ಏಷ್ಯಾ ಕಪ್: ಗಾಯಕ್ಕೀಡಾದ ಹಾರ್ದಿಕ್ ಪಾಂಡ್ಯ ಮೈದಾನದಿಂದ ಹೊರಕ್ಕೆ

ದುಬೈ, ಸೆಪ್ಟೆಂಬರ್ 19: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೀಡಾಗಿ ಮೈದಾನದಿಂದ ಹೊರ ನಡೆದಿದ್ದಾರೆ. ಏಷ್ಯಾ ಕಪ್ 5ನೇ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದಾಗ ಪಾಂಡ್ಯ ಗಾಯಕ್ಕೊಳಗಾದರು.
ಏಷ್ಯಾ ಕಪ್ ನಲ್ಲಿ ಭಾರತ ತಂಡ ಹಾಂಕಾಂಗ್ ಎದುರು ಪಂದ್ಯವನ್ನಾಡಿದ್ದಾಗ ಪಾಂಡ್ಯ ತಂಡದಲ್ಲಿರಲಿಲ್ಲ. ಆದರೆ ಸೆಪ್ಟೆಂಬರ್ 19ರಂದು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ತಂಡ ಸೇರಿಕೊಂಡಿದ್ದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಿದ್ದ ಪಾಕಿಸ್ತಾನ ಇನ್ನಿಂಗ್ಸ್ ನ 18ನೇ ಓವರ್ ನಲ್ಲಿ ಪಾಂಡ್ಯ ಗಾಯಕ್ಕೀಡಾದರು.
18ನೇ ಓವರ್ ನಲ್ಲಿ ತನ್ನ ಐದನೇ ಓವರ್ ಎಸೆಯುತ್ತಿದ್ದ ಪಾಂಡ್ಯ ಸೊಂಟ ನೋವಿನಿಂದ ಕುಸಿದರು. 18ನೇ ಓವರ್ ನ 5ನೇ ಎಸೆತದ ವೇಳೆ ಸ್ನಾಯು ಸೆಳೆತ ರೀತಿಯ ನೋವನುಭವಿಸಿದ ಪಾಂಡ್ಯ ಅವರನ್ನು ವೈದ್ಯಕೀಯ ಸಿಬ್ಬಂದಿ ಮೈದಾನದಿಂದ ಹೊರ ಕರೆದೊಯ್ದರು.
'ಪಾಂಡ್ಯ ಅವರು ಸೊಂಟ ನೋವಿಗೆ ತುತ್ತಾಗಿದ್ದಾರೆ. ವೈದ್ಯಕೀಯ ಉಪಚಾರದ ವೇಳೆ ಹಾರ್ದಿಕ್ ಎದ್ದು ನಿಲ್ಲಲು ಸಾಧ್ಯವಾಗುವಷ್ಟು ಚೇತರಿಸಿಕೊಂಡಿದ್ದಾರೆ. ವೈದ್ಯಕೀಯ ಉಪಚಾರ ಮುಂದುವರೆದಿದೆ. ಪಾಂಡ್ಯ ಜಾಗವನ್ನು ಮನೀಶ್ ಪಾಂಡೆ ತುಂಬಿದ್ದಾರೆ' ಎಂದು ಬಿಸಿಸಿಐ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications