India vs Pakistan: ಇಮಾಮ್-ಉಲ್-ಹಕ್ ವಿಕೆಟ್ ಪಡೆಯಲು ಮಂತ್ರ ಜಪಿಸಿ ಯಶಸ್ಸು ಕಂಡ ಹಾರ್ದಿಕ್ ಪಾಂಡ್ಯ!
ಶನಿವಾರ, ಅಕ್ಟೋಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ.
120,000ಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಳ್ಳುವ ಬ್ಲಾಕ್‌ಬಸ್ಟರ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಇನ್ನು ಪಾಕಿಸ್ತಾನ ವಿರುದ್ಧ ಪಂದ್ಯದ 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ಪ್ರಮುಖ ಮುನ್ನಡೆಯನ್ನು ಒದಗಿಸಿ ಕೊಟ್ಟರು.

ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ ಅವರು ಸುಲಭವಾಗಿ ಬೌಂಡರಿ ಬಾರಿಸುತ್ತಿದ್ದರು ಮತ್ತು ಪ್ರವಾಸಿ ತಂಡವು ಆತಿಥೇಯ ತಂಡದ ವಿರುದ್ಧ ಉತ್ತಮ ಆರಂಭವನ್ನು ಪಡೆಯಲು ಸಹಾಯ ಮಾಡಿದರು.
13ನೇ ಓವರ್‌ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಹಾಫ್ ಕಟ್ಟರ್ ಎಸೆದರು, ಇದನ್ನು ಇಮಾಮ್-ಉಲ್-ಹಕ್ ಬೌಂಡರಿಗೆ ಅಟ್ಟಿದರು.
ಭಾರತೀಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಂತರ ಎಸೆತದ ಮೊದಲು, ಚೆಂಡಿನೊಂದಿಗೆ "ಮಂತ್ರ ಜಪಿಸಿದರು' ಮತ್ತು ಬ್ಯಾಟರ್‌ನಿಂದ ದೂರದಲ್ಲಿರುವ ಆಫ್ ಸ್ಟಂಪ್‌ನ ಹೊರಗೆ ಚೆಂಡನ್ನು ಪಿಚ್ ಮಾಡಿದರು.
ಮಾಮ್-ಉಲ್-ಹಕ್ ಡ್ರೈವ್ ಮಾಡಲು ಹೋದರು. ಆದರೆ, ಚೆಂಡು ಅವರ ಬ್ಯಾಟ್‌ನ ಅಂಚಿಗೆ ಸವರಿಕೊಂಡು ಹೋಗಿ ವಿಕೆಟ್-ಕೀಪರ್ ಕೆಎಲ್ ರಾಹುಲ್ ಅವರತ್ತ ಸಾಗಿತು. ಅದನ್ನು ಪಡೆಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.
ಹಾರ್ದಿಕ್ ಪಾಂಡ್ಯ ಅವರು 38 ಎಸೆತಗಳಲ್ಲಿ 6 ಬೌಂಡರಿ ಸಮೇತ 36 ರನ್ ಗಳಿಸಿದ್ದ ಪಾಕಿಸ್ತಾನ ಆರಂಭಿಕ ಬ್ಯಾಟರ್‌ನನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸುವ ಮೂಲಕ ಅನಿಮೇಟೆಡ್ ಸಂಭ್ರಮಾಚರಣೆಯಲ್ಲಿ ತೊಡಗಿದರು.
ರವೀಂದ್ರ ಜಡೇಜಾ ತಮ್ಮ ಮುಂದಿನ ಓವರ್‌ನಲ್ಲಿ ಮುಹಮ್ಮದ್ ರಿಜ್ವಾನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಮತ್ತೊಂದು ಮುನ್ನಡೆ ಒದಗಿಸಿದ್ದರು. ಆದರೆ, ಮೊಹಮ್ಮದ್ ರಿಜ್ವಾನ್ ರಿವ್ಯೂ ತೆಗೆದುಕೊಂಡರು. ರಿಪ್ಲೇನಲ್ಲಿ ಚೆಂಡು ವಿಕೆಟ್ ತಪ್ಪಿಸಿತ್ತು. ಹೀಗಾಗಿ ಅಂಪೈರ್‌ನ ಔಟ್ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕಾಯಿತು.
ಪಾಕಿಸ್ತಾನ ತಂಡ ಸದ್ಯ 30 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದು, ಸೌದ್ ಶಕೀಲ್ ಮತ್ತು ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications