ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ನಾಲ್ವರ ಮೇಲೆ ಭಾರತೀಯ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಸೆಣೆಸಾಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಸಾಕಷ್ಟು ಸಿದ್ಧತೆಯೊಂದಿಗೆ ಬಾರತ ತಂಡ ಈ ಬಾರಿಯ ವಿಶ್ವಕಪ್‌ಗೆ ಆಗಮಿಸಿದ್ದು ಕಳೆದ ವರ್ಷದ ಕಹಿ ನೆನಪು ಅಳಿಸಿ ಹಾಕುವ ಪ್ರಯತ್ನ ನಡೆಸಲಿದೆ. ಹೀಗಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯದಿಂದಲೇ ಭಾರತ ತಂಡ ತನ್ನ ವಿಜಯಯಾತ್ರೆಯನ್ನು ಆರಂಭಿಸಬೇಕಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯವಂದರೆ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿರುತ್ತದೆ. ಪ್ರತಿ ಬಾರಿಯೂ ಈ ಸೆಣೆಸಾಟದಲ್ಲಿ ಮೇಲುಗೈ ಸಾಧಿಸಲು ಎರಡು ತಂಡಗಳ ಅಭಿಮಾನಿಗಳು ನಿರೀಕ್ಷಿಸುವುದು ಸಹಜ. ಅದರಲ್ಲೂ ಕಳೆದ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದ್ದ ಕಾರಣ ಈ ಬಾರಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರಗಳು ನಡೆಯುತ್ತಿದೆ. ಹೀಗಾಗಿ ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಈ ನಾಲ್ವರು ಆಟಗಾರರ ಮೇಲೆ ಭಾರತೀಯ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಏಷ್ಯಾ ಕಪ್‌ನಲ್ಲಿ ತಮ್ಮ ಫಾರ್ಮ್ ಕಂಡುಕೊಂಡಿದ್ದು ಉತ್ತಮ ಲಯದಲ್ಲಿದ್ದಾರೆ. ಬಳಿಕ ಆಡಿದ ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಅತ್ಯುತ್ತಮ ಲಯದಲ್ಲಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನದ ವಿರುದ್ಧ ಯಾವಾಗಲೂ ಅಬ್ಬರಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿಯೂ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟೀಮ್ ಇಂಡಿಯಾಗೆ ಪ್ರಬಲ ಶಕ್ತಿ ನೀಡುವ ಆತ್ಮವಿಶ್ವಾಸ ವಿರಾಟ್ ಕೊಹ್ಲಿ ಬಳಿಯೂ ಇದೆ. ಎಂದಿನಂತೆ ಈ ಬಾರಿಯೂ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಮಿಂಚಿನ ಪ್ರದರ್ಶನ ನೀಡುವ ವಿಶ್ವಾಸ ಅಭಿಮಾನಿಗಳಲ್ಲಿದೆ.

ಸೂರ್ಯಕುಮಾರ್ ಯಾದವ್
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಲು ಕಾರಣವಾದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್. ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟುವ ಸಾಮರ್ಥ್ಯವಿರುವ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಈ ಫಾರ್ಮ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಮುಂದುವರಿಯುವ ವಿಶ್ವಾಸ ಅಭಿಮಾನಿಗಳಿಗೆ ಇದೆ.

ಹಾರ್ದಿಕ್ ಪಾಂಡ್ಯ
ಕಳೆದ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ ಪ್ರದರ್ಶನದಲ್ಲಿ ಅದ್‌ಭುತ ಬದಲಾವನೆಗಳು ಆಗಿದೆ. ಬ್ಯಾಟಿಂಗ್ ಹಾಗೂ ಬೌಲೀಂಗ್ ಎರಡಯು ವಿಭಾಗದಲ್ಲಿಯೂ ತಂಡಕ್ಕೆ ಸಾಕಷ್ಟು ಅದ್ಭುತ ಕೊಡುಗೆ ನೀಡಿಕೊಂಡು ಬಂದಿದ್ದಾರೆ ಹಾರ್ದಿಕ್ ಪಾಂಡ್ಯ. ತಂಡದ ಅಗತ್ಯಕ್ಕೆ ತಕ್ಕನಾಗಿ ಪ್ರದರ್ಶನ ನೀಡುವ ಸಾಮರ್ಥ್ಯವೇ ಹಾರ್ದಿಕ್ ಪಾಂಡ್ಯ ಅವರ ದೊಡ್ಡ ಬಲವಾಗಿದೆ. ಬೌಲಿಂಗ್‌ನಲ್ಲಿಯೂ 140 ಕಿ.ಮೀ.ಗೂ ಅಧಿಕ ವೇಗದಲ್ಲಿ ದಾಳಿ ನಡೆಸಿ ಪಾಕ್ ಪಡೆಗೆ ಆಘಾತ ನೀಡುವ ಸಾಮರ್ಥ್ಯವನ್ನು ಹಾರ್ದಿಕ್ ಹೊಂದಿದ್ದಾರೆ. ಮೆಲ್ಬರ್ನ್‌ನ ಪಿಚ್‌ನ ಲಾಭವನ್ನು ಕೂಡ ಬಳಸಿಕೊಂಡು ಮ್ಯಾಚ್ ವಿನ್ನರ್ ಎನಿಸುವ ಅವಕಾಶ ಹಾರ್ದಿಕ್ ಪಾಂಡ್ಯಗೆ ಇದೆ.

ಮೊಹಮ್ಮದ್ ಶಮಿ
ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾದ ಜಸ್ಪ್ರೀತ್ ಬೂಮ್ರಾ ಈ ಬಾರಿಯ ಟಿ20 ವಿಶ್ವಕಪ್‌ಗೆ ಅಲಭ್ಯವಾದ ಕಾರಣ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಕೊಂಡ ಮೊಹಮ್ಮದ್ ಶಮಿ ತಂಡದ ಆತ್ವಿಶ್ವಾಸ ಹೆಚ್ಚಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಹ್ಮದ್ ಶಮಿ ಅಂತಿಮ ಓವರ್ ಎಸೆದು ಒತ್ತಡದ ಸಂದರ್ಭದಲ್ಲಿ ದಾಳಿ ನಡೆಸಿದ ರೀತಿ ನಿಜಕ್ಕೂ ಅಭಿಮಾನಿಗಳ ಭರವಸೆ ಹೆಚ್ಚಾಗಿದೆ. ಕಳೆದ ಐಪಿಎಲ್‌ನಲ್ಲಿಯೂ ಶಮಿ ನಿಖರವಾದ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದರು. ಹೀಗಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿಯೂ ಶಮಿ ಅವರಿಂದ ಅದ್ಭುತ ಪ್ರದರ್ಶನ ಬರುವ ನಿರೀಕ್ಷೆಯಿದೆ. ಈಗಾಗಲೇ ಆಸ್ಟ್ರೇಲಿಯಾಗೆ ಪ್ರವಾಸ ಮಾಡಿರುವ ಅನುಭವ ಕೂಡ ಮೊಹಮ್ಮದ್ ಶಮಿಗೆ ಇರುವುದು ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications