ಪಾಕ್‌ಗೆ ಶುರುವಾಗಿದೆ ಟೀಮ್ ಇಂಡಿಯಾದ ಈ ಪ್ಲೇಯರ್ ಭಯ: ಇಲ್ಲದೆ ಟ್ರೇಲರ್
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಪಂದ್ಯವನ್ನು ನೋಡಲು ಈಡೀ ವಿಶ್ವವೇ ಎದುರು ನೋಡ್ತಾ ಇದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ನಿಜಕ್ಕೂ ರೋಕಚತೆ ಹೆಚ್ಚಿಸಿದೆ. ಆದರೆ ಸದ್ಯದ ಭಾರತ ತಂಡ ನಿಜಕ್ಕೂ ಪಾಕ್ ಆಟಗಾರರಿಗೆ ಭಯ ಹುಟ್ಟಿಸಿದ್ದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಏನು? ಆ ಪ್ಲೇಯರ್ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರರು ತಂಡದಲ್ಲಿ ಇದ್ದಾರೆ. ಎದುರಾಳಿ ಬೌಲರ್‌ಗಳ ಲೈನ್ ಹಾಗೂ ಲೆಂಥ್ ಹಾಳು ಮಾಡಬಲ್ಲ ಬ್ಯಾಟರ್‌ಗಳು ಇದ್ದಾರೆ. ಭಾರತದ ಸ್ಟಾರ್ ಆಟಗಾರರ ಈಗೀನ ಫಾರ್ಮ್ ನಿಜಕ್ಕೂ ಪಾಕ್ ಆಟಗಾರರಿಗೆ ಭಯ ಹುಟ್ಟಿಸಿದೆ. ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಪಾಕ್ ಮಾಧ್ಯಮದಲ್ಲೂ ಸಾಕಷ್ಟು ಚರ್ಚೆಗಳು ನಡೆದಿವೆ. ಆ ಪ್ಲೇಯರ್ ಬೇರೆ ಯಾರೂ ಅಲ್ಲ, ಐಸಿಸಿ ಟಿ20 ಬ್ಯಾಟಿಂಗ್‌ನಲ್ಲಿ ನಂಬರ್ 1 ಸ್ಥಾನ ಪಡೆದಿರುವ ಅಭಿಷೇಕ್ ಶರ್ಮಾ.

ಏಷ್ಯಾ ಕಪ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಧಾಟಿ ಕಂಡು ಎದುರಾಳಿಗಳು ಬೆಚ್ಚಿ ಬಿದ್ದಿದ್ದಾರೆ. ಇದರ ತಾಜಾ ಉದಾಹರಣೆ ಈ ವಿಡಿಯೋದಲ್ಲಿದೆ. ಅಭಿಷೇಕ್ ಶರ್ಮಾ ಪಾಕಿಸ್ತಾನದ ತಲೆನೋವು ಎಂಬುದನ್ನು ಈ ವಿಡಿಯೋ ಟ್ರೇಲರ್ ರೂಪದಲ್ಲಿ ತೋರಿಸಿದೆ.
ಮಾಜಿ ಆಟಗಾರ ಹೇಳಿದ್ದೇನು?
ಏಷ್ಯಾ ಕಪ್‌ನಲ್ಲಿ ಭಾರತ, ಯುಎಇ ವಿರುದ್ಧ ಭರ್ಜರಿ 9 ವಿಕೆಟ್ ಜಯ ಸಾಧಿಸಿದ ನಂತರ, ಪಾಕ್ ಮಿಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾದವು. ಚರ್ಚಾ ಪ್ಯಾನಲ್‌ನಲ್ಲಿ ಹಾಜರಿದ್ದ ಅತಿಥಿಗಳಿಗೆ ನಿರೂಪಕಿ ಅಭಿಷೇಕ್ ಶರ್ಮಾ ಅವರ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಶೋಯಿಬ್ ಮಲಿಕ ಅಭಿಷೇಕ್ ಅವರ ಗುಣಗಾನ ಮಾಡಲು ಆರಂಭಿಸಿದರು. ಇವರು ಆಡಿದ 18 ಟಿ 20 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ 500ಕ್ಕೂ ಹೆಚ್ಚು ರನ್ ಬಾರಿಸಿದ್ದು, ಈ ವೇಳೆ ಇವರ ಸ್ಟ್ರೈಕ್ ರೇಟ್ 193 ಆಗಿದೆ ಎಂದು ತಿಳಿಸಿದರು. ಪಾಕ್ ಆಟಗಾರ ಏಕೆ ಈ ರೀತಿಯಾಗಿ ಆಡಲು ಸಾಧ್ಯವಿಲ್ಲ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕ್‌ನಲ್ಲಿ ಆತ್ಮವಿಶ್ವಾಸದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು. 2 ಪಂದ್ಯಗಳಲ್ಲಿ ರನ್ ಬಾರದೇ ಇದ್ದಾಗ ಮುಂದೇನು ಎಂಬ ಚಿಂತೆ ಕಾಡುತ್ತಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ಶೋಯಿನ್ ಮಲಿಕ್ ಪಾಕ್ ಕ್ರಿಕೆಟ್ ಮಂಡಳಿಯ ವಿರುದ್ಧ ಹರಿಹಾಯ್ದುರು. ನಮ್ಮದೇ ಕ್ರಿಕೆಟ್ ಮಂಡಳಿಯ ವ್ಯವಸ್ಥೆ ಸರಿಯಾಗಿಲ್ಲ. ಆಟಗಾರರನ್ನು ದಿಢೀರನೇ ಕೈ ಬಿಡಲಾಗುತ್ತಿದೆ. ಹೀಗೆ ಮಾಡುವುದರಿಂದ ನೀವು ಯಾವೊಬ್ಬ ಆಟಗಾರರನ್ನು ಸಿದ್ಧ ಪಡಿಸಲು ಸಾಧ್ಯವಿಲ್ಲ. ಪಾಕ್ ಆಟಗಾರರಿಗೆ ಎದುರಾಳಿ ಆಟಗಾರರ ವಿರುದ್ಧ ಅಂಗಳದಲ್ಲಿ ಹೋರಾಡುವುದಲ್ಲದೆ, ತಂಡದಿಂದ ಹೊರಗುಳಿಯುವ ಭಯ ಸಹ ಕಾಡುತ್ತದೆ ಎಂದು ಶೋಯಿಬ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications