India Vs Pakistan : ಪಾಕಿಸ್ತಾನದ ಬೌಲಿಂಗ್ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಪಾಕಿಸ್ತಾನ ವಿರುದ್ಧದ ಬಿಗ್ ಹಣಾಹಣಿಗೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರಮ್ ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಎಂಸಿಜಿಯಲ್ಲಿ ಭಾರತ ತಂಡಕ್ಕೆ ಪಾಕಿಸ್ತಾನದ ಬೌಲಿಂಗ್ ದೊಡ್ಡ ಸವಾಲಾಗಿದೆ ಎಂದು ರೋಹಿತ್ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಕೂಡ ಮಾತನಾಡಿರುವ ರೋಹಿತ್ ಶರ್ಮಾ, ಭಾನುವಾರ ಬೆಳಿಗ್ಗೆ ಹವಾಮಾನವನ್ನು ನೋಡಿಕೊಂಡು ನಂತರ ಪ್ಲೇಯಿಂಗ್ ಇಲೆವೆನ್ ಅಂತಿಮಗೊಳಿಸುವುದಾಗಿ ಹೇಳಿದರು. ಪ್ರತಿ ನಿಮಿಷಕ್ಕೂ ಹವಾಮಾನ ಬದಲಾಗುತ್ತಿದೆ. ನಾವು ನಾಳೆ ಬೆಳಿಗ್ಗೆ ನಮ್ಮ XI ಅನ್ನು ನಿರ್ಧರಿಸುತ್ತೇವೆ, ಕೊನೆಯ ಕ್ಷಣದವರೆಗೂ ಕಾಯಬೇಕು. ಎಲ್ಲಾ 15 ಆಟಗಾರರು ಆಯ್ಕೆಗೆ ಲಭ್ಯವಿರುತ್ತಾರೆ ಎಂದು ಹೇಳಿದರು.
ಪಾಕಿಸ್ತಾನದ ಬೌಲರ್‌ಗಳು ನಮಗೆ ಸವಾಲು ಹಾಕುತ್ತಾರೆ, ಆದರೆ ನಾವು ಸವಾಲನ್ನು ಎದುರಿಸುತ್ತೇವೆ. ನಾವು ಕಷ್ಟಪಟ್ಟು ಅಭ್ಯಾಸ ಮಾಡಿದ್ದೇವೆ. ಆತ್ಮವಿಶ್ವಾಸದಿಂದಲೇ ನಾವು ಸವಾಲಿನಲ್ಲಿ ಜಯ ಗಳಿಸುತ್ತೇವೆ ಎಂದು ಹೇಳಿದರು.
ನಾವು ಒತ್ತಡದಲ್ಲಿಲ್ಲ ಆದರೆ ಭಾರತಕ್ಕೆ ಉತ್ತಮ ಪ್ರದರ್ಶನ ನೀಡಿ ಐಸಿಸಿ ಟ್ರೋಫಿ ಗೆಲ್ಲುವುದು ದೊಡ್ಡ ಸವಾಲಾಗಿದೆ. ಭಾರತದಂತಹ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಟಿ20 ವಿಶ್ವಕಪ್ ನಮಗೆ ಉತ್ತಮ ಪ್ರದರ್ಶನ ನೀಡಲು ಮತ್ತು ದೇಶಕ್ಕಾಗಿ ಮತ್ತೊಂದು ಟ್ರೋಫಿ ಗೆಲ್ಲಲು ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಶಮಿ ಅತ್ಯಂತ ಅನುಭವಿ ಬೌಲರ್
ಮೊಹಮ್ಮದ್ ಶಮಿ ಸಿದ್ಧರಾಗಿದ್ದಾರೆ, ಅವರು ಅಭ್ಯಾಸದ ವೇಳೆ ಉತ್ತಮವಾಗಿದ್ದಾರೆ. ಅವರು ಅಭ್ಯಾಸ ಮಾಡುವುದನ್ನು ನೋಡುತ್ತೇವೆ. ಆತ ಅತ್ಯಂತ ಅನುಭವಿ ಬೌಲರ್ ಆಗಿದ್ದಾರೆ. ಗಾಯಗೊಂಡು ವಿಶ್ವಕಪ್‌ನಿಂದ ಹೊರಗುಳಿದಿರುವ ಬುಮ್ರಾ ಬದಲಿಗೆ ಉತ್ತಮ ಆಯ್ಕೆಯಾಗಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಐಪಿಎಲ್ ನಂತರ ಒಂದೇ ಒಂದು ಪಂದ್ಯವನ್ನಾಡ ಮೊಹಮ್ಮದ್ ಶಮಿ ತಂಡಕ್ಕೆ ಆಯ್ಕೆಯಾಗಿದ್ದರು. ಅವರ ಫಿಟ್ನೆಸ್ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿ, ಮೂರು ವಿಕೆಟ್ ಪಡೆಯುವ ಮೂಲಕ ಭಾರತ ಗೆಲ್ಲಲು ಕಾರಣವಾಗಿದ್ದರು.
