For Quick Alerts
ALLOW NOTIFICATIONS  
For Daily Alerts
 

IND vs PAK: ಭಾರತ, ಪಾಕಿಸ್ತಾನ ನಡುವಣ ಬಿಗ್‌ ಫೈಟ್‌: ನಡೆಯುವ ಸ್ಥಳ, ನೇರಪ್ರಸಾರದ ಬಗ್ಗೆ ಮಾಹಿತಿ

ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವೀಗ್ನತೆಯ ಬಳಿಕ ಉಭಯ ದೇಶಗಳ ನಡುವೆ ಕ್ರಿಕೆಟ್‌ ಪಂದ್ಯಗಳು ನಡೆದಿರಲಿಲ್ಲ. ಆಪರೇಷನ್‌ ಸಿಂಧೂರ್‌ ಬಳಿಕ ಎರಡು ರಾಷ್ಟ್ರಗಳು ಇದೇ ಮೊದಲ ಬಾರಿಗೆ ಕ್ರಿಕೆಟ್‌ ಮೈದಾನದಲ್ಲಿ ಕಾದಾಟ ನಡೆಸಲಿವೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್ ತಂಡ ಪಾಕಿಸ್ತಾನ ಚಾಂಪಿಯನ್ಸ್‌ ತಂಡಗಳು ಮುಖಾಮುಖಿ ಆಗಲಿವೆ.

ಭಾರತ ತಂಡವನ್ನು ಈ ಟೂರ್ನಿಯಲ್ಲಿ ಸಿಕ್ಸರ್‌ ಕಿಂಗ್‌ ಖ್ಯಾತಿಯ ಯುವರಾಜ್‌ ಸಿಂಗ್ ಮುನ್ನಡೆಸುತ್ತಿದ್ದಾರೆ. ಇನ್ನು ಪಾಕ್‌ ತಂಡವನ್ನು ದಿಗ್ಗಜ ಆಲ್‌ರೌಂಡರ್ ಶಾಹೀದ್ ಆಫ್ರೀದಿ ಮುನ್ನಡೆಸಲಿದ್ದಾರೆ. ಈಗಾಗಲೇ ವಿಶ್ವ ಲೆಜೆಂಡ್‌ ಚಾಂಪಿಯನ್‌ ಶಿಪ್‌ ಆರಂಭವಾಗಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಗೂ ಪಾಕ್‌ ತಂಡಗಳು ಕಾದಾಟ ನಡೆಲಿವೆ. ವೀಕೆಂಡ್‌ ಮೋಜನ್ನು ಹೆಚ್ಚಿಸಲು ಈ ಪಂದ್ಯ ಸಿದ್ಧವಾಗಿದೆ. ಈಗಾಗಲೇ ಪಾಕ್‌ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕ್‌ ತಂಡ 5 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಈಗ ಎರಡನೇ ಗೆಲುವಿನ ಹುಡುಕಾಟದಲ್ಲಿದೆ.

India vs Pakistan Legends Clash Yuvraj amp amp Afridi s Teams Battle for Bragging Rights

ಮೊದಲ ಪಂದ್ಯದಲ್ಲಿ ಪಾಕ್‌ ತಂಡದ ನಾಯಕ ಶಾಹೀದ್ ಆಫ್ರಿದಿ ಮೈದಾನಕ್ಕೆ ಇಳಿದಿರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾಗಳು ಆರಂಭವಾಗಿವೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಶಾಹೀದ್ ಆಫ್ರೀದಿ ಬದಲಿಗೆ ತಂಡವನ್ನು ಮೊಹಮ್ಮದ್ ಹಫೀಜ್‌ ಮುನ್ನಡೆಸಿದ್ದರು.

ಭಾರತ ತಂಡದಲ್ಲಿ ಯಾರೆಲ್ಲಾ ಆಟಗಾರರು ಇದ್ದಾರೆ?

ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಸುರೇಶ್ ರೈನಾ, ಗುರುಕೀರತ್ ಸಿಂಗ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಅಂಬಟಿ ರಾಯುಡು (ವಿಕೆಟ್ ಕೀಪರ್), ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಅಭಿಮನ್ಯು ಮಿಥುನ್, ಹರ್ಭಜನ್ ಸಿಂಗ್, ಪವನ್ ನೇಗಿ, ಪಿಯೂಷ್ ಚಾವ್ಲಾ, ಸಿದ್ಧಾರ್ಥ್ ಕಾವ್ಲಾ, ವಿನಯ್ ಕುಮಾರ್‌

ಪಾಕ್‌ ತಂಡದಲ್ಲಿ ಇರುವ ಆಟಗಾರರು ಯಾರು?

ಶಾಹಿದ್ ಅಫ್ರಿದಿ (ನಾಯಕ), ಮೊಹಮ್ಮದ್ ಹಫೀಜ್ ಶರ್ಜೀಲ್ ಖಾನ್, ಕಮ್ರಾನ್ ಅಕ್ಮಲ್, ಯೂನಿಸ್ ಖಾನ್, ಮಿಸ್ಬಾ-ಉಲ್-ಹಕ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಶೋಯೆಬ್ ಮಲಿಕ್, ಅಬ್ದುಲ್ ರಜಾಕ್, ವಹಾಬ್ ರಿಯಾಜ್, ಸಯೀದ್ ಅಜ್ಮಲ್, ಸೊಹೈಲ್ ತನ್ವಿರ್, ಸೊಹೈಲ್, ಯಾಸಿಫ್, ಸೊಹೈಲ್ ಮಸೂದ್, ಅಮೀರ್ ಯಮಿನ್.

ಭಾರತದಲ್ಲಿ ಹೇಗೆ ನೋಡಬಹುದು?

ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಈ ಪಂದ್ಯವನ್ನು ಉಚಿತವಾಗಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಫ್ಯಾನ್‌ ಕೋಡ್‌ ಮೂಲಕ ನೋಡಬಹುದಾಗಿದೆ.

India vs Pakistan Legends Clash Yuvraj amp amp Afridi s Teams Battle for Bragging Rights

ಎಷ್ಟು ಗಂಟೆಗೆ ಪಂದ್ಯ ಆರಂಭ?

ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 9ಕ್ಕೆ ಆರಂಭವಾಗಲಿದೆ.

ತಂಡದಲ್ಲಿ ಎಷ್ಟು ಕನ್ನಡಿಗರು ಇದ್ದಾರೆ?

ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಒಟ್ಟು ನಾಲ್ವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.

Story first published: Saturday, July 19, 2025, 19:53 [IST]
Other articles published on Jul 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+