For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್: ನಾಯಕ ರೋಹಿತ್ ಶರ್ಮಾ ಮುರಿದ 3 ಪ್ರಮುಖ ದಾಖಲೆಗಳಿದು

ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮತ್ತೊಂದು ಅಮೋಘ ಗೆಲುವು ಸಾಧಿಸಿದೆ. ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಅಜೇಯ ಗೆಲುವಿನ ಓಟವನ್ನು 8-0ಗೆ ಏರಿಸಿಕೊಂಡಿದೆ. ಟೀಮ್ ಇಂಡಿಯಾದ ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತ ಈ ಪಂದ್ಯವಲ್ಲಿ ಬರೊಬ್ಬರಿ 7 ವಿಕೆಟ್‌ಗಳ ಅಂತರದ ಸುಲಭ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಮೊದಲಿಗೆ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಪಾಕಿಸ್ತಾನ ತಂಡವನ್ನು 191 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಪಾಕಿಸ್ತಾನದ ಅಗ್ರ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತದ ಬೌಲಿಂಗ್ ದಾಳಿಗೆ ಪಾಕ್ ತಂಡ ಅನಿರೀಕ್ಷಿತ ಆಘಾತ ಅನುಭವಿಸಿ ಸುಲಭ ಸವಾಲನ್ನು ಮುಂದಿಟ್ಟಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಅಬ್ಬರದ ಪ್ರದರ್ಶನ ನಿಡುವ ಮೂಲಕ ಈ ಗುರಿಯನ್ನು ಮತ್ತಷ್ಟು ಸುಲಭವಾಗಿಸಿದರು.

India vs Pakistan match: Major cricket records broke by Captain Rohit Sharma

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 63 ಎಸೆಗತಗಳಲ್ಲಿ 86 ರನ್‌ಗಳನ್ನು ಕಲೆಹಾಕಿದರು. ಈ ಇನ್ನಿಂಗ್ಸ್‌ನಲ್ಇ 6 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಇದ್ದವು. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ 192 ರನ್‌ಗಳ ಗುರಿಯನ್ನು ಇನ್ನೂ 19.3 ಓವರ್‌ಗಳು ಬಾಕಿಯಿರುವಂತೆಯೇ ಮೆಟ್ಟಿ ನಿಲ್ಲಲು ಸಾಧ್ಯವಾಯಿತು.

ಈ ಭರ್ಜರಿ ಪ್ರದರ್ಶನದೊಂದಿಗೆ ನಾಯಕ ರೋಹಿತ್ ಶರ್ಮಾ ಹಲವು ದಾಖಳೆಗಳನ್ನು ಮುರಿದಿದ್ದಾರೆ. ರೋಹಿತ್ ಮುರಿದ ಮೂರು ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಬಾರಿಸಿ ದಾಖಲೆ

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬರೊಬ್ಬರಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅದರಲ್ಲೂ ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ರೋಹಿತ್ ನಿರ್ದಾಕ್ಷಿಣ್ಯವಾಗಿ ದಂಡಿಸಿದರು. ಈ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ. ಕ್ರಿಕೆಟ್ ಗೇಲ್ ಹಾಗೂ ಶಾಹೀದ್ ಅಫ್ರಿದಿ ಅವರನ್ನು ಒಳಗೊಂಡ ವಿಶೇಷ ಸಾಧಕರ ಪಟ್ಟಿಗೆ ರೋಹಿತ್ ಶರ್ಮಾ ಮೂರನೇ ಆಟಗಾರನಾಗಿ ಸೇರಿಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಎರಡನೇ ಭಾರತೀಯ

ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ 86 ರನ್‌ಗಳನ್ನು ಬಾರಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ ರೋಹಿತ್ ಶರ್ಮಾ. ಇನ್ನು ಒಟ್ಟಾರೆಯಾಗಿ ಈ ಸಾಧನೆ ಮಾಡಿದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕೇವಲ 20 ವಿಶ್ವಕಪ್ ಪಂದ್ಯಗಳಲ್ಲಿ 1195 ರನ್‌ಗಳನ್ನು ಗಳಿಸುವ ಮೂಲಕ ಈ ದಾಖಲೆ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ (2278 ರನ್), ರಿಕಿ ಪಾಂಟಿಂಗ್ (1743 ರನ್), ಕುಮಾರ ಸಂಗಕ್ಕಾರ (1532 ರನ್), ಬ್ರಿಯಾನ್ ಲಾರಾ (1225 ರನ್), ಎಬಿ ಡಿವಿಲಿಯರ್ಸ್ (1207 ರನ್) ಮತ್ತು ಶಕೀಬ್ ಅಲ್ ಹಸನ್ (1201 ರನ್) ಮಾತ್ರವೇ ರೋಹಿತ್ ಶರ್ಮಾಗಿಂತ ಮುಂದಿದ್ದಾರೆ.

ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ

ಇನ್ನು ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಬಾರಿಸಿದ 86 ರನ್ ಪಾಕಿಸ್ತಾನದ ವಿರುದ್ಧ ಭಾರತದ ನಾಯಕನೊಬ್ಬ ಗಳಿಸಿದ ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 2019ರ ವಿಶ್ವಕಪ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 77 ರನ್ ಬಾರಿಸಿದ್ದು ಭಾರತದ ನಾಯಕ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಬಾರಿಸಿದ ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿತ್ತು. ಆ ದಾಖಲೆಯೀಗ ರೋಹಿತ್ ಶರ್ಮಾ ಪಾಲಾಗಿದೆ.

Story first published: Saturday, October 14, 2023, 20:58 [IST]
Other articles published on Oct 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+