ಫೆಬ್ರವರಿ 15 ರಂದು ಕ್ರಿಕೆಟ್ ಪ್ರೇಮಿಗಳಿಗೆ ಡಬಲ್ ಧಮಾಕಾ!
ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ರಿಕೆಟ್ ಅಂಗಳದಲ್ಲಿ ಯಾವ ಸರಣಿಯಲ್ಲಿ ಕಾದಾಟ ನಡೆಸಿದರೂ, ಹೈವೋಲ್ಟೇಜ್ ಇರುತ್ತದೆ. ಈ ಜಿದ್ದಾಜಿದ್ದಿನ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ವಿಶ್ವ ಕ್ರಿಕೆಟ್‌ನಲ್ಲಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತ-ಪಾಕ್ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಕಾದಾಟ ನಡೆಸುತ್ತಿಲ್ಲ. ಸಾಂಪ್ರದಾಯಿಕ ಎದುರಾಳಿಗಳು ಈಗ ಐಸಿಸಿ ಹಾಗೂ ಏಷ್ಯಾನ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಫೆಬ್ರವರಿ 15 ರಂದು ಒಂದೇ ದಿನದಂದು ಭಾರತ ಹಾಗೂ ಪಾಕ್ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಕಾದಾಟ ನಡೆಸಲಿವೆ. ಅಲ್ಲದೆ ಮತ್ತೊಂದು ಟೂರ್ನಿಯಲ್ಲೂ ಉಭಯ ತಂಡಗಳು ಕಾದಾಟ ನಡೆಸಲಿವೆ.
ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ಫೆಬ್ರವರಿ 7 ರಂದು ಆರಂಭವಾಗಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ತಟಸ್ಥ ಸ್ಥಳ ಆತಿಥ್ಯ ನೀಡಲಿದೆ. ಪಾಕ್ ಭಾರತ ಪ್ರವಾಸ ಬೆಳೆಸದ ಹಿನ್ನೆಲೆ, ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಭಾರತ ಹಾಗೂ ಪಾಕ್ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಫೆಬ್ರವರಿ 15 ರಂದು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಕೊಲಂಬೊದ ಆರ್.ಪ್ರೇಮದಾಸ್ ಮೈದಾನ ಆತಿಥ್ಯ ವಹಿಸಲಿದೆ. ಇದೇ ದಿನ ಭಾರತ ಹಾಗೂ ಪಾಕ್ ತಂಡಗಳು ಮತ್ತೊಂದು ಟೂರ್ನಿಯಲ್ಲಿ ಕಾದಾಟವನ್ನು ನಡೆಸಲಿವೆ.

ಭಾರತ ಹಾಗೂ ಪಾಕ್ ನಡುವಣ ಟಿ20 ಪಂದ್ಯ ಸಂಜೆ ನಡೆಯಲಿದೆ. ಇದಕ್ಕೂ ಮೊದಲು ಭಾರತ, ಪಾಕ್ ತಂಡಗಳು ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನಲ್ಲಿ ಕಾದಾಟ ನಡೆಸಲಿವೆ. ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ತನ್ನ ವೇಳಾಪಟ್ಟಿಯನ್ನು ಘೋಷಿಸಿದೆ. ಒಂದೇ ದಿನ ಸಾಂಪ್ರದಾಯಿಕ ಎದುರಾಳಿಗಳು ಎರಡು ಬಾರಿ ಮುಖಾಮುಖಿಯಾಗಲಿವೆ. ಆದರೆ ಎರಡೂ ತಂಡಗಳ ಸಮಯ ಬೇರೆ ಬೇರೆ ಆಗಿದ್ದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.
8 ತಂಡಗಳು ಭಾಗಿ
ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ರಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ, ನೇಪಾಳ ತಂಡಗಳು ಕಾದಾಟ ನಡೆಸಲಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮತ್ತು ಆತಿಥೇಯ ಥೈಲ್ಯಾಂಡ್ ತಂಡಗಳು ಸೇರಿವೆ.
ಭಾರತ ತಂಡದ ವೇಳಾಪಟ್ಟಿ
ಫೆ.13, ಯುಎಇ ವಿರುದ್ಧ ಮಧ್ಯಾಹ್ನ 12.30ಕ್ಕೆ
ಫೆ.15, ಪಾಕಿಸ್ತಾನ ವಿರುದ್ಧ, ಮಧ್ಯಾಹ್ನ 12.30ಕ್ಕೆ
ಫೆ.17, ನೇಪಾಳ ವಿರುದ್ಧ, ಮುಂಜಾನೆ 8.30ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications