚಿಗೆ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೂ ಕೊಹ್ಲಿ 2 ಬಾರಿ ಲೆಗ್ ಸ್ಪಿನ್ ಬೌಲರ್ ಆದಿಲ್ ರಶೀದ್‌ಗೆ ಔಟ್ ಆಗಿದ್ದಾರೆ. 2024ರಿಂದ ಈ ವರೆಗೆ 5 ಇನಿಂಗ್ಸ್‌ಗಳಲ್ಲಿ ಲೆಗ್ ಸ್ಪಿನ್ ವಿರುದ್ಧ ಕೊಹ್ಲಿ ಸರಾಸರಿ 4.20 ಆಗಿದೆ. ಈ ವೇಳೆ ವಿರಾಟ್ 46 ಎಸೆತಗಳಲ್ಲಿ 21 ರನ್ ಸಿಡಿಸಲು ಮಾತ್ರ ಸಫಲರಾಗಿದ್ದಾರೆ. ಅಲ್ಲದೆ 5 ಬಾರಿ ಔಟ್ ಸಹ ಆಗಿದ್ದಾರೆ.

ಮೊಹಮ್ಮದ್ ಶಮಿ vs ಬಾಬರ್ ಅಜಮ್
ಗಾಯದಿಂದ ಮೈದಾನಕ್ಕೆ ಮರಳಿರುವ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಭರ್ಜರಿ ಲಯಕ್ಕೆ ಮರಳಿದ್ದರು. ಶಮಿ ಅವರ ದಾಖಲೆ ಬಲಗೈ ಆಟಗಾರರ ವಿರುದ್ಧ ಅಮೋಘವಾಗಿದೆ. ಇವರು 102 ಇನಿಂಗ್ಸ್‌ಗಳಲ್ಲಿ 141 ಬಲಗೈ ಆಟಗಾರರನ್ನೇ ಬಲಿ ಪಡೆದಿದ್ದಾರೆ. ಇನ್ನು ಬಾಬರ್ ಅವರ ದಾಖಲೆ ಸಹ ಬಲಗೈ ವೇಗದ ಬೌಲರ್‌ಗಳ ವಿರುದ್ಧ ಅಮೋಘವಾಗಿದೆ. ಇವರು 118 ಇನಿಂಗ್ಸ್‌ಗಳಲ್ಲಿ 2951 ರನ್ ಸಿಡಿಸಿದ್ದಾರೆ. ಅಲ್ಲದೆ 59 ಬಾರಿ ಔಟ್ ಸಹ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications