India vs Pakistan Cricket Rivalry: ಭಾರತ- ಪಾಕ್ ಹೈವೋಲ್ಟೇಜ್ ಮ್ಯಾಚ್ ವೇಳೆ ಆಟಗಾರರ ನಡುವಿನ 'ಕಿರಿಕ್ ಪಾರ್ಟಿ'
ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಅಂದರೆ ಹೈವೋಲ್ಟೇಜ್ ಮ್ಯಾಚ್ ಎಂದೇ ಪರಿಗಣಿಸಲ್ಪಡುತ್ತದೆ. ಈ ಪಂದ್ಯದಲ್ಲಿ ಮಾತಿನ ಚಕಮಕಿ ಕಾಮನ್.. ಈ ಎರಡೂ ದೇಶಗಳು ಅಂಗಳಕ್ಕೆ ಇಳಿದಾಗ ಮಾತಿನಿ ತಿವಿತ ಇರೋದರಲ್ಲಿ ಡೌಟೇ ಇಲ್ಲ. ಇಂತಹದ್ದೇ ಕೆಲವು ಸನ್ನಿವೇಶಗಳು ಇಲ್ಲಿವೆ.
ಶಾಹಿದ್ ಅಫ್ರಿದಿ ಮತ್ತು ಗೌತಮ್ ಗಂಭೀರ್
ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಬಿಗುವಿನಿಂದ ಕೂಡಿರುವುದೇ ಹೆಚ್ಚು. 2007ರಲ್ಲಿ ಪಾಕಿಸ್ತಾನ ತಂಡವು ಭಾರತಕ್ಕೆ ಏಕದಿನ ಸರಣಿಗಾಗಿ ಬಂದಾಗ ಮಾತಿನ ವಿನಿಮಯ ಸಂಭವಿಸಿತ್ತು. ಕಾನ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆದಿತ್ತು.

ಗಂಭೀರ್, ಶಾಹಿದ್ ಎಸೆತದಲ್ಲಿ ಸಿಂಗಲ್ ಗಾಗಿ ಓಡುತ್ತಿದ್ದರು. ಆಗ ಇಬ್ಬರೂ ಡಿಕ್ಕಿ ಹೊಡೆದಿದ್ದಾರೆ. ಅಫ್ರಿದಿ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟರು. ಇದಾದ ಬಳಿಕ ಇಬ್ಬರಿಗೂ ಜಗಳ ಶುರುವಾಯಿತು.
ಕಿರಣ್ ಮೋರೆ ಮತ್ತು ಜಾವೇದ್ ಮಿಯಾಂದಾದ್
1992ರ ವಿಶ್ವಕಪ್ ಸಮಯದಲ್ಲಿ, ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆ ಮತ್ತು ಪಾಕಿಸ್ತಾನದ ಸ್ಟಾರ್ ಆಟಗಾರ ಜಾವೇದ್ ಮಿಯಾಂದಾದ್ ನಡುವೆ ವಾಗ್ವಾದ ನಡೆಯಿತು. ಇದಾದ ನಂತರ ಮಿಯಾಂದಾದ್ ಅಂಪೈರ್ ಗೆ ದೂರು ನೀಡಲು ಹೋದರು. ಆದರೆ ಕಿರಣ್ ಮೋರೆಗೆ ಏನೂ ಹೇಳಲಿಲ್ಲ. ಇದಾದ ಬಳಿಕ ಸಿಟ್ಟಿಗೆದ್ದ ಮಿಯಾಂದಾದ್ ಬ್ಯಾಟ್ ಹಿಡಿದು ಮಂಕಿ ಜಂಪ್ ಮಾಡಿದರು. ಈ ಫೋಟೋ ಸಖತ್ ವೈರಲ್ ಆಗಿತ್ತು.
ಹರ್ಭಜನ್ ಸಿಂಗ್ ಮತ್ತು ಶೋಯೆಬ್ ಅಖ್ತರ್
ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಮತ್ತು ಶೋಯೆಬ್ ಅಖ್ತರ್ ನಡುವಿನ ಕಾಳಗ ಎಲ್ಲರ ಚಿತ್ತ ಕದ್ದಿತ್ತು. ಮೈದಾನದ ಹೊರಗೆ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರೂ ಸಹ, 2010ರ ಏಷ್ಯಾಕಪ್ ವೇಳೆ ಮೊಹಮ್ಮದ್ ಅಮೀರ್ ಎಸೆತದಲ್ಲಿ ಸಿಕ್ಸರ್ ಬಾರಿಸಿ ಟೀಂ ಇಂಡಿಯಾವನ್ನು ಹರ್ಭಜನ್ ಗೆಲುವಿನತ್ತ ಮುನ್ನಡೆಸಿದರು. ಆಗ ಶೋಯೆಬ್, ಭಜ್ಜಿ ಕಾಲೆಳೆದರು, ಮೈದಾನದಲ್ಲಿ ಇಬ್ಬರ ನಡುವೆ ಸಾಕಷ್ಟು ವಾಗ್ವಾದ ನಡೆದು ಪರಸ್ಪರ ನಿಂದಿಸಿ ಕೊಂಡರು.
ರಾಹುಲ್ ದ್ರಾವಿಡ್ ವಿರುದ್ಧ ಶೋಯೆಬ್ ಅಖ್ತರ್
ಟೀಮ್ ಇಂಡಿಯಾದ ಪ್ರಸ್ತುತ ಕೋಚ್ ಮತ್ತು ಮಾಜಿ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಶಾಂತವಾಗಿರುತ್ತಾರೆ. ಆದರೆ, ಒಮ್ಮೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡರು.
2004ರ ಏಷ್ಯಾ ಕಪ್ ನಲ್ಲಿ ಶೋಯೆಬ್ ಅಖ್ತರ್ ಅವರೊಂದಿಗೆ ದ್ರಾವಿಡ್ ಜಗಳವಾಡಿದ್ದರು. ಈ ಪಂದ್ಯದ ವೇಳೆ ಇಬ್ಬರ ನಡುವೆ ಸಾಕಷ್ಟು ವಾಗ್ವಾದ ನಡೆಯಿತು. ಭಾರತ - ಪಾಕ್ ಕ್ರಿಕೆಟಿಗರ ನಡುವಿನ ಕಾದಾಟದಲ್ಲಿ ಇದು ಖಂಡಿತವಾಗಿಯೂ ನೆನಪನಲ್ಲಿ ಉಳಿಯುವಂತದ್ದು.
ಗೌತಮ್ ಗಂಭೀರ್ vs ಕಮ್ರಾನ್ ಅಕ್ಮಲ್
2010ರ ಏಷ್ಯಾಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಗೌತಮ್ ಗಂಭೀರ್ ಮತ್ತು ಕಮ್ರಾನ್ ಅಕ್ಮಲ್ ನಡುವಿನ ಮನಸ್ತಾಪ ಸಾಕಷ್ಟು ಚರ್ಚೆ ಮಾಡಿತ್ತು. ವಿಷಯವು ಸಾಕಷ್ಟು ಗಂಭೀರವಾದ ಕಾರಣ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರು ಆಟಗಾರರನ್ನು ಬೇರ್ಪಡಿಸಿದರು. ಕಮ್ರಾನ್ ಅಕ್ಮಲ್ ನಂತರ ಗಂಭೀರ್ ಜೊತೆಗಿನ ಜಗಳ ತಪ್ಪು ತಿಳುವಳಿಕೆಯಿಂದ ಉಂಟಾಗಿದೆ ಎಂದು ಒಪ್ಪಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications