For Quick Alerts
ALLOW NOTIFICATIONS  
For Daily Alerts
 

India vs Pakistan: ಈ ಕಾರಣಕ್ಕೆ ಬಾಬರ್ ಅಜಂ ನಿರ್ಧಾರ ಟೀಕಿಸಿದ ಮಾಜಿ ವೇಗಿ ಶೋಯೆಬ್ ಅಖ್ತರ್

ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, ಆಟವನ್ನು ಸ್ಥಗಿತಗೊಳಿಸಲಾಗಿದ್ದು, ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ.

ಭಾರತದ ಆರಂಭಿಕರಾದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರು 16.4 ಓವರ್‌ಗಳಲ್ಲಿ 121 ರನ್‌ಗಳ ಅತ್ಯುತ್ತಮ ಆರಂಭಿಕ ಜೊತೆಯಾಟ ನಿರ್ಮಿಸಿದ್ದರಿಂದ, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ನಿರ್ಧಾರವನ್ನು ಮಾಜಿ ವೇಗಿ ಶೋಯೆಬ್ ಅಖ್ತರ್ ಟೀಕಿಸಿದ್ದಾರೆ.

India vs Pakistan: Former Cricketer Shoaib Akhtar Criticizes Babar Azams Decision To Bowl First

ಮೊದಲ ವಿಕೆಟ್ ಜೊತೆಯಾಟದ ಸಮಯದಲ್ಲಿ ಭಾರತದ ಇಬ್ಬರೂ ಆರಂಭಿಕರು ವೈಯಕ್ತಿಕ ಅರ್ಧಶತಕ ಬಾರಿಸಿದರು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 50ನೇ ಅರ್ಧಶತಕ ಗಳಿಸಿದರೆ, ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 8ನೇ ಅರ್ಧಶತಕ ಬಾರಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ವಿರುದ್ಧ ಪ್ರಾಬಲ್ಯ ಸಾಧಿಸಿದರೆ, ಶಾಹೀನ್ ಅಫ್ರಿದಿ ಅವರ ಮೊದಲ ಮೂರು ಓವರ್‌ಗಳಲ್ಲಿ ಶುಭ್ಮನ್ ಗಿಲ್ ಆರು ಬೌಂಡರಿಗಳನ್ನು ಬಾರಿಸಿದರು.

India vs Pakistan: Former Cricketer Shoaib Akhtar Criticizes Babar Azams Decision To Bowl First

ಅಂತಿಮವಾಗಿ, 17ನೇ ಓವರ್‌ನಲ್ಲಿ ಶಾದಾಬ್ ಖಾನ್ ಅವರು ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯುವ ಮೂಲಕ ಆರಂಭಿಕ ಜೊತೆಯಾಟವನ್ನು ಮುರಿದರು. ಶಾಹೀನ್ ಅಫ್ರಿದಿ ನಂತರದ ಓವರ್‌ನಲ್ಲಿ ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಇನ್ನು ಮಳೆ ಬಂದು ಆಟ ನಿಂತಾಗ, ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಮಳೆಯ ಅಡಚಣೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ಭಾರತದ ಅದ್ಭುತ ಆರಂಭದ ನಂತರ ಮಳೆಯು ಪಾಕಿಸ್ತಾನದ ರಕ್ಷಣೆಗೆ ಧಾವಿಸಿದೆ ಎಂದು ಗಮನಸೆಳೆದರು.

"ಯೆಸ್, ಆಟ ಮತ್ತೆ ಪ್ರಾರಂಭವಾಗುವುದನ್ನು ನಾನು ನೋಡುತ್ತಿಲ್ಲ. ಕೊಲಂಬೊದ ಮಳೆಯು ಹುಚ್ಚವಾಗಿದೆ," ಎಂದು ಶೋಯೆಬ್ ಅಖ್ತರ್ ತಮ್ಮ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.

ಭಾನುವಾರದ ಪಂದ್ಯ ಮುಕ್ತಾಯಗೊಂಡು, ಮರುದಿನ ಪುನರಾರಂಭವಾಗಬಹುದು ಎಂದು ಶೋಯೆಬ್ ಅಖ್ತರ್ ಭರವಸೆ ವ್ಯಕ್ತಪಡಿಸಿದರು. ಮೊದಲು ಬೌಲಿಂಗ್ ಮಾಡುವ ಪಾಕಿಸ್ತಾನದ ನಿರ್ಧಾರವನ್ನು ಅವರು ಪ್ರಶ್ನಿಸಿದರು.

"ನಾನು ಪಂದ್ಯವನ್ನು ವೀಕ್ಷಿಸಲು ಬಂದಿದ್ದೇನೆ ಮತ್ತು ಭಾರತ ಮತ್ತು ಪಾಕಿಸ್ತಾನಿ ಅಭಿಮಾನಿಗಳೆಲ್ಲರೂ ಕಾಯುತ್ತಿದ್ದೇವೆ. ಮಳೆ ಪಾಕಿಸ್ತಾನ ತಂಡವನ್ನು ರಕ್ಷಿಸಿದೆ. ಕಳೆದ ಪಂದ್ಯದಲ್ಲಿ ಮಳೆಯು ಭಾರತವನ್ನು ಉಳಿಸಿತ್ತು, ಆದರೆ ಭಾನುವಾರದ ಮಳೆ ನಮ್ಮನ್ನು ಉಳಿಸಿದೆ," ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟರು.

Story first published: Sunday, September 10, 2023, 23:45 [IST]
Other articles published on Sep 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+