ಏಷ್ಯಾಕಪ್ 2023: ಪಾಕ್‌ಗೆ ಪ್ರಯಾಣಿಸದ ಭಾರತದ ನಿಲುವಿನ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ

ಆಸ್ಟ್ರೇಲಿಯಾದ ದೊಡ್ಡ ಮೈದಾನಗಳು ಸವಾಲು
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವಾಗಾ ಯಾವಾಗಲೂ ಇಲ್ಲಿನ ದೊಡ್ಡ ಮೈದಾನಗಳು ಸವಾಲಾಗಿರುತ್ತವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಆಸ್ಟ್ರೇಲಿಯಾದ ಬಹುತೇಕ ಮೈದಾನಗಳು ದೊಡ್ಡ ಬೌಂಡರಿ ಹೊಂದಿವೆ, ಬ್ಯಾಟರ್ ಬೌಂಡರಿ ಗಳಿಸುವುದು ಸುಲಭವಾದ ವಿಚಾರವಲ್ಲ ಎಂದು ಅವರು ಹೇಳಿದರು.
ಮೆಲ್ಬೋರ್ನ್ ಹವಾಮಾನದಲ್ಲಿ ಪೂರ್ಣ 20 ಓವರ್‌ಗಳ ಪಂದ್ಯ ನಡೆಯಲೆಂದು ನಾನು ಪ್ರಾರ್ಥಿಸುತ್ತೇನೆ. ಆದರೆ ಪಂದ್ಯ ಕಡಿಮೆಯಾದರೂ ಅಥವಾ ಮೊಟಕುಗೊಂಡರೂ ನಾವು ಸಿದ್ಧರಾಗಿರುತ್ತೇವೆ. ಅಂತಹ ಸಂದರ್ಭಗಳಲ್ಲಿ ಟಾಸ್ ನಿರ್ಣಾಯಕವಾಗಬಹುದು ಎಂದು ರೋಹಿತ್ ಶರ್ಮಾ ಹೇಳಿದರು.
"ನಾವು ಸಿದ್ಧರಾಗಿರಬೇಕು. ಈ ವಿಷಯಗಳು ನಮ್ಮ ಕೈಯಲ್ಲಿಲ್ಲ. ಇದು 40 ಓವರ್‌ಗಳ ಪಂದ್ಯ ಎಂದು ಭಾವಿಸಿ ನಾವು ಬರುತ್ತೇವೆ ಮತ್ತು ಇಲ್ಲದಿದ್ದರೆ 20 ಓವರ್‌ಗಳ ಪಂದ್ಯಕ್ಕೂ ನಾವು ಸಿದ್ಧರಿದ್ದೇವೆ" ಎಂದು ರೋಹಿತ್ ಶರ್ಮಾ ಮಳೆಯಿಂದ ಮೊಟಕುಗೊಳಿಸುವ ಸಾಧ್ಯತೆಯ ಬಗ್ಗೆ ಹೇಳಿದರು.

ಇಲ್ಲಿನ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡಿದ್ದೇವೆ
ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ತಂಡದಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡಿದ್ದೇವೆ. ಕಳೆದ ಬಾರಿ ಪಾಕಿಸ್ತಾನದ ವಿರುದ್ಧ ನಾವು ಸೋತೆವು, ಅವರು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದರು. ಏಷ್ಯಾಕಪ್‌ನಲ್ಲಿ ಅವರು ನಮ್ಮನ್ನು ಸೋಲಿಸಿದರು ಮತ್ತು ನಾವು ಮೊದಲು ಒಂದು ಪಂದ್ಯದಲ್ಲಿ ಅವರನ್ನು ಸೋಲಿಸಿದ್ದೇವೆ. ಏಷ್ಯಾಕಪ್‌ನಲ್ಲಿ ಆಡಿರುವುದು ಅವರ ವಿರುದ್ಧ ತಂತ್ರ ರೂಪಿಸಲು ಸಹಾಯಕವಾಗಿದೆ ಎಂದು ಹೇಳಿದರು.
"ವಿಶ್ವಕಪ್ ಆರಂಭಕ್ಕೆ ಮುನ್ನ ನಾವು ಬೇಗನೆ ಹೋಗಬೇಕು ಎಂದು ತೀರ್ಮಾನಿಸಿದ್ದೆವು, ಅದರಂತೆ ಆಸ್ಟ್ರೇಲಿಯಾಗೆ ಬೇಗನೆ ಬಂದಿದ್ದೇವೆ. ಇಲ್ಲಿನ ಪರಿಸ್ಥಿತಿಗಳಿಗೆ ಎಲ್ಲಾ ಆಟಗಾರರು ಹೊಂದಿಕೊಂಡಿದ್ದಾರೆ." ಎಂದು ರೋಹಿತ್ ಶರ್ಮಾ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications